ಸೋಮವಾರಪೇಟೆ, ಫೆ. ೫: ಸಮೀಪದ ಚೌಡ್ಲು ಹಾಗೂ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂವಿಧಾನ ಜಾಗೃತಿ ರಥ ಮೆರವಣಿಗೆ ಹಾಗೂ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ನಡೆಯಿತು. ಹಾನಗಲ್ಲು ಗ್ರಾಮ ಪಂಚಾಯಿತಿಗೆ ಆಗಮಿಸಿದ ರಥವನ್ನು ಕೂಡುರಸ್ತೆಯ ಬಳಿಯಲ್ಲಿ ಗ್ರಾ.ಪಂ. ವತಿಯಿಂದ ಸ್ವಾಗತಿಸಲಾಯಿತು. ನಂತರ ಗ್ರಾ.ಪಂ. ಆವರಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಯಶಾಂತ್ ಕುಮಾರ್ ವಹಿಸಿದ್ದರು. ಸಂವಿಧಾನದ ಮಹತ್ವದ ಬಗ್ಗೆ ದಸಂಸ ಮುಖಂಡ ಜಯಪ್ಪ ಹಾನಗಲ್ಲು ಹಾಗೂ ಶನಿವಾರಸಂತೆ ವಿಘ್ನೇಶ್ವರ ಪ್ರೌಢಶಾಲೆಯ ಜಯಕುಮಾರ್, ನೋಡಲ್ ಅಧಿಕಾರಿ ಡಾ. ಸತೀಶ್ ಕುಮಾರ್ ಅವರುಗಳು ವಿವರಿಸಿದರು.

ಕಾರ್ಯದರ್ಶಿ ವಸಂತ್ ಅವರು ಸವಿಧಾನದ ಪೀಠಿಕೆಯ ಪ್ರಮಾಣ ವಚನ ಬೋಧಿಸಿದರು. ಗ್ರಾ.ಪಂ. ಉಪಾಧ್ಯಕ್ಷೆ ರೇಣುಕ ವೆಂಕಟೇಶ್, ಸದಸ್ಯರುಗಳಾದ ಸುಶೀಲ ಹಾನಗಲ್, ಪ್ರಕಾಶ್, ರಘು ಉಪಸ್ಥಿತರಿದ್ದರು.

ಚೌಡ್ಲು ಗ್ರಾ.ಪಂ.ಗೆ ಆಗಮಿಸಿದ ರಥವನ್ನು ಆನೆಕೆರೆ ಬಳಿಯಿಂದ ಸ್ವಾಗತಿಸಲಾಯಿತು. ನಂತರ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಗೀತಾ ಶಶಿಕುಮಾರ್ ಸದಸ್ಯರುಗಳಾದ ಸುಶೀಲ ಹಾನಗಲ್, ಪ್ರಕಾಶ್, ರಘು ಉಪಸ್ಥಿತರಿದ್ದರು.

ಚೌಡ್ಲು ಗ್ರಾ.ಪಂ.ಗೆ ಆಗಮಿಸಿದ ರಥವನ್ನು ಆನೆಕೆರೆ ಬಳಿಯಿಂದ ಸ್ವಾಗತಿಸಲಾಯಿತು. ನಂತರ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಗೀತಾ ಶಶಿಕುಮಾರ್