ಸಿದ್ದಾಪುರ, ಫೆ. ೫: ಶಾಸಕ ಎ.ಎಸ್. ಪೊನ್ನಣ್ಣ ಅವರು ಸುಮಾರು ಒಂದೂವರೆ ಕಿ.ಮೀ ನಡೆದುಕೊಂಡೇ ಕಕ್ಕಟ್ಟುಕಾಡು ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು.

ಗುಹ್ಯ ಗ್ರಾಮದ ಕಕ್ಕಟ್ಟುಕಾಡು ಎಂಬಲ್ಲಿ ಸುಮಾರು ೪೦ ಕುಟುಂಬಗಳು ವಾಸವಾಗಿದ್ದು, ಹಲವು ವರ್ಷಗಳಿಂದ ಸಿದ್ದಾಪುರ, ಫೆ. ೫: ಶಾಸಕ ಎ.ಎಸ್. ಪೊನ್ನಣ್ಣ ಅವರು ಸುಮಾರು ಒಂದೂವರೆ ಕಿ.ಮೀ ನಡೆದುಕೊಂಡೇ ಕಕ್ಕಟ್ಟುಕಾಡು ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು.

ಗುಹ್ಯ ಗ್ರಾಮದ ಕಕ್ಕಟ್ಟುಕಾಡು ಎಂಬಲ್ಲಿ ಸುಮಾರು ೪೦ ಕುಟುಂಬಗಳು ವಾಸವಾಗಿದ್ದು, ಹಲವು ವರ್ಷಗಳಿಂದ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ಶಾಸಕರ ಬಳಿ ಅಳಲನ್ನು ತೋಡಿಕೊಂಡರು.

ಈ ಸಂದರ್ಭ ಮಾತನಾಡಿದ ಗ್ರಾಮಸ್ಥ ಪಿ.ಕೆ.ಚಂದ್ರನ್, ಹಲವು ವರ್ಷಗಳಿಂದ ರಸ್ತೆ ಇಲ್ಲದೇ ಮಹಿಳೆಯರು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ಪಳನಿಸ್ವಾಮಿ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ, ಮುಖಂಡರಾದ ಎಂ.ಎಸ್. ವೆಂಕಟೇಶ್, ಎಂ.ಬಿ. ಜೋಯ್, ಆರ್.ಕೆ. ಸಲಾಂ, ಸೂರಜ್ ಹೊಸೂರು, ಗ್ರಾಮಸ್ಥರಾದ ಹನೀಫ, ಎನ್.ಮಣಿ, ರತಿ, ಪ್ರೀನ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.