ವೀರಾಜಪೇಟೆ, ಫೆ. ೪: ಗೂಡ್ಸ್ ಆಟೋ ಚಾಲಕ ಹಾರನ್ ಮಾಡಿದ್ದಕ್ಕೆ ಪಿಕಪ್ ಚಾಲಕ ಹಲ್ಲೆ ನಡೆಸಿರುವ ಘಟನೆ ವೀರಾಜ ಪೇಟೆಯಲ್ಲಿ ನಡೆದಿದೆ
ವೀರಾಜಪೇಟೆ ಪಟ್ಟಣದ ಮೋಹನ್ ಪೆಟ್ರೋಲ್ ಬಂಕ್ ಬಳಿ ಮುಖ್ಯ ರಸ್ತೆಯಲ್ಲಿ ಗೂಡ್ಸ್ ಆಟೋದಲ್ಲಿ ಹೆಚ್.ಪಿ. ಗ್ಯಾಸ್ ಸಿಲಿಂಡರ್ ತುಂಬಿಸಿಕೊAಡು
ಸಾಗುತ್ತಿದ್ದ ವಿತರಕ ಸೈಯ್ಯದ್ ರಫೀಕ್ ಎಂಬವರು ಹಾರನ್ ಮಾಡಿದ್ದು, ಮುಂದೆ ಪಿಕಪ್ ಚಲಾಯಿಸುತ್ತಿದ್ದ ಚಾಲಕ ನಿಶಾಂತ್ ಹಾರನ್ ಶಬ್ಧಕ್ಕೆ ಕೋಪಗೊಂಡು ಸೈಯ್ಯದ್ ರಫೀಕ್ ಮುಖಕ್ಕೆ ಬಲವಾಗಿ ಹಲ್ಲೆ ನಡೆಸಿದ್ದಾನೆ. ಗಾಯಾಳು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕೆತ್ಸೆ ಪಡೆದು ನಂತರ ನಿಶಾಂತ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.