ಶನಿವಾರಸಂತೆ, ಫೆ. ೫: ಕಾಫಿ ತೋಟವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಬೀಟೆ ಮತ್ತು ಹೊನ್ನೆ ಮರದ ನಾಟವನ್ನು ಶನಿವಾರಸಂತೆ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರೂರು ಗ್ರಾಮದ ಎಚ್.ಪಿ.ಮಲ್ಲೇಶ್ ಅವರ ಮೇಲೆ ಈ ಸಂಬAಧ ಮೊಕದ್ದಮೆ ದಾಖಲಾಗಿದೆ. ಆರೋಪಿ ಮೂದರವಳ್ಳಿ ಗ್ರಾಮದ ತಮ್ಮ ತೋಟದಲ್ಲಿ ಈ ಕೃತ್ಯ ಎಸಗಿದ್ದು ತಲೆ ಮರೆಸಿಕೊಂಡಿರುವುದಾಗಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಗಾನಶ್ರೀ ತಿಳಿಸಿದ್ದಾರೆ.
ಸೋಮವಾರಪೇಟೆ ತಾಲೂಕು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಸಂದರ್ಭ ಅಕ್ರಮ ದಾಸ್ತಾನು ಪತ್ತೆಯಾಗಿದೆ.
ವಿನಾಯಿತಿ ಇರುವ ಮರಗಳನ್ನು ಹೊರತುಪಡಿಸಿ, ಇನ್ನಾವುದೇ ಮರಗಳನ್ನು ತೆರವುಗೊಳಿಸಬೇಕಾದರೂ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ. ಅನುಮತಿ ಪಡೆಯದೆ ಕಡಿದರೆ ಅರಣ್ಯ ಕಾನೂನು ಉಲ್ಲಂಘನೆ ಸಂಬAಧ ಪ್ರಕರಣ ದಾಖಲಾಗುತ್ತದೆ ಎಂದು ಅರಣ್ಯಾಧಿಕಾರಿ ಗಾನಶ್ರೀ ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್, ಪ್ರಶಾಂತ್, ವನಪಾಲಕ ಜಯಕುಮಾರ್ ಪಾಲ್ಗೊಂಡಿದ್ದರು.