ಮಡಿಕೇರಿ, ಫೆ. ೪: ಚಪ್ಪರ ಹಾಕಿದ ಮಂಟಪದಲ್ಲಿ ಸಿಂಗಾರ ಗೊಂಡು ನಿಂತಿದ್ದ ವಧು-ವರರು, ತಮ್ಮ ಮನೆಯ ಮದುವೆಯಂತೆ ಓಡಾಡುತ್ತಿದ್ದ ಗ್ರಾಮಸ್ಥರು, ಎಲ್ಲರಲ್ಲೂ ಸಂಭ್ರಮ, ಅರ್ಚಕರಿಂದ ಮೊಳಗಿದ ಮಂತ್ರಘೋಷಗಳು, ಮೇಳೈಸಿದ ನಾದಸ್ವರ, ಅಪರೂಪದ ವಿವಾಹ ಕಣ್ತುಂಬಿಕೊAಡ ಜನ..
ಹೌದು.. ಈ ದೃಶ್ಯಗಳು ಕಂಡುಬAದಿದ್ದು ಕಡಗದಾಳುವಿನಲ್ಲಿ ನಡೆದ ಅಪರೂಪದ ವಿವಾಹ ಕಾರ್ಯಕ್ರಮದಲ್ಲಿ. ದೇವರಸ್ಥಾನ ದಲ್ಲಿ ಪೂಜಿಸಲ್ಪಡುವ ವೃಕ್ಷರಾಜ ಅಶ್ವತ್ಥ ಮರ ಹಾಗೂ ನೆಲ್ಲಿಕಾಯಿ ಗಿಡಕ್ಕೂ ಕಡಗದಾಳು ಬೊಟ್ಲಪ್ಪ ಯುವಸಂಘ ವತಿಯಿಂದ ವಿವಾಹ ಕಾರ್ಯಕ್ರಮ ಶಾಸ್ತೊçÃಕ್ತವಾಗಿ ನೂರಾರು ಜನರ ಸಮ್ಮುಖದಲ್ಲಿ ನೆರವೇರಿತು.
ಹೆಣ್ಣು-ಗಂಡುವಿನ ನಡುವೆ ಮದುವೆ ನಡೆಯುವುದು ಸಾಮಾನ್ಯ. ಅದೇ ರೀತಿ ಬರ ಪರಿಸ್ಥಿತಿ ಎದುರಾ ದಾಗ ವರುಣನ ಕೃಪೆಗೆ ಕತ್ತೆ, ಕಪ್ಪೆಗೆ ಮದುವೆ ಮಾಡುವ ವಾಡಿಕೆಯೂ ನೋಡಿದ್ದೇವೆ. ಆದರೆ, ಮರ ಹಾಗೂ ಗಿಡಕ್ಕೆ ಮದುವೆ ನಡೆದಿರುವುದು ಅಪರೂಪಕ್ಕೆ ಅಪರೂಪ ಎನ್ನಬಹುದು.
ಯಾಕಾಗಿ ಆಚರಣೆ?
ವೃಕ್ಷಗಳ ರಾಜ, ಬ್ರಹ್ಮ, ವಿಷ್ಣು, ಮಹೇಶ್ವರ ನೆಲೆಸಿದ್ದಾರೆ ಎನ್ನುವ ಪ್ರತೀತಿ ಇರುವ ಅಶ್ವತ್ಥ ವೃಕ್ಷದ ವಿವಾಹ ಕಾರ್ಯಕ್ರಮ ಆಚರಣೆಯ ಹಿಂದೆ ಧಾರ್ಮಿಕ ಹಿನ್ನೆಲೆಯೊಂದಿಗೆ ವೈಜ್ಞಾನಿಕ ಕಾರಣವೂ ಅಡಗಿದೆ.
ಕಡಗದಾಳುವಿನಿಂದ ೩ ಕಿ.ಮೀ ದೂರದಲ್ಲಿ ೧೯೯೩ರಲ್ಲಿ ಸ್ಥಾಪನೆಯಾದ ಬೊಟ್ಲಪ್ಪ ಯುವ ಸಂಘ ೧೦ ವರ್ಷ ಪೂರೈಸಿದ ಸವಿನೆನಪಿಗೆ ೨೦೦೩ರಲ್ಲಿ ಯುವಸಂಘದ ಆವರಣದಲ್ಲಿ ಅಶ್ವತ್ಥ ಗಿಡವನ್ನು ನೆಡಲಾಗಿತ್ತು. ೨೦೧೨ರಲ್ಲಿ ಹಿರಿಯರ, ಧಾರ್ಮಿಕ ಪಂಡಿತರ ಸಲಹೆ ಮೇರೆಗೆ ಮರಕ್ಕೆ ಸಕಲ ಪೂಜೆಯೊಂದಿಗೆ ಉಪನಯನವನ್ನು ನಡೆಸಿ ಅಶ್ವತ್ಥ ಕಟ್ಟೆಯನ್ನು ನಿರ್ಮಿಸ ಲಾಗಿತ್ತು. ಉಪನಯನ ಮಾಡಿದವರು ಗಿಡ ೨೧ ವರ್ಷ ಪೂರೈಸಿದ ನಂತರ ವಿವಾಹ ಮಾಡಬೇಕೆಂದು ತಿಳಿಸಿ ದ್ದರು. ಇದರಿಂದ ಊರು ಉದ್ಧಾರ ವಾಗುತ್ತದೆ ಎಂಬ ನಂಬಿಕೆ ಇದೆ.
ಪುರಾಣಗಳಲ್ಲಿ ಅಶ್ವತ್ಥ ಮರದಲ್ಲಿ ದೇವಾನುದೇವತೆಗಳು ವಾಸಿಸುತ್ತಾರೆ ಎಂಬ ಉಲ್ಲೇಖವಿದೆ. ಜೊತೆಗೆ ಬ್ರಹ್ಮ, ವಿಷ್ಣು, ಮಹೇಶ್ವರರು ತಮ್ಮ ಮಡದಿಯರ ಮೇಲಿನ ಕೋಪದಿಂದ ಅಶ್ವತ್ಥ ಮರದಲ್ಲಿ ವಾಸಿಸುತ್ತಾರೆ ಎಂಬ ನಂಬಿಕೆಯೂ ಇದೆ. ಹಾಗಾಗಿ ಅಶ್ವತ್ಥ ಮರದ ಮದುವೆ ಮಾಡಿದರೆ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಯಿಂದ ಕರಾವಳಿ ಭಾಗದಲ್ಲಿ ಇಂತಹ ಆಚರಣೆಗಳನ್ನು ಹೆಚ್ಚಾಗಿ ಆಚರಿಸು ತ್ತಾರೆ. ಜಿಲ್ಲೆಯ ಕೆಲವೆಡೆಯೂ ಈ ರೀತಿ ಆಚರಣೆ ನಡೆದ ಬಗ್ಗೆ ಹಿರಿಯರು ಹೇಳುತ್ತಾರೆ.
ಇದರೊಂದಿಗೆ ಅಶ್ವತ್ಥ ವೃಕ್ಷ ಅತ್ಯಂತ ಹೆಚ್ಚಿನ ಆಕ್ಸಿಜನ್ ಬಿಡುಗಡೆ ಮಾಡುವುದರಿಂದ ಜನರ ಆರೋಗ್ಯಕ್ಕೆ ಪೂರಕವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ದೇವರ ಕಾಡುಗಳು, ದಕ್ಷಿಣ ಕನ್ನಡ ಭಾಗದಲ್ಲೂ ದೇವರ ಬನ ಮೂಲಕ ಧಾರ್ಮಿಕ ಹಿನ್ನೆಲೆ ಯೊಂದಿಗೆ ವನ್ಯಸಂಪತ್ತನ್ನು ತಲ ತಲಾಂತರಗಳಿAದ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಅದೇ ರೀತಿ ಈ ಕಾರ್ಯವೂ ಪರಿಸರ ಸಂರಕ್ಷಣೆಯ ಭಾಗ ಎನ್ನಬಹುದಾಗಿದೆ.
ಮದುವೆ ಹೇಗಾಯ್ತು..?
ಅಶ್ವತ್ಥ ವೃಕ್ಷ ವರ, ನೆಲ್ಲಿಕಾಯಿ ಗಿಡ ವಧು ಸ್ಥಾನದಲ್ಲಿದ್ದು ಕಾಸರ ಗೋಡಿನ ಅರ್ಚಕರು ಮದುವೆ ಮಾಡಿ ಸಿದರು. ವಧು-ವರರ ಪೋಷಕ ಸ್ಥಾನ ದಲ್ಲಿ ಉಪನಯನ ನಡೆಸಿದ ಅರ್ಚಕ ದಂಪತಿ ಜವಾಬ್ದಾರಿ ವಹಿಸಿಕೊಂಡಿ ದ್ದರು. ಮರ, ಗಿಡವನ್ನು ಸಿಂಗಾರ ಗೊಳಿಸಿ, ಮಂತ್ರಘೋಷ, ಮಂಗಳ ವಾದ್ಯ ಸಹಿತ ವಿವಾಹ ಕಾರ್ಯ ನಡೆದಿದ್ದು, ವಿಶೇಷವಾಗಿತ್ತು.
ವಿವಾಹ ಕಾರ್ಯ ವೈದಿಕ ಸಂಪ್ರ ದಾಯದಂತೆ ಸಕಲ ಪೂಜೆಗಳೊಂ ದಿಗೆ ನೆರವೇರಿತು. ಅರ್ಚಕರ ತಂಡ ಮಂತ್ರಘೋಷ ಮೊಳಗಿಸಿದರು. ಮಂಗಳ ವಾದ್ಯದೊಂದಿಗೆ ಪೋಷಕ ಸ್ಥಾನದಲ್ಲಿದ್ದವರು ಅಶ್ಚತ್ಥ ಕಟ್ಟೆಯ ಸುತ್ತ ನೆಲ್ಲಿಗಿಡದೊಂದಿಗೆ ಸುತ್ತಿ ಮರದ ಬಳಿ ತೆರಳಿ ಅಂತರಪಟ ಕಾರ್ಯ ಮಾಡಿ ಕನ್ಯಾದಾನ ಮಾಡಿ ಅರ್ಚಕರ ಮೂಲಕ ಅರಿಶಿಣ ಕೊಂಬಿನ ತಾಳಿಯನ್ನು ಕಟ್ಟಿಸಲಾ ಯಿತು. ಈ ವೇಳೆ ನೆರೆದಿದ್ದ ಜನ ಸಮೂಹ ಅಕ್ಷತೆ ಹಾಕಿ ಪ್ರಾರ್ಥನೆ ಮಾಡಿದರು. ಧಾರ್ಮಿಕ ಕಾರ್ಯ ವನ್ನು ಕಾಸರಗೋಡಿನ ಗಣಪತಿ ಭಟ್ಟ ನೇತೃತ್ವದಲ್ಲಿ ಮಂಜುನಾಥ ಭಟ್ಟ, ನಾರಾಯಣ ಪ್ರದೀಪ, ಶ್ರೀವತ್ಸ, ಮಧುಶಂಕರ, ಸುಬ್ರಮಣ್ಯ ಭಟ್ಟ ನೆರವೇರಿಸಿದರು.
ಟಿ ವರದಿ : ಹೆಚ್.ಜೆ. ರಾಕೇಶ್
ಟಿ ಚಿತ್ರಗಳು : ಲಕ್ಷಿö್ಮÃಶ್