ಮಡಿಕೇರಿ, ಫೆ. ೨: ಕೊಡಗು ಜಿಲ್ಲೆ ಕೃಷಿ ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಎ.ಟಿ.ಎಂ.ಎ) ಯೋಜನೆಯಡಿ ತಾಲೂಕು ತಾಂತ್ರಿಕ ವ್ಯವಸ್ಥಾಪಕರ ೨ ಹುದ್ದೆಗಳಿಗೆ ಒಪ್ಪಂದದ ಆಧಾರದ ಮೇಲೆ ೨೦೨೩-೨೪ನೇ ಸಾಲಿನ ಸೀಮಿತ ಅವಧಿಗೆ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸೋಮವಾರಪೇಟೆ ತಾಲೂಕು ಹಾಗೂ ವೀರಾಜಪೇಟೆ ತಾಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೆÃಮಕಾತಿ ಮಾಡಿಕೊಳ್ಳಲು ಷರತ್ತಿಗೆ ಒಳಪಟ್ಟು ಅರ್ಜಿಗಳನ್ನು ಆಹ್ವಾನಿಸಿದೆ.
ತಾಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ವಿದ್ಯಾರ್ಹತೆ ಎಂ.ಎಸ್ಸಿ (ಕೃಷಿ/ ತೋಟಗಾರಿಕೆ/ಮೀನುಗಾರಿಗೆ/ ಅರಣ್ಯ/ ರೇಷ್ಮೆ). ಕನಿಷ್ಟ ೨ ವರ್ಷ ಕೃಷಿ ವಿಸ್ತರಣಾ ಮತ್ತು ಸಂಬAಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ ಎಮ್ಎಸ್ ಆಫಿಸ್ನಲ್ಲ್ಲಿ ಪರಿಣಿತಿ ಹೊಂದಿರಬೇಕು. ಗರಿಷ್ಠ ೪೫ ವರ್ಷದೊಳಗಿರಬೇಕು. ಮಾಸಿಕ ರೂ. ೩೦ ಸಾವಿರ ಗೌರವ ಧನ ನೀಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಹರಿರುವ ಅಭ್ಯರ್ಥಿಗಳು ತಾ. ೧೫ ರೊಳಗೆ ಕಚೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಇಲ್ಲಿ ಅರ್ಜಿಗಳನ್ನು ಸಲ್ಲಿಸುವಂತೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರ ಕಚೇರಿ (ಆತ್ಮ ವಿಭಾಗ) ಕೊಡಗು ಜಿಲ್ಲೆ, ಮಡಿಕೇರಿ ಇವರನ್ನು ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸೋಮಸುಂದರ ತಿಳಿಸಿದ್ದಾರೆ.
ಗೃಹರಕ್ಷಕರ ನೇಮಕಾತಿಗೆ
ಕೊಡಗು ಜಿಲ್ಲಾ ಗೃಹರಕ್ಷಕ ದಳ ಮಡಿಕೇರಿ ಕಚೇರಿಯಲ್ಲಿ ೨೦೨೩-೨೪ನೇ ಸಾಲಿಗೆ ಜಿಲ್ಲಾ ಗೃಹರಕ್ಷಕದಳ ಇಲಾಖೆಯಲ್ಲಿ ಪ್ರಸ್ತುತ ಖಾಲಿ ಇರುವ ಸ್ಥಾನಗಳಿಗೆ ಸ್ವಯಂ ಸೇವಕ ಗೃಹರಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಕೊಡಗು ಜಿಲ್ಲೆಯ ನಿವಾಸಿಯಾಗಿರುವ ೧೯ ವರ್ಷ ಮೇಲ್ಪಟ್ಟ ೪೦ ವರ್ಷದೊಳಗಿನ ಹಾಗೂ ೧೦ನೇ ತರಗತಿ ತೇರ್ಗಡೆ ಹೊಂದಿರುವ ದೃಢಕಾಯರಾಗಿರುವ ಪುರುಷ-ಮಹಿಳಾ ಅಭ್ಯರ್ಥಿಗಳು ತಾ.೧೫ ರವರೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಬಯಸುವ ಸದಸ್ಯರು ಜಿಲ್ಲಾ ಗೃಹರಕ್ಷಕದಳ ಕಚೇರಿ, ಡೈರಿಫಾರಂ ಮಡಿಕೇರಿ (ದೂ. ೦೮೨೭೨-೨೨೮೪೨೭) ಮತ್ತು ಕೊಡಗು ಜಿಲ್ಲಾ ಗೃಹರಕ್ಷಕ ದಳದ ಸಹಾಯಕ ಬೋಧಕ ಅಕ್ಷಯ್ಕುಮಾರ್ ಡಿ. ಮೊ. ೯೮೪೪೦೦೮೮೨೦ ಹಾಗೂ ಗೃಹರಕ್ಷಕ ದಳದ ಘಟಕ ಕಚೇರಿಗಳ ಘಟಕಾಧಿಕಾರಿಗಳನ್ನು ಸಂಪರ್ಕಿಸಬಹುದು.
ಘಟಕಾಧಿಕಾರಿಗಳ ವಿವರ: ಮಡಿಕೇರಿ ಘಟಕ ವೈ.ಎನ್. ಕವನ್ ಕುಮಾರ್ ೯೪೪೮೨೦೪೩೫೬, ಭಾಗಮಂಡಲ ಘಟಕ ಎನ್.ಪಿ. ಲೋಕನಾಥ ೯೧೦೮೨೦೯೯೪೧, ವೀರಾಜಪೇಟೆ ಘಟಕ ಮದಬ್ ಬೈರಾಗಿ ೮೧೯೭೫೬೧೦೩, ಕುಶಾಲನಗರ ಘಟಕ ಬಿ.ಕೆ. ಪುಟ್ಟರಾಜು ೯೨೪೨೧೧೬೧೭೪, ಸೋಮವಾರಪೇಟೆ ಘಟಕ ಹೆಚ್.ಕೆ. ತ್ಯಾಗರಾಜು ೯೪೮೧೪೩೧೨೨೧, ಶಾಂತಳ್ಳಿ ಘಟಕ ಎಸ್.ಆರ್. ದೇವರಾಜು ೯೪೮೨೭೨೯೨೩೩, ಶನಿವಾರಸಂತೆ ಘಟಕ ಈ.ಬಿ. ಲೋಕೇಶ ೯೯೦೨೦೪೭೦೭೫ ಇಲ್ಲಿ ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಘಟಕಾಧಿಕಾರಿಗಳಿಂದ ದೂರವಾಣಿ ಮೂಲಕ ಮಾಹಿತಿ ಪಡೆದು ಹತ್ತಿರದ ಘಟಕಾಧಿಕಾರಿಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಕೆ.ಎಸ್. ಸುಂದರ್ ರಾಜ್ ಅವರು ತಿಳಿಸಿದ್ದಾರೆ.