ಮಡಿಕೇರಿ, ಫೆ. ೬: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ವಾರ್ಷಿಕೋತ್ಸವದಂದು ಕೇಂದ್ರೀಯ ವಿದ್ಯಾಲಯ ಕೊಡಗು ಶಾಲಾ ಆವರಣದಲ್ಲಿ, “ಪರಾಕ್ರಮ” ದಿವಸವನ್ನು ಆಚರಿಸಲಾಯಿತು. ಜವಾಹರ್ ನವೋದಯ ವಿದ್ಯಾಲಯ ಶಾಲೆಯ ಪ್ರಾಂಶುಪಾಲ ಪಂಕಜಾಕ್ಶನ್, ಡಿಡಿಪಿಐ ಸದಾಶಿವಯ್ಯ, ಚಿತ್ರಕಲಾ ಶಿಕ್ಷಕ ನಾಗೇಶ್ ಉಪಸ್ಥಿತರಿದ್ದರು.

ಚಂದ್ರಯಾನ, ಭಾರತದ ಕ್ರೀಡಾ ಯಶಸ್ಸು, ವಿಕಾಸ್ ಭಾರತ್ ಇತ್ಯಾದಿ ವಿಷಯಗಳ ಮೇಲೆ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕೊಡಗು ಜಿಲ್ಲೆಯ ಕೇಂದ್ರೀಯ ವಿದ್ಯಾಲಯ, ಜವಾಹರ್ ನವೋದಯ ವಿದ್ಯಾಲಯ, ರಾಜ್ಯ ಸರ್ಕಾರ, ಅಃSಇ ಮತ್ತು ಇತರ ಮಂಡಳಿಯ ಸಂಯೋಜಿತ ಶಾಲೆಗಳ ೧೦೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ೫ ಅತ್ಯುತ್ತಮ ಚಿತ್ರಗಳಿಗೆ ಪ್ರಮಾಣಪತ್ರ ಮತ್ತು ಸ್ವಾತಂತ್ರ‍್ಯ ಹೋರಾಟಗಾರರ ಕುರಿತಾದ ಪುಸ್ತಕಗಳು ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಇ-ಪ್ರಮಾಣ ಪತ್ರಗಳು ಮತ್ತು ಪರೀಕ್ಷಾ ವಾರಿಯರ್ ಪುಸ್ತಕವನ್ನು ನೀಡಲಾಯಿತು.