ಕುಶಾಲನಗರ, ಫೆ. ೫: ದ್ವಿಚಕ್ರ ವಾಹನ ರಿಪೇರಿ ಮಾಡಿಸಲು ಬಂದಿದ್ದ ಗ್ರಾಹಕ ಮತ್ತು ಶೋರೂಂ ಮಾಲೀಕನ ನಡುವೆ ಮಾತಿನ ಚಕಮಕಿ ನಡೆದು ಮಾಲೀಕನಿಂದ ಇರಿತಕ್ಕೆ ಒಳಗಾಗಿ ಗ್ರಾಹಕ ತೀವ್ರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟ ಘಟನೆ ಕುಶಾಲನಗರದಲ್ಲಿ ನಡೆದಿದೆ. ಮಡಿಕೇರಿಯ ನಿವಾಸಿ ಸಾಜಿದ್(೨೩) ಎಂಬಾತ ಮೃತಪಟ್ಟ ವ್ಯಕ್ತಿ.
ಕುಶಾಲನಗರ ಮೈಸೂರು ರಸ್ತೆಯಲ್ಲಿರುವ ಕೊಡಗನ ಮೋಟಾರ್ಸ್ ಮಾಲೀಕ ಶ್ರೀನಿಧಿ ಸಾಜಿದ್ ಎದೆಗೆ ಚೂಪಾದ ಆಯುಧದಿಂದ ಇರಿದಿದ್ದು, ಗಂಭೀರ ಗಾಯಗೊಂಡ ಸಾಜಿದ್ನನ್ನು ಮೈಸೂರಿಗೆ ಚಿಕಿತ್ಸೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೋರೂಂನ ಕ್ಯಾಶ್ ಕೌಂಟರ್ನ ಮಾಲೀಕನ ಚೇರ್ನಲ್ಲಿ ಕುಳಿತಿದ್ದ ಸಾಜಿದ್ ಬಗ್ಗೆ ಮಾಲೀಕ ಶ್ರೀನಿಧಿ ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಕೃತ್ಯ ನಡೆದಿದೆ ಎನ್ನಲಾಗಿದೆ.
ಮೃತ ಸಾಜೀದ್ ಜೊತೆ ಬಂದ ಸಹಚರರು ಶೋರೂಮ್ ಮಾಲೀಕ ಶ್ರೀನಿಧಿ ಮೇಲೆ ಹಲ್ಲೆ ನಡೆಸಿರುವುದು ಈ ಘಟನೆ ವಿಕೋಪಕ್ಕೆ ತಿರುಗಲು ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶ್ರೀನಿಧಿಯನ್ನು ಬಂಧಿಸಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.