ಮಡಿಕೇರಿ, ಫೆ. ೪: ಮೈಸೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಹಾಲು ತುಂಬಿದ್ದ ಲಾರಿ ಜೋಡುಪಾಲ ಬಳಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.
ಮೈಸೂರಿನಿಂದ ಮಡಿಕೇರಿ ಮಾರ್ಗವಾಗಿ ಮಂಗಳೂರಿಗೆ ತೆರಳುತ್ತಿದ್ದಾಗ ಘಟನೆ ನಡೆದಿದ್ದು, ಚಾಲಕ ಹಾಗೂ ಕ್ಲಿನರ್ಗೆ ಸಣ್ಣಪುಟ್ಟ ಗಾಯಗಳಾಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿಯ ಟ್ಯಾಂಕರ್ನಲ್ಲಿ ತುಂಬಿದ್ದ ಹಾಲು ಸೋರಿಕೆಯಾಗಿ ಮಣ್ಣುಪಾಲಾಗಿದೆ. ಪಲ್ಟಿಯಾದ ವಾಹನವನ್ನು ಕ್ರೇನ್ ಮೂಲಕ ಮೇಲೆತ್ತಲಾಯಿತು.