ಗೋಣಿಕೊಪ್ಪಲು, ಫೆ. ೭: ಗೋಣಿಕೊಪ್ಪಲಿನ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಜೀವಶಾಸ್ತç ವಿಭಾಗದ ಉಪನ್ಯಾಸಕ, ಎಸ್. ರಘುನಾಥ್ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವು ಪಿಯುಸಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ಎದುರಾಗುತ್ತವೆ. ಇದನ್ನು ಯಶಸ್ವಿಯಾಗಿ ಎದುರಿಸಿದ್ದಲ್ಲಿ ಮುಂದಿನ ಭವಿಷ್ಯ ಉತ್ತಮವಾಗಿ ರೂಪುಗೊಳ್ಳಲು ಕಾರಣವಾಗಲಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ಪಿಯುಸಿ ಶಿಕ್ಷಣದ ಸಂದರ್ಭ ಮಾಡಬೇಕಾಗಿದೆ. ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಿ. ಹರೀಶ್ ತಾಮನ್ಕರ್, ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳು ಕಠಿಣ ಶ್ರಮದೊಂದಿಗೆ ಅಭ್ಯಾಸದಲ್ಲಿ ಭಾಗವಹಿಸಿರುವುದು ತಾವುಗಳು ಇಲ್ಲಿಯ ತನಕ ಎದುರಿಸಿರುವ ಪರೀಕ್ಷೆಗಳಿಂದ ಸಾಬೀತಾಗಿದೆ. ಮುಂದಿನ ದಿನದಲ್ಲಿ ಎದುರಾಗುವ ಪರೀಕ್ಷೆಯನ್ನು ಅತ್ಯಂತ ಧೈರ್ಯದಿಂದ ಎದುರಿಸಿ ತೇರ್ಗಡೆ ಹೊಂದಬೇಕು ಎಂದು ಕರೆ ನೀಡಿದರು.
ಶನನ್ಯ ಬೋಜಮ್ಮ, ಭೂಮಿಕ ನಂಜಮ್ಮ ಹಾಗೂ ರಾನ್ಯ ಚಂಗಪ್ಪ ತಮ್ಮ ಕಾಲೇಜಿನ ಅನುಭವಗಳನ್ನು ಹಂಚಿಕೊAಡರು. ವಿದ್ಯಾರ್ಥಿ ವೈಷ್ಣವಿ ಪ್ರಾರ್ಥಿಸಿ, ಶಾಹಿರ ನಿರೂಪಿಸಿ, ಶ್ರಾವ್ಯ ವಂದಿಸಿದರು.