ಪೊನ್ನಂಪೇಟೆ, ಫೆ. ೭: ಕಣ್ಣಿನ ಸಮಸ್ಯೆ ಇದ್ದ ಕಾರಣ ಕಣ್ಣಿನ ಶಸ್ತç ಚಿಕಿತ್ಸೆ ಮಾಡಿಸಿಕೊಂಡಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಳ್ಳಿಗಟ್ಟು ಒಕ್ಕೂಟದ ಪಿ.ಹೆಚ್.ಎಸ್. ಕಾಲೋನಿಯ ಧನ್ಯ ಸಂಘದ ಸದಸ್ಯ ಸೂರ ಅವರಿಗೆ ಆರೋಗ್ಯ ರಕ್ಷಾ ವಿಮೆ ಮೂಲಕ ರೂ. ೨೦ ಸಾವಿರ ರೂಪಾಯಿ ನೀಡಲಾಯಿತು. ಸೂರ ಅವರು ತಮ್ಮ ಸಂಘದ ಮೂಲಕ ೧೦೦ ರೂಪಾಯಿ ಆರೋಗ್ಯ ರಕ್ಷಾ ವಿಮೆ ಕಟ್ಟಿದ್ದರು. ವಿಮೆ ಕಂಪನಿಯಿAದ ಮಂಜೂರಾದ ರೂ. ೨೦ ಸಾವಿರ ರೂಪಾಯಿ ಚೆಕ್ ಅನ್ನು ಪೊನ್ನಂಪೇಟೆ ವಲಯ ಮೇಲ್ವಿಚಾರಕ ನರಸಿಂಹಮೂರ್ತಿ ಹಾಗೂ ಹಳ್ಳಿಗಟ್ಟು ಸೇವಾ ಪ್ರತಿನಿಧಿ ಮೋಸಿನ ವಿತರಿಸಿದರು.