ಅಮ್ಮತ್ತಿ, ಫೆ. ೭: ಅಮ್ಮತ್ತಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಜಾಗೃತಿ ಟ್ರಸ್ಟ್ ಹಾಗೂ ಸಿಸ್ಕೋ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳ ಕಲಿಕೆಗಾಗಿ ರೂ. ೩೦ ಸಾವಿರ ಮೌಲ್ಯದ ಕ್ರೀಡೋಪಕರಣಗಳು, ಧ್ವನಿವರ್ಧಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಿತು.
ಬೆಂಗಳೂರಿನ ಜಾಗೃತಿ ಟ್ರಸ್ಟ್ ಹಾಗೂ ಸಿಸ್ಕೋ ಸಂಸ್ಥೆಯ ೩೫ ಸ್ವಯಂ ಸೇವಕರ ತಂಡ ಶಾಲೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ಕ್ರೀಡೋಪಕರಣಗಳನ್ನು ನೀಡಿದಲ್ಲದೆ ಶಾಲೆಯ ಸುತ್ತಮುತ್ತಲಿನ ಕಾಡನ್ನು ಕಡಿದು ಸ್ವಚ್ಛಗೊಳಿಸಿ ಶಾಲಾ ವಠಾರದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು.
ನಂತರ ಪ್ರತಿ ತರಗತಿಯ ವಿದ್ಯಾರ್ಥಿಗಳಿಗೆ ಆಟೋಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಸಿಸ್ಕೋ ಸಂಸ್ಥೆಯ ಮುಖ್ಯಸ್ಥ ಅಮ್ಮತ್ತಿಯ ಮಚ್ಚಾರಂಡ ಅಯ್ಯಪ್ಪ, ಸಂಪತ್ ಬಾನಂಡ, ಪವನ್, ಪ್ರಶಾಂತ್, ಜಾಗೃತಿ ಟ್ರಸ್ಟ್ನ ಆಡಳಿತ ಅಧಿಕಾರಿ ಆರ್. ಕಣ್ಣನ್, ಖಜಾಂಚಿಗಳಾದ ಕೊಂಡಿAಜಮ್ಮAಡ ಶರಣು, ಜಾಗೃತಿ ಟ್ರಸ್ಟ್ನ ಸಂಸ್ಥಾಪಕರು ಮತ್ತು ವ್ಯವಸ್ಥಾಪಕಿ ರೇಣು ಅಪ್ಪಚ್ಚು ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಎಸ್. ಸೋಮಕ್ಕ, ನಿವೃತ್ತ ಮುಖ್ಯ ಶಿಕ್ಷಕಿ ಮಚ್ಚಾರಂಡ ಗಂಗಮ್ಮ, ಶಾಲಾ ಶಿಕ್ಷಕ ವೃಂದ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಇದ್ದರು.