ಕೂಡಿಗೆ, ಫೆ. ೪: ಜಿಲ್ಲಾ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಡಯಟ್ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ತಾಲೂಕುಮಟ್ಟದ ನವಸಾಕ್ಷರರಿಗೆ ಪ್ರಮಾಣ ಪತ್ರವನ್ನು ವಿತರಿಸುವ ಕಾರ್ಯಕ್ರಮ ಕೂಡಿಗೆ ಡಯಟ್ ಸಭಾಂಗಣದಲ್ಲಿ ನಡೆಯಿತು.

ತಾಲೂಕಿನ ನವಸಾಕ್ಷರರಾದ ೧೫೫೬ ಮಂದಿಯಲ್ಲಿ ಸಾಂಕೇತಿಕವಾಗಿ ೫೦ ಮಂದಿಗೆ ಪ್ರಮಾಣ ಪತ್ರವನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ವಿತರಣೆ ಮಾಡಿ ಮಾತನಾಡಿ, ತಾಲೂಕಿನ ಅನಕ್ಷರಸ್ಥರಾದ ೨೦೦೪ ಮಂದಿಯಲ್ಲಿ ೧೫೫೬ ಮಂದಿಯನ್ನು ಅಕ್ಷರಸ್ಥರಾಗಿ ಮಾಡಿರುವುದು ಶ್ಲಾಘನೀಯ.

ಅಕ್ಷರತೆಯಲ್ಲಿ ವಯೋಮಿತಿಯಿಲ್ಲದೆ ವಯೊ Ãವೃದ್ಧರಿಗೆ ಕಲಿಕೆಯನ್ನು ಕಲಿಸುತ್ತಿರುವುದು ಉತ್ತಮವಾದ ಸಾಧನೆ ಕೆಲಸವಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಇಲಾಖೆಯ ಸಹಕಾರದೊಂದಿಗೆ ಶಿಕ್ಷಣದ ವ್ಯವಸ್ಥೆ ಮಾಡುತ್ತಿರುವುದರಿಂದ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಅಕ್ಷರತೆ ಪ್ರಮುಖವಾಗಿರುತ್ತದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ನೋಡಲ್ ಅಧಿಕಾರಿ ಮಾದೇವ್, ಡಯಟ್ ಉಪನ್ಯಾಸಕಿ ಶಶಿಕಲಾ, ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ಹೇಮಂತ್ ಕುಮಾರ್, ಕೂಡಿಗೆ ಕ್ಲಸ್ಟರ್ ಸಿ.ಆರ್.ಪಿ. ಶಾಂತ ಕುಮಾರ್, ಸೇರಿದಂತೆ ತಾಲೂಕಿನ ವಿವಿಧ ಶಾಲೆಯ ಮುಖ್ಯೋಪಾಧ್ಯಾಯರು, ಸಿ.ಆರ್.ಪಿ., ಶಿಕ್ಷಕರ ತಂಡ ಹಾಗೂ ಕೂಡಿಗೆ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ, ಆಶಾ ಕಾರ್ಯಕರ್ತರು, ನವಸಾಕ್ಷರರು ಹಾಜರಿದ್ದರು. ಶಾಂತಕುಮಾರ್ ಸ್ವಾಗತಿಸಿ, ಶಿಕ್ಷಕ ಮಧು ವಂದಿಸಿದರು.