ಕಣಿವೆ, ಫೆ. ೬: ತಮ್ಮನ್ನು ಅತ್ಯಂತ ಆದರದಿಂದ ಪ್ರೀತಿ ಪ್ರೇಮಗಳನ್ನು ತುಂಬಿ ಸಾಕಿ ಸಲಹುತ್ತಿದ್ದ ತಮ್ಮೊಡೆಯ ಮೃತರಾದ ವಿಚಾರ ತಿಳಿದ ಶ್ವಾನವೊಂದು ದಿನವಿಡೀ ಅನ್ನಾಹಾರ ಹಾಗೂ ನೀರು ಸೇವಿಸದೇ ಪರಿತಪಿಸಿದ ಪ್ರಸಂಗ ಕೂಡಿಗೆ ಕೊಪ್ಪಲಿನಲ್ಲಿ ನಡೆದಿದೆ.
ಗ್ರಾಮದ ಕೆ.ಟಿ. ಕೃಷ್ಣ ಎಂಬವರ ೨೧ ರ ಪ್ರಾಯದ ಪುತ್ರ ಚಂದನ್ ಕಳೆದ ಮೂರು ದಿನಗಳ ಹಿಂದೆ ತನ್ನ ಮನೆಯಲ್ಲಿ ತಾನು ಮಲಗುತ್ತಿದ್ದ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ.
ಈತನ ಸಾವಿನ ವಿಚಾರ ತಿಳಿಯುತ್ತಿದ್ದಂತೆಯೇ ನೆರೆಹೊರೆಯವರು, ಬಂಧು ಬಳಗದವರು ಬಂದು ರೋಧಿಸುತ್ತಿದ್ದುದು ಕಂಡ ಈ ಶ್ವಾನಕ್ಕೆ ತನ್ನೊಡೆಯನ ಸಾವು ಇನ್ನಿಲ್ಲದ ಸಂಕಟ ತಂದಿತ್ತು.
ಮನುಷ್ಯರAತೆಯೇ ರೋಧಿಸುವುದು, ನಿಂತಲ್ಲಿ ನಿಲ್ಲಲಾರದೇ, ಕುಳಿತಲ್ಲಿ ಕೂರಲಾರದೇ ಅತ್ತಿಂದಿತ್ತ ಹೆಜ್ಜೆ ಹಾಕುತ್ತಾ ತಮ್ಮ ಮೂಕ ರೋಧನವನ್ನು ವ್ಯಕ್ತಪಡಿಸುತ್ತಿದ್ದ ಈ ಶ್ವಾನದ ಪರಿಯನ್ನು ಕಂಡ ಪ್ರತಿಯೊಬ್ಬರಿಗೂ ಅಯ್ಯೋ ಪಾಪ...! ಎಂದು ಪರಿತಾಪಪಡುವಷ್ಟು ಮನಸೋತಿದ್ದರು.
ಸಲಹಿದ ಚಂದನ್ ಜೊತೆಯೇ ಮಲಗುತ್ತಿದ್ದ ಶ್ವಾನ : ಮೃತ ಚಂದನ್ ಶ್ವಾನ ಊಟ ಮಾಡಿದ ಮೇಲೆಯೇ ಊಟ ಮಾಡುತ್ತಿದ್ದ. ತಾಯಿ ತನ್ನ ಮಗುವನ್ನು ಆರೈಕೆ ಮಾಡುವಷ್ಟೇ ಅಕ್ಕರೆಯಿಂದ ಸಾಕುತ್ತಿದ್ದನು.
ಈತ ಸಾವನ್ನಪ್ಪಿದ ಎರಡು ದಿನಗಳು ಕಳೆದರೂ ಕೂಡ ಶ್ವಾನಗಳ ಸಂಕಟ ತಣ್ಣಗಾಗಿಲ್ಲ. ಕ್ಷಣ ಕ್ಷಣಕ್ಕೂ ಮನೆಯೊಳಗೆಲ್ಲಾ ತನ್ನೊಡೆಯನನ್ನು ಹುಡುಕುವ ಯತ್ನ ಮಾಡುವ ಶ್ವಾನ ಆತ ಮಲಗುತ್ತಿದ್ದ ಕೋಣೆಗೆ ಹೋಗಿ ಮೇಲೆ ಕೆಳಗೆಲ್ಲಾ ನೋಡಿ ಘೀಳಿಡುತ್ತಿದೆ.
ಇದ್ದ ಏಕೈಕ ಸುಪುತ್ರ ವಯಸ್ಸಿಗೆ ಬಂದಿದ್ದ ಮೃತ ಚಂದನ್ ಅಗಲಿಕೆಯ ನೋವು ಸಹಿಸದೇ ಗೋಳಾಡಿ, ಬಳಲಿ ಹಾಸಿಗೆ ಬಿಟ್ಟು ಮೇಲೇಳದ ತಾಯಿ ರೇಣುಕಾ ಅವರ ಬಳಿಯೂ ತೆರಳುವ ಶ್ವಾನ ಎಲ್ಲಿ ಚಂದನ್....? ಎಲ್ಲಿ ನನ್ನೊಡೆಯ ಚಂದನ್...? ಎಂದು ತಮ್ಮದೇ ಆದ ಧಾಟಿಯಲ್ಲಿ ಕೇಳುತ್ತಿರುವಂತೆ ಭಾಸವಾಗುತ್ತಿದೆ.
ಮೃತ ಚಂದನ್ ಪ್ರಾಣಿ ಪ್ರಿಯನಾಗಿದ್ದ. ತನ್ನ ಮನೆಯೊಳಗೆ ಯಾವುದೆಲ್ಲಾ ಪ್ರಾಣಿ - ಪಕ್ಷಿಗಳನ್ನು ಸಾಕಬಹುದೋ ಅವೆಲ್ಲಾ ಪ್ರಾಣಿ ಪಕ್ಷಿಗಳನ್ನು ಈತ ಸಾಕಿ ಸಲಹಿದ್ದ. ಅಷ್ಟಕ್ಕೂ ಈ ಮೂಕ ಪ್ರಾಣಿಗಳ ಪೈಕಿ ಶ್ವಾನಗಳದ್ದೇ ಪ್ರಾಮುಖ್ಯತೆ. ಈ ಚಂದನ್ ಮನೆಯಿಂದ ಹೊರ ತೆರಳಿದರೆ ಮನೆಗೆ ಮರಳುವ ದಾರಿಯನ್ನೇ ಎದುರು ನೋಡುತ್ತಿದ್ದ ಶ್ವಾನಗಳಿಗೆ ಮರಳಿ ಬಾರದೂರಿಗೆ ಹೋದ ಚಂದನ್ನಿAದಾಗಿ ಶ್ವಾನಕ್ಕೆ ಬೇರೆ ದಾರಿಯೇ ಕಾಣದಾಗಿದೆ. ವರದಿ : ಕೆ.ಎಸ್.ಮೂರ್ತಿ