ಮಡಿಕೇರಿ, ಫೆ. ೫ : ಅಂತರರಾಷ್ಟಿçÃಯ ಟೆನ್ನಿಸ್ ಜಗತ್ತಿನ ವರ್ಲ್ಡ್ ಕಪ್ ಎಂದೇ ಹೆಸರು ಪಡೆದಿರುವ ಟೆನ್ನಿಸ್ ಟೀಮ್ ಇವೆಂಟ್ ಆಗಿರುವ ಪ್ರತಿಷ್ಠಿತ ಡೇವಿಸ್ ಕಪ್ ನಲ್ಲಿ ಭಾರತವು ಪಾಕಿಸ್ತಾನ ತಂಡವನ್ನು ೪-೦ ರಿಂದ ಸೋಲಿಸಿ ವರ್ಲ್ಡ್ ಗ್ರೂಪ್ ೧ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು, ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ೨೮ ರ ಹರೆಯದ ಕೊಡಗಿನವರಾದ ಕಲಿಯಂಡ ನಿಕ್ಕಿ ಪೂಣಚ್ಚ ಅವರು ಕೂಡ ತಂಡದ ವಿಜಯಕ್ಕೆ ಕೈ ಜೋಡಿಸಿದ್ದಾರೆ.
೬೦ ವರ್ಷಗಳ ಬಳಿಕ ಭಾರತ ಡೇವಿಸ್ ಕಪ್ ತಂಡವು ಪಾಕಿಸ್ತಾನಕ್ಕೆ ತೆರಳಿದ್ದು, ಆತಿಥೇಯ ತಂಡವನ್ನು ಭಾನುವಾರ ೪ ಪಂದ್ಯಗಳಲ್ಲೂ ಸೋಲಿಸಿ ಡೇವಿಸ್ ಕಪ್ ನ ವರ್ಲ್ಡ್ ಗ್ರೂಪ್ ೧ ನಲ್ಲಿ ಸ್ಥಾನ ಪಡೆದುಕೊಂಡಿದೆ. ೪ ನೇ ಪಂದ್ಯವು ಸಿಂಗಲ್ಸ್ ವಿಭಾಗದಲ್ಲಿ ನಡೆದಿದ್ದು, ಕೊಡಗಿನ ಕಲಿಯಂಡ ನಿಕ್ಕಿ ಪೂಣಚ್ಚ ಅವರು ಎದುರಾಳಿ ಮಹಮ್ಮದ್ ಶೋಯಬ್
ಡೇವಿಸ್ ಕಪ್ನಲ್ಲಿ ಕೊಡಗಿನ ನಿಕ್ಕಿ ಪೂಣಚ್ಚ ಸಾಧನೆ
(ಮೊದಲ ಪುಟದಿಂದ) ಅವರನ್ನು ೬-೩, ೬-೪ರ ನೇರ ಸೆಟ್ಗಳಲ್ಲಿ ಮಣಿಸಿ ತಂಡದ ಗೆಲುವಿಗೆ ಸಹಕರಿಸಿದರು. ಡಬಲ್ಸ್ ವಿಭಾಗದಲ್ಲಿ ಭಾರತದ ಯುಕಿ ಬಾಂಬ್ರಿ - ಸಾಕೆತ್ ಮೈನೆನಿ ಜೋಡಿ ಗೆಲುವು ಸಾಧಿಸಿದ್ದು, ಸಿಂಗಲ್ಸ್ನಲ್ಲಿ ರಾಮ್ ಕುಮಾರ್ ರಾಮನಾಥಾನ್, ಎನ್ ಶ್ರೀರಾಮ್ ಬಾಲಾಜಿ ಹಾಗೂ ಮೊದಲ ಬಾರಿ ಡೇವಿಸ್ ಕಪ್ ಆಡುತ್ತಿರುವ ನಿಕ್ಕಿ ಪೂಣಚ್ಚ ಅವರು ಜಯ ಸಾಧಿಸಿದರು. ಬಿಬಿಎ ಪದವೀಧರರಾಗಿರುವ ನಿಕ್ಕಿ ಅವರು ಮೂಲತ ಕಕ್ಕಬ್ಬೆಯವರಾದ ಇದೀಗ ಆಂಧ್ರದ ಅನಂತಪುರ ದಲ್ಲಿ ನೆಲೆಸಿರುವ ಕಲಿಯಂಡ ಪೂಣಚ್ಚ ಹಾಗೂ ವೀಣಾ ದಂಪತಿಯ ಪುತ್ರ.