ವೀರಾಜಪೇಟೆ: ಫೆ. ೫: ವೀರಾಜಪೇಟೆ-ಸಿದ್ದಾಪುರ ಮುಖ್ಯರಸ್ತೆ ನಗರ ವ್ಯಾಪ್ತಿಯ ಸುಂಕದಕಟ್ಟೆ ಬಳಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. ೫೧ ಲಕ್ಷ ಅನುದಾನದಲ್ಲಿ ರಸ್ತೆ ಅಗಲೀಕರಣ ಮತ್ತು ಡಾಂಬರಿಕರಣಗೊAಡ ರಸ್ತೆಯನ್ನು ಶಾಸಕ ಎ. ಎಸ್. ಪೊನ್ನಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗುತ್ತಿಗೆದಾರರು ಯಾವುದೇ ಕಾಮಗಾರಿಗಳನ್ನು ನಡೆಸುವಾಗ ಸಮಯಕ್ಕೆ ಸರಿಯಾಗಿ ಉತ್ತಮ ರೀತಿಯಾಗಿ ಮಾಡಿ ಮುಗಿಸಬೇಕು. ಕಾಮಗಾರಿ ಕಳಪೆ ಆಗದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕಳೆದ ಎರಡು ತಿಂಗಳ ಹಿಂದೆ ಈ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿತ್ತು ಇಂದು ಉದ್ಘಾಟನೆ ಗೊಂಡಿದೆ. ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಹಂತ ಹಂತವಾಗಿ ನಡೆಸಲಾಗುವುದು ಎಂದರಲ್ಲದೆ ಜನರ ಅನುಕೂಲಕ್ಕಾಗಿ ನಮ್ಮ ಸರಕಾರ ಜನರ ಹಣದಿಂದ ಜನರಿಗೋಸ್ಕರ ಸೌಲಭ್ಯಗಳುಳ್ಳ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

ಈ ಸಂದರ್ಭ ಸ್ಥಳೀಯ ನಿವಾಸಿ ಕೆ.ಸಿ.ಶಭರಿಶ್ ಪ್ರಾಸ್ತಾವಿಕವಾಗಿ ಕಾಮಗಾರಿಗೆ ಭೂಮಿಪೂಜೆ ಮಾಡಲಾಗಿತ್ತು ಇಂದು ಉದ್ಘಾಟನೆ ಗೊಂಡಿದೆ. ಉಳಿದಿರುವ ಎಲ್ಲಾ ಕಾಮಗಾರಿಗಳನ್ನು ಹಂತ ಹಂತವಾಗಿ ನಡೆಸಲಾಗುವುದು ಎಂದರಲ್ಲದೆ ಜನರ ಅನುಕೂಲಕ್ಕಾಗಿ ನಮ್ಮ ಸರಕಾರ ಜನರ ಹಣದಿಂದ ಜನರಿಗೋಸ್ಕರ ಸೌಲಭ್ಯಗಳುಳ್ಳ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.

ಈ ಸಂದರ್ಭ ಸ್ಥಳೀಯ ನಿವಾಸಿ ಕೆ.ಸಿ.ಶಭರಿಶ್ ಪ್ರಾಸ್ತಾವಿಕವಾಗಿ