ಕೂಡಿಗೆ, ಫೆ. ೫: ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆಯಿಂದ ಜಿಲ್ಲೆಯ ಮತ್ತು ಪಕ್ಕದ ಜಿಲ್ಲೆಗಳಾದ ಮೈಸೂರು, ಹಾಸನ ಜಿಲ್ಲೆಯ ಆರು ತಾಲೂಕು ವ್ಯಾಪ್ತಿಗಳಿಗೆ ಬೇಸಾಯಕ್ಕೆ ಸಂಬAಧಿಸಿದAತೆ ಎಡದಂಡೆ ಮತ್ತು ಬಲದಂಡೆಯ ಮೂಲಕ ನೀರನ್ನು ನಾಲೆಯ ಮೂಲಕ ಹರಿಸಲಾಗುತ್ತಿದೆ. ಆದರೆ ಅಣೆಕಟ್ಟೆಯ ಕಾಮಗಾರಿ ಪೂರ್ಣಗೊಂಡು ಮುಖ್ಯ ನಾಲೆಯಿಂದ ನೀರು ಹರಿಯುವ ಆರಂಭದಿAದ ಇದುವರೆಗೂ ಮುಖ್ಯ ನಾಲೆಯ ದುರಸ್ತಿ ಕಾಮಗಾರಿಗಳು ನಡೆಯದೆ, ನಾಲೆಯಲ್ಲಿ ಹೆಚ್ಚು ನೀರು ಸೋರಿಕೆ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಅನೇಕ ಕಡೆಗಳಿಂದ ತೊಡುಗಳ ಮೂಲಕ ನದಿಗೆ ನೀರು ಹರಿಯುತ್ತಿತ್ತು. ಇದರಿಂದಾಗಿ ಮುಖ್ಯ ನಾಲೆಯಲ್ಲಿ ನೀರಿನ ಹರಿಯುವಿಕೆ ಪ್ರಮಾಣವು ಕಡಿಮೆಯಾಗುತ್ತಿದ್ದ ಹಿನ್ನೆಲೆಯಲ್ಲಿ ೪೯ ಕೋಟಿ ವೆಚ್ಚದ ಕಾಮಗಾರಿಯ ಪ್ರಮುಖ ಕಾಮಗಾರಿಯಾದ ಮುಖ್ಯ ನಾಲೆ ಕಾಂಕ್ರೀಟೀಕರಣ ಇದೀಗ ಆರಂಭಗೊAಡಿದೆ.

ಹಾರಂಗಿ ಅಣೆಕಟ್ಟೆಯ ಮುಖ್ಯ ನಾಲೆಯ ಒಂದನೆಯ ತೂಬಿನಿಂದ ಆರನೇ ತೂಬಿನ ವರೆಗೆ ದುರಸ್ತಿ, ಮತ್ತು ಮುಖ್ಯ ನಾಲೆಯ ಮೇಲ್ಭಾಗದಲ್ಲಿ ರಸ್ತೆಯ ನಿರ್ಮಾಣ ಸೇರಿದಂತೆ ವಿವಿಧ ಭಾಗಗಳಲ್ಲಿ ಕಿರು ಸೇತುವೆ ನಿರ್ಮಾಣ, ಸೇರಿದಂತೆ ಮುಖ್ಯ ನಾಲೆಯ ಎರಡೂ ಬದಿಗಳಲ್ಲಿ ಕಾಂಕ್ರೀಟೀಕರಣ ಮತ್ತು ಮುಖ್ಯ ನಾಲೆಯು ಕಿರಿದಾದ ಸ್ಥಳಗಳಲ್ಲಿ ಬೆಟ್ಟ ಕುಸಿಯದ ಹಾಗೆ, ಆ ಸ್ಥಳದಲ್ಲಿ ಒಳಭಾಗದಲ್ಲಿ ನಾಲೆಯ ನಿರ್ಮಾಣ, ಅದೇ ಜಾಗದಲ್ಲಿ ಮೇಲ್ಭಾಗದಲ್ಲಿ ಸಂಪೂರ್ಣವಾಗಿ ಮುಚ್ಚುವಿಕೆಯ ಮೂಲಕ ನಾಲೆಯಲ್ಲಿ ನೀರು ಸರಾಗವಾಗಿ ಹರಿಯಲು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಕ್ರಿಯಾ ಯೋಜನೆ ಅನುಗುಣವಾಗಿ ಈಗಾಗಲೇ ಗುತ್ತಿಗೆದಾರ ಬೃಹತ್ ಕಾಮಗಾರಿ ಮಾದರಿಯ ಯೋಜನೆಯ ಅಡಿಯಲ್ಲಿ ನೂತನ ಕಾಂಕ್ರೀಟೀಕರಣದ ಹೊಸ ತಂತ್ರಜ್ಞಾನದ ಯಂತ್ರಗಳನ್ನು ಬಳಕೆ ಮಾಡಿಕೊಂಡು ಕಾಂಕ್ರೀಟ್ ಆರಂಭ ಮಾಡಲಾಗಿದೆ.

