*ಗೋಣಿಕೊಪ್ಪ, ಫೆ. ೬: ಪಾನಮತ್ತನಾಗಿ ಕರ್ತವ್ಯನಿರತನಾಗಿದ್ದ ಪೊನ್ನಂಪೇಟೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಮಲ್ಲೇಶ್ ಅವರನ್ನು ಅಂಗನವಾಡಿ ಕಾರ್ಯಕರ್ತೆಯರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಪೊನ್ನಂಪೇಟೆ ಸಿಡಿಪಿಓ ಕಚೇರಿಯಲ್ಲಿ ಒಂಬತ್ತು ವರ್ತೂಲದ ಅಂಗನವಾಡಿ ಕಾರ್ಯಕರ್ತೆಯರು, ಸಂಘಟನೆಯ ಪದಾಧಿಕಾರಿಗಳು ಅಧಿಕಾರಿಯ ವಿರುದ್ಧ ಕಿಡಿ ಕಾರಿದರು.
ಅಂಗನವಾಡಿ ಕಡತಗಳನ್ನು ಪರಿಶೀಲಿಸಲು ಮತ್ತು ಸಹಿ ಹಾಕಲು ಅಧಿಕಾರಿ ಉಳಿದುಕೊಂಡಿರುವ ವೀರಾಜಪೇಟೆಯ ಲಾಡ್ಜ್ಗೆ ಕಾರ್ಯಕರ್ತೆಯರನ್ನು ಬರಹೇಳುತ್ತಾರೆ. ಈ ಮೂಲಕ ಮಹಿಳೆಯರನ್ನು ತುಚ್ಯವಾಗಿ ನಡೆಸಿಕೊಳ್ಳುತ್ತಿರುವ ಘಟನೆಗೆ ಅಸಮಾಧಾನ ವ್ಯಕ್ತಪಡಿಸಿದ ಕಾರ್ಯಕತೆÀðಯರು ತಕ್ಷಣವೇ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಈ ನಡೆಯ ಬಗ್ಗೆ ಅಧಿಕಾರಿಯ ವಿರುದ್ದ ಅಸಮಧಾನವನ್ನು ವ್ಯಕ್ತಪಡಿಸಿದರು.
ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಸುಮಿತ್ರ ನೇತೃತ್ವದಲ್ಲಿ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪದಾಧಿಕಾರಿಗಳು ಕಳೆದ ಎರಡು ತಿಂಗಳಿನಿAದ ಅಂಗನವಾಡಿ ಕಾರ್ಯಕತೆÀðಯರಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ. ಮೊಟ್ಟೆ ವಿತರಣೆಯು ನಡೆಯುತ್ತಿಲ್ಲ. ಪೌಷ್ಟಿಕ ಆಹಾರ ವಿತರಣೆಗೆ ಗುಣಮಟ್ಟದ ಆಹಾರವು ವಿತರಣೆಯಾಗುತ್ತಿಲ್ಲ. ಅಡುಗೆ ಅನಿಲದ ಸೌಲಭ್ಯವೂ ಒದಗುತ್ತಿಲ್ಲ, ಜೊತೆಗೆ ಮೊಬೈಲ್ಗಳ ಸಮಸ್ಯೆಯೂ ಕಾಡುತ್ತಿದೆ.
ಈ ಎಲ್ಲಾ ಸಮಸ್ಯೆಗಳಿದ್ದರೂ ಅಧಿಕಾರಿ ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತೆಯರು, ಅಧಿಕಾರಿಯೂ ಸರಿಯಾದ ಸಮಯಕ್ಕೆ ಕಚೇರಿಗೆ ಹಾಜರಾಗದೆ ಸರ್ಕಾರಿ ವಾಹನದಲ್ಲಿ ತೆರಳಿ ವೈನ್ಶಾಪ್ಗಳಲ್ಲಿ ಕುಳಿತು ಕಾಲಹರಣ ಮಾಡುತ್ತಿದ್ದಾರೆ. ಕಚೇರಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂದು ದೂರಿಕೊಂಡರು.
