ಮಡಿಕೇರಿ, ಫೆ. ೪: ಮಡಿಕೇರಿಯ ಆಂಜನೇಯ ದೇವಾಲಯದಲ್ಲಿ ಇಂದು ‘ವೈಭವ' ಧಾರ್ಮಿಕ ತಂಡದಿAದ ೧೦೮ ನೇ ಪ್ರತಿ ರುದ್ರ ಪಠಣ ನಡೆಯಿತು. ಅರ್ಚಕ ಸಂತೋಷ್ ಭಟ್ ಅವರು ಶತ ರುದ್ರಾಭಿಷೇಕ ಪೂಜೆ ನೆರವೇರಿಸಿದರು. ಈ ಕಾರ್ಯಕ್ರಮದ ಮಹತ್ವದ ಕುರಿತು ಡಾ. ರಾಜಾರಾಂ ವಿವರಿಸಿದರು. ವೈಭವ ತಂಡದ ಆಯೋಜಕರಾದ ಜಿ.ಆರ್. ರವಿಶಂಕರ್, ಕೊಡಗು ಹವ್ಯಕ ವಲಯದ ಅಧ್ಯಕ್ಷ ಕುಮಾರ್ ಸುಬ್ರಮಣ್ಯ, ಕಾರ್ಯದರ್ಶಿ ಸಿ.ಕೆ. ಶ್ರೀಪತಿ ಮೊದಲಾದವರಿದ್ದರು.