ಕಳೆದ ೬ ತಿಂಗಳಿAದ ಇಡೀ ದೇಶದಾದ್ಯಂತ ಬರೀ ರಾಮ ಮಂತ್ರದ ಕಂಪು ಇಡೀ ದೇಶದಾದ್ಯಂತ ಪಸರಿಸಿತು. ಜನವರಿ ತಿಂಗಳು ಅಂತು ಇಡೀ ದೇಶ ರಾಮಮಯಾ ಕೇಸರಿಮಾಂiÀiವಾಗಿತ್ತು ಅಂದರೆ ಉತ್ಪೆçÃಕ್ಷೆ ಆಗದು. ಸಾಮಾಜಿಕ ಜಾಲ ತಾಣದಲ್ಲಿ, ದೃಶ್ಯ ಮಾಧ್ಯಮ ಪತ್ರಿಕೆಗಳಲ್ಲಿ ಗಾಳಿ, ಬೆಳಕು, ನೀರು ಕೂಡ ರಾಮಮಯಾವಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದೂ ವಿಶೇಷವಾಗಿತ್ತು. ಅದಕ್ಕಾಗಿ ಅವರು ಕಠಿಣ ವ್ರತ ಕೂಡ ಕೈಗೊಂಡಿದ್ದರು. ಅಲ್ಪ ಸ್ವಲ್ಪ ರಾಜಕೀಯ ಕೆಸರಾಟ ಬಿಟ್ಟರೆ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಯಾಯಿತು. ಭಾರತದಲ್ಲಿ ಹೊಸ ಇತಿಹಾಸ ನಿರ್ಮಾಣವಾಯಿತು. ಅದುವೇ ದಶಕಗಳ ಕಾಲ ಹಿಂದೂಗಳು ಹೋರಾಟ ನಡೆಸಿ ಕನಸು ಕಂಡಿದ್ದ ರಾಮಮಂದಿರದ ಅವರ ಕನಸು ಸಾಕಾರಗೊಂಡ ದಿನ.

೧೯೯೦ರ ಆಸುಪಾಸಿನಿಂದ ಶ್ರೀ ರಾಮಚಂದ್ರನನ್ನು ಭಾರತೀಯ ರಾಜಕೀಯ ಚದುರಂಗದಾಟದ ರಂಗದಲ್ಲಿ ಮುನ್ನಲೆಗೆ ತರಲಾಯಿತು. ಆಗ ತಾನೇ ರಾಜಕೀಯ ಚದುರಂಗದಾಟದಲ್ಲಿ ಮೆಲ್ಲನೇ ಕಾಲು ಇಡುತಿದ್ದ ಭಾರತೀಯ ಜನತಾ ಪಕ್ಷದ ಒಂದAಶ ಕಾರ್ಯಕ್ರಮವಾಯಿತು. ರಾಮಮಂದಿರ ನಿರ್ಮಾಣ, ಲಾಲ್ ಕೃಷ್ಣ ಅಡ್ವಾನಿ, ಮುರಳಿ ಮನೋಹರ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ಕರ್ನಾಟಕದಿಂದ ಯಡಿಯೂರಪ್ಪ ಸೇರಿ ಬಹುತೇಕ ಎಲ್ಲಾ ನಾಯಕರು ರಾಮಮಂದಿರ ನಿರ್ಮಾಣ ಹೋರಾಟದಲ್ಲಿ ಸಕ್ರಿಯವಾಗಿ ಪಾಲುಗೊಂಡಿದ್ದರು. ಹೀಗೆ ಹತ್ತು ಹಲವು ನಾಯಕರ ಹೋರಾಟ, ಅಡ್ವಾಣಿಯ ರಥ ಯಾತ್ರೆ, ಕರಸೇವೆ, ಇಟ್ಟಿಗೆ ಪೂಜೆ ಹೀಗೆ ನಡೆಸಿದ ನಿರಂತರ ಹೋರಾಟದ ಫಲವೇ ಇಂದು ರಾಮ ಮಂದಿರದ ಕನಸು ನನಸಾಗಲು ಕಾರಣವಾಯಿತು. ಇದರೊಡನೆ ಭಾರತಿಯ ಜನತಾ ಪಕ್ಷವು ರಾಮ ನಾಮದ ಬೆಂಬಲದಿAದ ಅನೇಕ ರಾಜ್ಯಗಳಲ್ಲಿ ಅಧಿಕಾರವನ್ನು ಅನುಭವಿಸಿತು. ಯಾವಾಗ ಅಧಿಕಾರದ ರುಚಿ ಸಿಕ್ಕಿತೊ ರಾಮ ಮಂದಿರದ ಯೋಜನೆ ನಿಧಾನವಾಗತೊಡಗಿತು. ಅದರೊಡನೆ ವಿಷಯವು ನ್ಯಾಯಾಲಯದ ಮುಂದೆ ಇದ್ದುದರಿಂದ ನಿರ್ಮಾಣ ಕಾರ್ಯಕ್ರಮ ವಿಳಂಬವಾಯಿತು. ಎಲ್ಲಾ ಅಡೆತಡೆ ದಾಟಿ ಜನವರಿ ೨೨ ರಂದು ಅಯೋಧ್ಯೆಯಲ್ಲಿ ಇತಿಹಾಸ ನಿರ್ಮಾಣವಾಯಿತು. ಅದಕ್ಕೆ ಮುನ್ನುಡಿಯನ್ನು ಮೋದಿ ಬರೆದರೂ, ಅದರ ಹಿಂದೆ ಸಾವಿರಾರು ಜನರ ಶ್ರಮ, ಬಲಿದಾನ, ತ್ಯಾಗ ಅದರಲ್ಲ್ಲೂ ಅಡ್ವಾಣಿಯ ಧೈರ್ಯ ಎಲ್ಲರೂ ತಲೆ ತೂಗುವಂತದ್ದು. ಬಿಜೆಪಿಯ ಹಿರಿಯ ನಾಯಕರು ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಿಂದ ದೂರ ಉಳಿದರೊ ದೂರವಿಟ್ಟರೊ ಎಂಬುದು ನಿಜವಾದ ರಾಮ ಭಕ್ತರಲ್ಲಿ, ಹಳೆಯ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಯಕ್ಷ ಪ್ರಶ್ನೆ ಆಗಿ ಉಳಿದಿದೆ. ರಾಮ ಭೂಮಿ ಜನ್ಮ ಭೂಮಿ ವಿವಾದ ಮಂದಿರ ನಿರ್ಮಾಣದೊಂದಿಗೆ ಹೊಸ ಶಕೆ ಆರಂಭವಾಯಿತು. ದೇಶದೆಲ್ಲೆಡೆ ರಾಮ ಕಂಪು ಪಸರಿಸಿತು. ಮುಂದಿನ ಕೆಲವು ದಿನಗಳವರೆಗೆ ಲಕ್ಷಾಂತರ ಭಕ್ತರು ರಾಮನ ಬಾಲರಾಮನ ದರ್ಶನ ಪಡೆದು ಪುನೀsತರಾಗುತಾರೆ. ಇಲ್ಲಿ ನಾವು ಚಿಂತನೆ ನಡೆಸಬೇಕಾಗಿದ್ದು ರಾಮ ಮಂದಿರದ ನಿರ್ಮಾಣದಿಂದ ಸಮಾಜದಲ್ಲಿ ಭಾರಿ ಬದಲಾವಣೆ ನಿರೀಕ್ಷಿಸಿದ್ದೆ. ಆದರೆ ನಮ್ಮ ಊಹೆ ತಪ್ಪು ಆಗುತ್ತೆ ಏಕೆಂದರೆ ಮಂದಿರ ನಿರ್ಮಾಣದ ಆರಂಭದಿAದ ಮುಕ್ತಾಯದವರೆಗೂ ರಾಜಕೀಯ ನಂಟು ಅಂಟಿಕೊAಡಿತು. ಪ್ರಾಣ ಪ್ರತಿಷ್ಠಾಪನೆಯಲ್ಲೂ ಮುಂದಿನ ಲೋಕಸಭಾ ಚುನಾವಣೆಯ ಕರಿ ನೆರಳು ಆವರಿಸಿದ್ದು ನಗ್ನ ಸತ್ಯ. ಪ್ರಾಣ ಪ್ರತಿಷ್ಠಾಪನೆ ನಂತರದ ರಾಜಕೀಯ ಬದಲಾವಣೆ. ಅದಕ್ಕೆ ಉದಾಹರಣೆ ನಮಗೆ ಇಲ್ಲಿ ಅದ್ದೂರಿ ಮತ್ತೆ ರಾಜಕೀಯ ಉದ್ದೇಶ ಎದ್ದು ಕಾಣುತ್ತದೆಯೇ ಹೊರತು ಶ್ರೀರಾಮ ಚಂದ್ರನ ಆದರ್ಶಗಳನ್ನು ಯಾರೂ ಪಾಲಿಸುವುದಿಲ್ಲವೇಕೆ? ಜನವರಿ ೨೨ ರಂದು ದೇಶದಾದ್ಯಂತ ಒಂದು ರೀತಿಯ ಸಂಚಲನ ಮೂಡಿಸಿತು. ಎಲ್ಲೆಂದರಲ್ಲಿ ಬಂಟಿAಗ್ಸ್ಗಳು, ಹೋಮ ಹವನಗಳು, ಅನ್ನದಾನ, ಪೂಜೆ ಪುರಸ್ಕಾರ ಒಂದು ರೀತಿಯಲ್ಲಿ ಸಾಮಾಜಿಕವಾಗಿ ನಾವು ಬದಲಾವಣೆ ತರುವಲ್ಲಿ ವಿಫಲವಾಯಿತು. ರಾಮನಾಮ ಜನರಲ್ಲಿ ಬದಲಾವಣೆ ತರಬೇಕಿತ್ತು. ಅದು ತರಲಿಲ್ಲ. ಜನರು ರಾಮನನ್ನು ಮಂದಿರದಲ್ಲಿ, ಬೀದಿಯಲ್ಲಿ ಇಟ್ಟರು ಹೊರತು ಮನೆಗೆ ತರಲಿಲ್ಲ. ಹಿಂದಿನ ಕಾಲದಲ್ಲಿ ಮನೆಯಲ್ಲಿ ಮಕ್ಕಳನ್ನು ಕೂರಿಸಿ ಸಾಮೂಹಿಕ ಪ್ರಾರ್ಥನೆ ಭಜನೆ ಮಾಡಿಸುತಿದ್ದರು. ಅಂದು ಮಕ್ಕಳಲ್ಲಿ ಒಂದು ರೀತಿಯ ಶಿಸ್ತು ಸಣ್ಣ ವಯಸ್ಸಿನಿಂದ ಬೆಳೆದು ಬಂದು ಕೊನೆವರೆಗೂ ಇರುತ್ತಿತ್ತು. ನಾಗರಿಕತೆ ಬೆಳೆದಂತೆ ಮಕ್ಕಳು ದೇವಸ್ಥಾನ ಹೋಗಲಿ ದೇವರನ್ನೆ ಮರೆಯುವ ಹಾಗೆ ಆಗಿದೆ. ಅದು ಅವರ ತಪ್ಪಲ್ಲ. ಈಗಿನ ವಿದ್ಯಾಭ್ಯಾಸದ ವ್ಯವಸ್ಥೆ ಹಾಗೆ ಇದೆ.

