ಮಡಿಕೇರಿ, ಫೆ. ೩ : ಕೊಡಗು ಜಿಲ್ಲೆಯ ೫ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಪ್ರಕಟಿಸಿರುವ ಹಿನ್ನೆಲೆ, ಬೆಳೆ ನಷ್ಟವಾಗಿರುವ ಕೃಷಿಕರಿಗೆ ಫ್ರೂಟ್ಸ್ ಆ್ಯಪ್ನಡಿ ನೋಂದಣಿ ಆಗಿರುವ ರೈತರಿಗೆ ಸರ್ಕಾರದ ಬೆಳೆ ನಷ್ಟ ಪರಿಹಾರವನ್ನು ನೇರವಾಗಿ ಪಾವತಿ ಮಾಡಿದ್ದು, ಈ ಸಂಬAಧ ತೊಂದರೆ ಇದ್ದಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದಿಂದ ಆರಂಭಿಸಲಾಗಿರುವ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಹಾಯವಾಣಿ ಕೇಂದ್ರ ಸಂಖ್ಯೆ ೦೮೨೭೨-೨೨೧೦೭೭, ಮಡಿಕೇರಿ ತಾಲೂಕು ಕಚೇರಿ ೦೮೨೭೨-೨೨೮೩೯೬, ಕುಶಾಲನಗರ ತಾಲೂಕು ಕಚೇರಿ ೦೮೨೭೬-೨೦೦೧೯೮, ಸೋಮವಾರಪೇಟೆ ತಾಲೂಕು ಕಚೇರಿ ೦೮೨೭೬-೨೮೨೦೪೫, ವೀರಾಜಪೇಟೆ ತಾಲೂಕು ಕಚೇರಿ ೦೮೨೭೪-೨೫೭೩೨೮ ಹಾಗೂ ಪೊನ್ನಂಪೇಟೆ ತಾಲೂಕು ಕಚೇರಿ ೦೮೨೭೪-೨೪೯೭೦೦ ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.