ಮಡಿಕೇರಿ, ಫೆ. ೫: ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಆಶ್ರಯದ ತಂದ್ - ಬೆಂದ್ ವೇದಿಕೆಯ ಮೂಲಕ ತಂದ್ - ಬೆಂದ್ ಸೇವೆ ಒದಗಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ನಿಟ್ಟಿನಲ್ಲಿ ಪ್ರತಿ ತಿಂಗಳ ೪ನೇ ಭಾನುವಾರದಂದು ಬೆಳಿಗ್ಗೆ ೧೦.೩೦ ರಿಂದ ಅಪರಾಹ್ನ ೧.೩೦ರ ತನಕ ತಂದ್ - ಬೆಂದ್ ವಿಭಾಗದ ಸದಸ್ಯರು ಕೊಡವ ಸಮಾಜದ ಕಚೇರಿಯಲ್ಲಿ ಲಭ್ಯವಿರುತ್ತಾರೆ. ಆಸಕ್ತ ವಧು - ವರರು, ಸಂಬAಧಿಕರು ಕಚೇರಿಗೆ ಆಗಮಿಸಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಮಾತುಕತೆಗೂ ಅವಕಾಶವಿದೆ. ಇದರೊಂದಿಗೆ ಕಳೆದ ಡಿಸೆಂಬರ್‌ನಲ್ಲಿ ಕನೆಕ್ಟಿಂಗ್ ಕೊಡವಾಸ್ ವತಿಯಿಂದ ಮಡಿಕೇರಿಯಲ್ಲಿ ಜರುಗಿದ ಗ್ಲೋಬಲ್ ಕೊಡವ ಸಮ್ಮಿಟ್ ಸಂದರ್ಭ ತೆರೆಯಲಾಗಿದ್ದ ಸ್ಟಾಲ್‌ನಲ್ಲಿ ಸುಮಾರು ೬೦ ರಷ್ಟು ಯುವಕ - ಯುವತಿಯರು ಹೆಸರು ನೋಂದಾಯಿಸಿಕೊAಡಿದ್ದು, ಇವರುಗಳು ಈ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೯೬೧೧೧೧೨೧೯೭ ಹಾಗೂ ೯೪೪೯೯೨೮೪೦೫ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.