ಕಳೆದ ಎರಡು ತಿಂಗಳಿನಿAದ ತಾಲೂಕಿನಲ್ಲಿರುವ ಕಾರ್ಯಕತೆÀðಯರ ಸಮಸ್ಯೆಯನ್ನು ಬಗೆಹರಿಸಲು ಸಂಘಟನೆಯ ಮೂಲಕ ಮನವಿ ಸಲ್ಲಿಸಿದ್ದರೂ, ಸೂಕ್ತ ಸ್ಪಂದನ ದೊರೆಯುತ್ತಿಲ್ಲ. ಹೀಗಾಗಿ, ಪೊನ್ನಂಪೇಟೆ ತಾಲೂಕಿನ ಅಂಗನವಾಡಿ ಕೇಂದ್ರಗಳು ಶೂನ್ಯ ಸಾಧನೆಯನ್ನ ಕಂಡುಕೊAಡಿದೆ ಎಂದು ಕಾರ್ಯಕತೆÀðಯರು ವೇದನೆಯನ್ನು ವ್ಯಕ್ತಪಡಿಸಿದರು.
ಸರಿಯಾದ ಅಧಿಕಾರಿ ಇದ್ದಾಗ ಮಾತ್ರ ಇಲಾಖೆಯ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆದು ಪ್ರಗತಿಯನ್ನು ಕಾಣಲು ಸಾಧ್ಯವಾಗಬಲ್ಲದು. ಆದರೆ, ಕಾರ್ಯಕತೆÀðಯರ ಮತ್ತು ಇಲಾಖೆಗೆ ಸಂಬAಧಿಸಿದ ಕೇಂದ್ರಗಳ ಸಮಸ್ಯೆಗಳನ್ನ ಬಗೆಹರಿಸಲು ಅಧಿಕಾರಿ ಮುಂದಾಗುತ್ತಿಲ್ಲ. ಕಾರ್ಯಕರ್ತೆಯರಿಗೆ ವೇತನದ ವಿಚಾರವಾಗಿ ಉಡಾಫೆಯ ಉತ್ತರವನ್ನು ನೀಡುವ ಮೂಲಕ ನಿರ್ಲಕ್ಷ ಧೋರಣೆಯನ್ನ ಹೊಂದಿದ್ದಾರೆ ಎಂದು ಅಧಿಕಾರಿಯ ವಿರುದ್ಧ ಆರೋಪಗಳನ್ನ ಮಾಡಲಾಯಿತು. ಪ್ರತಿದಿನ ಕಚೇರಿಗೆ ಹಾಜರಾಗುವ ಸಂದರ್ಭ ಅಧಿಕಾರಿ ಪಾನಮತ್ತರಾಗಿ ಇರುತ್ತಾರೆ. ದಿನದ ಒಂದು ಗಂಟೆ ಕಾಲವು ಕಚೇರಿಯಲ್ಲಿ ಕರ್ತವ್ಯ ನಿರತರಾಗಿರುವುದಿಲ್ಲ. ಯಾವುದೇ ವಿಚಾರವನ್ನು ಪ್ರಸ್ತಾಪಿಸಲು ಮತ್ತು ಕಡತಗಳಿಗೆ ಸಹಿ ಹಾಕಲು ತೆರಳಿದರೆ ಕಚೇರಿಯಲ್ಲಿ ಅಧಿಕಾರಿಯೇ ಇರುವುದಿಲ್ಲ. ಅಧಿಕಾರಿಯ ಕಾರ್ಯವೈಖರಿಯ ಬಗ್ಗೆ ಪ್ರಶ್ನಿಸಿ ಆತನನ್ನು ತಕ್ಷಣವೇ ಅಮಾನತುಗೊಳಿಸಬೇಕು ಮತ್ತು ಉತ್ತಮ ಅಧಿಕಾರಿಯನ್ನ ನೇಮಿಸುವ ಮೂಲಕ ಈ ಭಾಗದ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಪಟ್ಟು ಹಿಡಿದು ತಕ್ಷಣವೇ ವೇತನವನ್ನು ನೀಡಲು ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಯ ನಿರ್ಲಕ್ಷ÷್ಯ ಕರ್ತವ್ಯದ ಬಗ್ಗೆ ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷ ಅಣ್ಣೀರ ಹರೀಶ್ ಹಾಗೂ ಸದಸ್ಯರುಗಳಲ್ಲಿ ದೂರಿಕೊಂಡರು.
ಕಾರ್ಯದರ್ಶಿಗಳಾದ ನಳಿನಾಕ್ಷಿ, ರಾಜೇಶ್ವರಿ ಮತ್ತು ಒಂಬತ್ತು ವರ್ತುಲದ ಪದಾಧಿಕಾರಿಗಳು ಇದ್ದರು. -ಎನ್.ಎನ್. ದಿನೇಶ್