ಶನಿವಾರಸಂತೆ, ಫೆ. ೫ : ಸಮೀಪದ ಕೊಡ್ಲಿಪೇಟೆ-ಸಕ ಲೇಶಪುರ ರಾಜ್ಯ ಹೆದ್ದಾ ರಿಯಲ್ಲಿ ಹಂಪಾಪುರ ಮತ್ತು ಕೆಲಕೊಡ್ಲಿ ಗ್ರಾಮ ಗಳನ್ನು ಸಂಪರ್ಕಿಸುವ ಕೂಡುರಸ್ತೆ ಬಳಿ ಭಾನು ವಾರ ಸಂಜೆ ಬೈಕ್ ಮತ್ತು ಕಾರಿನ ನಡುವೆ ಅಪಘಾತ ನಡೆದಿದೆ. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಸಂಪೂರ್ಣ ಜಖಂಗೊAಡಿದೆ.
ಹಾಸನ ಕಡೆಯಿಂದ ಕೊಡ್ಲಿಪೇಟೆ ಕಡೆಗೆ ಬರುತ್ತಿದ್ದ ಕಾರು ಹಾಗೂ ಕೊಡ್ಲಿಪೇಟೆಯಿಂದ ಹಾಸನ ಕಡೆಗೆ ಹೋಗುತ್ತಿದ್ದ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಚಿಕ್ಕಮಗಳೂರಿನ ರಿತೇಶ್ನ ಕಾಲಿಗೆ ತೀವ್ರವಾದ ಗಾಯವಾಗಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂಪಾಪುರ ಮತ್ತು ಕೆಲಕೊಡ್ಲಿ ಗ್ರಾಮಗಳನ್ನು ಸಂಪರ್ಕಿಸುವ ಕೂಡು ರಸ್ತೆ ಬಳಿ ಆಗಿಂದಾಗ್ಗೆ ಅಪಘಾತಗಳು ಸಂಭವಿಸುತ್ತಲೆ ಇರುತ್ತವೆ. ರಸ್ತೆಯ ಎರಡೂ ಕಡೆ ಉಬ್ಬು ನಿರ್ಮಿಸುವಂತೆ ಸಂಬAಧಿಸಿದವರಿಗೆ ಮನವಿ ಮಾಡಲಾಗಿತ್ತು. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮ ಸ್ಥರು ಅಳಲು ತೋಡಿಕೊಂಡಿದ್ದಾರೆ.