ಕೂಡಿಗೆ, ಫೆ. ೫: ರಾಜ್ಯದಲ್ಲೇ ಪ್ರಥಮವಾಗಿ ಆರಂಭಗೊAಡ ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ ಬಾಲಕಿಯರ ವಸತಿ ಗೃಹ, ಮತ್ತು ಶಾಲೆಯ ಪುನರ್ ನಿರ್ಮಾಣದ ಕಾಮಗಾರಿಯು ಕ್ರೀಡಾಶಾಲೆಯಲ್ಲಿ ಆರಂಭಗೊAಡಿದೆ.

ಕ್ರೀಡಾ ಶಾಲೆಯ ಮುಖಾಂತರ ಬಾಲಕಿಯರ ವಸತಿ ಗೃಹ ತೀರ ಹಳೆದಾದ ಹಿನ್ನೆಲೆ ಮತ್ತು ಶಾಲೆಯ ನವೀಕರಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಂಬAಧಿಸಿದAತೆ ರಾಜ್ಯ ಯುವ ಸಬಲೀಕರಣ, ಮತ್ತು ಕ್ರೀಡಾ ಇಲಾಖೆಗೆ ಮನವಿಯನ್ನು ಸಲ್ಲಿಸಲಾಗಿತು. ಅದರನ್ವಯ ರಾಜ್ಯಮಟ್ಟದ ಅಧಿಕಾರಿಗಳು ಸಹ ಕೂಡಿಗೆ ಕ್ರೀಡಾ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಪರಿಶೀಲನೆ ನಡೆಸಿದರು. ಅದರ ಹಿನ್ನೆಲೆಯಲ್ಲಿ ರಾಜ್ಯಮಟ್ಟದಲ್ಲಿ ೮೫ ಲಕ್ಷ ರೂಗಳ ಟೆಂಡರ್ ಪ್ರಕ್ರಿಯೆಗಳು ನಡೆದು ಇದೀಗ ಕಾಮಗಾರಿಗಳು ಆರಂಭಗೊAಡಿವೆ.

ಈ ಸಂದರ್ಭದಲ್ಲಿ ಕ್ರೀಡಾಶಾಲೆಯ ಕ್ಷೇಮಾಪಾಲಕರು, ಪ್ರಬಾರ ಮುಖ್ಯೋಪಾಧ್ಯಾಯನಿ ಜಿ.ಎಸ್ ಸವಿತಾ ಸೇರಿದಂತೆ ಶಿಕ್ಷಕರ ವೃಂದ, ತರಬೇತಿದಾರರು ಹಾಜರಿದ್ದರು.