ಹಿಂದೂ ಧರ್ಮದಲ್ಲಿ ಹಿಂದೆ ವರ್ಷಕೊಮ್ಮೆ ದೇವರ ಉತ್ಸವ ನಡೆಯುತ್ತಿತ್ತು. ಅಂದು ಇಡಿ ಊರೇ ಸೇರಿ ಶ್ರದ್ಧೆ ಭಕ್ತಿ ತೋರುತ್ತಿತ್ತು. ಆಡಂಬರ ಇರಲಿಲ್ಲ. ಹಿಂದೆ ರಾಜಕೀಯ ಪಕ್ಷಗಳು ಬಡವರಿಗೆ ಹಾಗೂ ಕಾಲೋನಿಗಳಲ್ಲಿ ವಾಸಿಸುವ ನಿರ್ಗತಿಗರಿಗೆ ಚುನಾವಣೆ ಸಮಯದಲ್ಲಿ ಅಲ್ಪಸ್ವಲ್ಪ ಹಣ ನೀಡಿ ಅಭ್ಯಾಸ ಮಾಡಿದ್ದಾರೆ. ಈಗ ಎಲ್ಲಾ ವರ್ಗದ ಜನರೂ ಹಣ ನೀಡದಿದ್ದರೆ ಮತ ನೀಡುವುದಿಲ್ಲ. ಅಂದು ಅಧಿಕಾರ ಹಿಡಿಯುವ ಸಲುವಾಗಿ ಎಲ್ಲಾ ರಾಜಕೀಯ ಪಕ್ಷಗಳು ಹಣವನ್ನು ನೀಡುವ ಪರಿಪಾಠವನ್ನು ಬೆಳೆಸಿಕೊಂಡವು. ಆದರೆ ಇಂದು ಅದು ರಾಜಕೀಯ ಪಕ್ಷಕ್ಕೆ ಉರುಳಾಗಿದೆ. ಚುನಾವಣಾ ಸಮಯದಲ್ಲಿ ಯಾವ ರಾಮ ಪ್ರಭಾವ, ಆದರ್ಶವು ವಾಸ್ತವವಾಗಿ ಕಾರ್ಯರೂಪಕ್ಕೆ ಬರುವುದಿಲ್ಲ. ಆಧಾರದ ಮೇಲೆ ನಡೆಯುತ್ತದೆ. ಯುವಕರು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಇಂದು ವೈದ್ಯಕೀಯ ಸೇವೆಗಳಾಗಿ ಉಳಿದಿಲ್ಲ. ಇದೇ ರೀತಿ ಶಿಕ್ಷಣ ಕ್ಷೇತ್ರವು ಸೇವೆಗಳಾಗಿ ಉಳಿದಿಲ್ಲ. ಇದು ಕೂಡ ವ್ಯಾಪಾರೀಕರಣವಾಗಿದೆ. ಹೀಗೆ ಎಲ್ಲಾ ಕ್ಷೇತ್ರಗಳು ಲಾಭದ ಲೆಕ್ಕಾಚಾರದಲ್ಲಿ ನಡೆದಿದೆ. ಪರಿಸ್ಥಿತಿ ಹೀಗೆ ಇರುವಾಗ ನಮಗೇಕೆ ಬೇಕು ರಾಮನಾಮ, ರಾಮನ ಆದರ್ಶಗಳು.

ಹಬ್ಬ ಹರಿದಿನಗಳು ಆಡಂಬರವಿದೆ ಹೊರತು ಆಚರಣೆ ಇಲ್ಲ. ಹೀಗೆ ವಿಫಲತೆ ಕಂಡ ಧರ್ಮದ ಧ್ರುವೀಕರಣ. ಇಲ್ಲಿ ಉದ್ಭವಿಸುವ ಪ್ರಶ್ನೆ ಏನಂದ್ರೆ ನಿರೀಕ್ಷೆಗೂ ಮೀರಿ ಕಾಣಿಕೆ ರೂಪದಲ್ಲಿ ಬರತೊಡಗಿದೆ. ಇದು ಹೀಗೆ ಮುಂದುವರಿಯುವ ಎಲ್ಲಾ ಲಕ್ಷಣಗಳು ಇವೆ. ಈಗಾಗಲೇ ರತ್ನ ಖಚಿತ ಕಿರೀಟಗಳು, ಹಾರಗಳು, ಕೋಟಿಗಟ್ಟಲೆ ಹಣಗಳು ಹರಿದು ಬರತೊಡಗಿದೆ (ದೇಶದಲ್ಲಿ ಜನರ ಕಷ್ಟಕ್ಕೆ ಆಗದಿದ್ರು ದೇವರ ಹುಂಡಿಗೆ ಕೋಟಿಗಟ್ಟಲೆ ಹಣ ಸುರಿದು ತೃಪ್ತಿ ಪಟ್ಟು ಕೊಳ್ಳುತ್ತಾರೆ. ಹೀಗೆ ಬೀಳುವುದು ಬಹುತೇಕ ಕಪ್ಪು ಹಣ ಅಂತ ಬೇರೆ ಹೇಳಬೇಕಾಗಿಲ್ಲ) ಇದು ಹೀಗೆ ಮುಂದುವರಿದರೆ ಇಲ್ಲೂ ರಾಜಕೀಯ, ಭ್ರಷ್ಟಾಚಾರ ಆರಂಭವಾಗುತ್ತದೆ. ಇಂದು ನಮ್ಮಲ್ಲಿ ಬಡ ದೇವಸ್ಥಾನಗಳು ಬಿಟ್ಟರೆ ಬಹುತೇಕ ಶ್ರೀಮಂತ ದೇವಸ್ಥಾನಗಳು ದೇವರ ಮಂದಿರವಾಗಿ ಉಳಿದಿಲ್ಲ. ವ್ಯಾಪಾರ ಕೇಂದ್ರಗಳಾಗಿದೆ. ಆದ್ದರಿಂದ ಭಕ್ತರು ತಮ್ಮ ಅಂದ ಅಭಿಮಾನ ಬಿಟ್ಟು ಕಾಣಿಕೆಗಳನ್ನು ದೇವಸ್ಥಾನದ ಆಡಳಿತ ಮಂಡಳಿಗೇ ಅಥವಾ ಸಂಬAಧಪಟ್ಟ ಪ್ರಾಧಿಕಾರಕ್ಕೆ ನೀಡಿ ಅದಕ್ಕೆ ರಶೀದಿ ಪಡೆದರೆ ಅದು ಲೆಕ್ಕಕ್ಕೆ ಸಿಗುತ್ತದೆ. ತಾವು ದೇವತ ಕಾರ್ಯದಲ್ಲಿ ಭಾಗಿಯಾದ ತೃಪ್ತಿ ಸಿಗುತ್ತದೆ. ಇದನ್ನು ಏಕೆ ಬರೆದೇ ಅಂದ್ರೆ ಶ್ರೀ ರಾಮ ಮಂದಿರ ಬೇರೆ ದೇವಸ್ಥಾನಗಳಂತೆ ಅಲ್ಲ. ಇದರ ನಿರ್ಮಾಣ ಹಿಂದೆ ಶತಮಾನಗಳ ಕನಸ್ಸು ಇದೆ. ದಶಕಗಳ ಕಾಲದ ಹೋರಾಟವಿದೆ. ಕೋಟ್ಯಂತರ ಜನರ ಪರಿಶ್ರಮವಿದೆ. ಸಾವಿರಾರು ಜನರ ಪ್ರಾಣ ತ್ಯಾಗವಿದೆ. ಅನೇಕ ನಾಯಕರ ಧ್ಯೇಯವಿದೆ. ಎಲ್ಲಕ್ಕಿಂತ ಶ್ರೀ ರಾಮನ ಧ್ಯೇಯವಿದೆ, ಆದರ್ಶವಿದೆ. ಅದು ಜನರಿಗೆ ತಲುಪಿಸುವ ಕೇಂದ್ರವಾಗಬೇಕು. ಅದು ಬಿಟ್ಟು ಬರೀ ರಾಮ ನಾಮ ಜಪಿಸುವ ಕೇಂದ್ರವಾಗದೆ ಮಾನವ ಧರ್ಮ ಸಾರುವ ಕೇಂದ್ರವಾಗಲಿ.

- ಬಾಳೆಯಡ ಕಿಶನ್ ಪೂವಯ್ಯ, ವಕೀಲರು ಮತ್ತು ನೋಟರಿ, ಮಡಿಕೇರಿ. ಮೊ. ೯೪೪೮೮೯೯೫೫೪