ವೀರಾಜಪೇಟೆ, ಫೆ. ೪: ಪಟ್ಟಣದ ಚಾಣಕ್ಯ ಕೋಚಿಂಗ್ ಸೆಂಟರ್ನ ಕ್ರೀಡಾ ದಿನಾಚರಣೆಯ ಅಂಗವಾಗಿ ನಡೆದ ಕ್ರೀಡಾಕೂಟದಲ್ಲಿ ಭಗತ್ ಸಿಂಗ್ ತಂಡವು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ಸಮೀಪದ ಐಮಂಗಲದಲ್ಲಿ ನಡೆದ ಕ್ರೀಡಾಕೂಟದಲ್ಲಿ ಚಂದ್ರಶೇಖರ್ ಅಜಾದ್ ತಂಡವು ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಕ್ರಿಕೆಟ್ ಫೈನಲ್ಸ್ನಲ್ಲಿ ಭಗತ್ ಸಿಂಗ್ ತಂಡವು ೧೯ ರನ್ಗಳಿಂದ ಚಂದ್ರಶೇಖರ್ ಅಜಾದ್ ತಂಡವನ್ನು ಮಣಿಸಿತ್ತು. ಮೊದಲು ಬ್ಯಾಟ್ ಮಾಡಿದ ಭಗತ್ ಸಿಂಗ್ ತಂಡವು ೭ ವಿಕೆಟ್ ನಷ್ಟಕ್ಕೆ ೫ ಓವರ್ಗಳಲ್ಲಿ ೬೨ ರನ್ ಗಳಿಸಿತ್ತು. ಗೆಲುವಿಗೆ ೬೩ ರನ್ಗಳ ಗುರಿ ಪಡೆದ ಚಂದ್ರಶೇಖರ್ ಅಜಾದ್ ತಂಡವು ನಿಗದಿತ ೫ ಓವರ್ಗಳಲ್ಲಿ ೫ ವಿಕೆಟ್ ಕಳೆದುಕೊಂಡು ೪೩ ರನ್ಗಳಿಸಲಷ್ಟೆ ಶಕ್ತವಾಯಿತು.
ಫುಟ್ಬಾಲ್ ಅಂತಿಮ ಪಂದ್ಯದಲ್ಲಿ ಭಗತ್ ಸಿಂಗ್ ತಂಡವು ೬-೧ ಗೋಲುಗಳಿಂದ ರಾಜ್ ಗುರು ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಕಬಡ್ಡಿ ಅಂತಿಮ ಪಂದ್ಯದಲ್ಲಿ ಭಗತ್ ಸಿಂಗ್ ತಂಡವು ಚಂದ್ರಶೇಖರ್ ಅಜಾದ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಭಗತ್ ಸಿಂಗ್ ತಂಡವು ೩೦ ಅಂಕ ಗಳಿಸಿದರೆ, ಚಂದ್ರಶೇಖರ್ ಅಜಾದ್ ತಂಡವು ೨೩ ಅಂಕ ಗಳಿಸಲಷ್ಟೆ ಶಕ್ತವಾಯಿತು.
ಬಾಲಕರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಚಂದ್ರಶೇಖರ್ ಅಜಾದ್ ತಂಡವು ರಾಜ್ ಗುರು ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಬಾಲಕಿಯರ ವಿಭಾಗದ ಹಗ್ಗಜಗ್ಗಾಟದಲ್ಲಿ ಸಿಮ್ರಿನ್ ನೇತೃತ್ವದ ರಾಜಗುರು ತಂಡ ಪ್ರಶಸ್ತಿ ಪಡೆದುಕೊಂಡರೆ, ಪರ್ಣಿಮಾ ನೇತೃತ್ವದ ಚಂದ್ರಶೇಖರ್ ಅಜಾದ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಬಾಲಕರ ಭಾರದ ಗುಂಡು ಎಸೆತ ಸ್ಪರ್ಧೆಯಲ್ಲಿ ಅಫ್ನಾಝ್ ಪ್ರಥಮ ಸ್ಥಾನ ಪಡೆದರೆ, ಜನೀಶ್ ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದ ಭಾರದ ಗುಂಡು ಎಸೆತದಲ್ಲಿ ಪೂರ್ಣಿಮ ಪ್ರಥಮ ಸ್ಥಾನ ಪಡೆದರೆ, ಸಿಮ್ರಿನ್ ದ್ವಿತೀಯ ಸ್ಥಾನ ಪಡೆದರು. ವಿಷದ ಚೆಂಡು ಸ್ಪರ್ಧೆಯಲ್ಲಿ ಪೂರ್ಣಿಮ ಪ್ರಥಮ ಸ್ಥಾನ ಪಡೆದರೆ, ತೇಜಸ್ ದ್ವಿತೀಯ ಸ್ಥಾನ ಪಡೆದರು. ೧೦೦ ಮೀ ಓಟದ ಸ್ಪರ್ಧೆಯಲ್ಲಿ ಲಕ್ಷಿö್ಮ ಪ್ರಥಮ ಸ್ಥಾನ ಪಡೆದರೆ, ತಾನಿಯ ದ್ವಿತೀಯ ಸ್ಥಾನವನ್ನು ಪಡೆದರು. ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಸಿಮ್ರಿನ್ ಪ್ರಥಮ ಸ್ಥಾನ ಹಾಗೂ ದ್ವಿತೀಯ ಸಿಯಾ ಗ್ಲೋರಿ ದ್ವಿತೀಯ ಸ್ಥಾನ ಪಡೆದರು.
ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿದ್ದ ವೀರಾಜಪೇಟೆಯ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿನೋದ್ ಕುಮಾರ್ ಆರ್. ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭ ಚಾಣಕ್ಯ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷೆ ಕವಿತಾ ಟಿ.ಎನ್., ಉಪನ್ಯಾಸಕರಾದ ಸುಬ್ಬಯ್ಯ, ರಮ್ಯ, ಮೋನಿಕಾ ಹಾಗೂ ಮತ್ತಿತರರು ಇದ್ದರು.