ಹಾರಂಗಿ ಅಚ್ಚುಕಟ್ಟು ಪ್ರದೇಶದ ಬಹುದಿನಗಳ ರೈತರ ಮತ್ತು ಈ ವ್ಯಾಪ್ತಿಯ ಗ್ರಾಮಸ್ಥರ ಬೇಡಿಕೆಯ ಅನುಗುಣವಾಗಿ ಕಳೆದ ವಾರ ಕಾಮಗಾರಿಗಳನ್ನು ಏಪ್ರಿಲ್ ತಿಂಗಳ ಒಳಗೆ ಮುಗಿಸುವಂತೆ ಮತ್ತು ಮುಂದಿನ ಬೇಸಾಯಕ್ಕೆ ಯಾವುದೇ ರೀತಿಯ ತೊಂದರೆಗಳನ್ನು ಮಾಡದಂತೆ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮೂರು ಗ್ರಾಮಗಳ ರೈತರು ಮನವಿಯನ್ನು ಸಲ್ಲಿಸಿದರು.

ಅದರನ್ವಯ ಕಾವೇರಿ ನೀರಾವರಿ ನಿಗಮದ ಮುಖೇನ ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆಗಳು ನಡೆದು, ಆಂಧ್ರಪ್ರದೇಶ ಅಮೃತ್ ಕನ್ಸ್ಟ್ರಕ್ಟ್÷್ಸ ಕಂಪನಿಯವರು ಟೆಂಡರ್ ಪಡೆದು ಈಗಾಗಲೇ ಹಾರಂಗಿಯ ಮುಖ್ಯ ನಾಲೆಯ ಮೇಲ್ಭಾಗದಲ್ಲಿ ಸಮೀಪದ ರೈತರು ಒತ್ತುವರಿ ಮಾಡಿಕೊಂಡಿದ ಜಾಗವನ್ನು ತೆರವುಗೊಳಿಸುವುದರ ಜೊತೆಗೆ ಮುಖ್ಯ ನಾಲೆಯಲ್ಲಿ ನೂತನ ಮಾದರಿಯ ಕಾಮಗಾರಿಯನ್ನು ಆರಂಭಿಸಿದ್ದಾರೆ.

ಈ ಸಾಲಿನಲ್ಲಿ ಕೊನೆಯ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡುವ ಎಲ್ಲಾ ಯೋಜನೆ ಅನುಗುಣವಾಗಿ ಕಾಮಗಾರಿಗಳು ಆರಂಭಗೊAಡಿವೆ ಎಂದು ಹಾರಂಗಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಇ. ಪುಟ್ಟಸ್ವಾಮಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕಾವೇರಿ ನೀರಾವರಿ ನಿಗಮದ ಹಾರಂಗಿ ನೀರಾವರಿ ಇಲಾಖೆಯ ಅಭಿಯಂತರ ಕೆ.ಕೆ. ರಘುಪತಿ, ಸಹಾಯಕ ಅಭಿಯಂತರ ದೇವೆಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಇ. ಪುಟ್ಟಸ್ವಾಮಿ, ಸೇರಿದಂತೆ ಸಹಾಯಕ ಇಂಜಿನಿಯರ್‌ಗಳು, ಗುತ್ತಿಗೆದಾರ ಹಾಜರಿದ್ದರು.

-ಕೆ.ಕೆ. ನಾಗರಾಜಶೆಟ್ಟಿ