ಗೋಣಿಕೊಪ್ಪಲು, ಫೆ .೫ : ಗೋಣಿಕೊಪ್ಪಲುವಿನ ಲಯನ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಲಾಗುತ್ತಿರುವ ನೂತನ ಕಟ್ಟಡಕ್ಕೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಲಯನ್ಸ್ ಸಂಸ್ಥೆಯು ಅನೇಕ ಜನೋಪಯೋಗಿ ಕೆಲಸಗಳನ್ನು ನಿರ್ವಹಿಸುವ ಮೂಲಕ ರಾಷ್ಟಿçÃಯ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದೆ. ಇದೀಗ ಗೋಣಿಕೊಪ್ಪ ಪಟ್ಟಣದಲ್ಲಿ ಸಾರ್ವಜನಿಕರ ಸೇವೆಗಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಅಧ್ಯಕ್ಷ ಪೊನ್ನಿಮಾಡ ಲೋಕೇಶ್ ಮಾತನಾಡಿ ಲಯನ್ಸ್ ಕ್ಲಬ್ ಸುವರ್ಣ ಮಹೋತ್ಸವ ಪ್ರಯುಕ್ತ ಸಾರ್ವಜನಿಕರ ಸೇವೆಗಾಗಿ ಉತ್ತಮ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ. ನಿವೇಶನ ಖರೀದಿಸಲು ಟ್ರಸ್ಟ್ ವತಿಯಿಂದ ಲಕ್ಷಾಂತರ ಹಣವನ್ನು ವಿನಿಯೋಗಿಸಲಾಗಿದೆ ಎಂದರು.
ಭೂಮಿ ಪೂಜೆ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪ್ರಮೋದ್ ಗಣಪತಿ, ಸದಸ್ಯರಾದ ಧ್ಯಾನ್ ಸುಬ್ಬಯ್ಯ, ಬಿ.ಎನ್. ಪ್ರಕಾಶ್, ಮನ್ನಕ್ಕಮನೆ ಸೌಮ್ಯಬಾಲು, ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷರಾದ ಅಮ್ಮಂಡ ಚಿಣ್ಣಪ್ಪ, ಟ್ರಸ್ಟ್ ಅಧ್ಯಕ್ಷ ಪಾರುವಂಗಡ ಪೆಮ್ಮಯ್ಯ, ಉಪಾಧ್ಯಕ್ಷ ಪಟ್ಟಡ ಉತ್ತಯ್ಯ, ಕಾರ್ಯದರ್ಶಿ ಶರತ್ ದೇವಯ್ಯ, ಕ್ಲಬ್ನ ಮಾಜಿ ಅಧ್ಯಕ್ಷರಾದ ಜಮ್ಮಡ ಮಾದಪ್ಪ, ಕೊಡಂದೇರ ಸುಬ್ಬಯ್ಯ, ಮನ್ನಕ್ಕಮನೆ ಬಾಲಕೃಷ್ಣ, ಕೊಂಗAಡ ಸುಬ್ಬಯ್ಯ, ಕೊಂಗAಡ ಅಚ್ಚಯ್ಯ, ಪುತ್ತಮನೆ ಸ್ಮರಣ್, ಅಲ್ಲುಮಾಡ ಸುನಿಲ್, ಮದ್ರಿರ ಕರುಂಬಯ್ಯ, ಜಮ್ಮಡ ಮೋಹನ್, ಚೆಪ್ಪುಡೀರ ಅಪ್ಪಣ್ಣ ಸೇರಿದಂತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ತಿಮ್ಮಯ್ಯ, ಪ್ರಮುಖರಾದ ಕೊಲ್ಲಿರ ಗಯಾ, ಲಯನ್ಸ್ ಕ್ಲಬ್ ಸದಸ್ಯರು ಹಾಜರಿದ್ದರು.