ಪೊನ್ನಂಪೇಟೆ, ಫೆ. ೩: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಎಲ್ಕೆಜಿಯಿಂದ ೭ನೇ ತರಗತಿವರೆಗಿನ ವಿದ್ಯಾರ್ಥಿ ಗಳಿಂದ ಮೂಡಿಬಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸಿತು. ಆಯಾ ತರಗತಿ ಶಿಕ್ಷಕರ ಮಾರ್ಗದರ್ಶನ ಹಾಗೂ ನೃತ್ಯ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ವಿವಿಧ ಹಾಡುಗಳಿಗೆ ಹೆಜ್ಜೆಹಾಕಿದರು. ಒಂದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಜನ ಸಮೂಹ ಸಿಳ್ಳೆ, ಚಪ್ಪಾಳೆಗಳ ಮೂಲಕ ಮಕ್ಕಳನ್ನು ಹುರಿದುಂಬಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಸಿ.ಎ. ಜುನೈದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ಕರ್ನಾಟಕ ಪಬ್ಲಿಕ್ ಶಾಲೆಯು ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು, ಉತ್ತಮ ಫಲಿತಾಂಶವನ್ನು ತಂದು ಕೊಡುತ್ತಿದೆ. ಶಿಕ್ಷಕರು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಶಾಲೆಗೆ ಹೆಚ್ಚು ಮಕ್ಕಳು ಪ್ರವೇಶ ಪಡೆಯುವಂತೆ ನೋಡಿಕೊಳ್ಳಬೇಕು ಎಂದರು. ಶಿಸ್ತು ಹಾಗೂ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವ ಮೂಲಕ, ಗುರು-ಹಿರಿಯರಿಗೆ ಗೌರವ ಕೊಡುವುದನ್ನು ಮೈಗೂಡಿಸಿಕೊಂಡು, ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷ ಅಣ್ಣಿರ ಹರೀಶ್, ಉಪಾಧ್ಯಕ್ಷ ಆಲಿರ ರಶೀದ್, ಗ್ರಾ.ಪಂ. ಸದಸ್ಯರಾದ ರಾಮಕೃಷ್ಣ, ವಿಜಯ ಕುಮಾರ್, ಮಂಜುಳ ಮಣಿಕಂಠ, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೂಕಳೇರ ಕುಶಾಲಪ್ಪ, ಉಪಾಧ್ಯಕ್ಷ ಕೋಳೆರ ದಯಾ ಚಂಗಪ್ಪ, ಮಾಜಿ ಸೈನಿಕ ಹೆಚ್.ಕೆ. ಪ್ರಭು, ಸಿಆರ್ಪಿ ತಿರುನೆಲ್ಲಿಮಾಡ ಜೀವನ್, ಪ್ರಮುಖ ರಾದ ಪಿ.ಕೆ. ಗಿರೀಶ್, ಎಸ್ಡಿಎಂಸಿ ಉಪಾಧ್ಯಕ್ಷೆ ನಾಗವೇಣಿ, ಸದಸ್ಯರಾದ ಕನ್ಯಾಕುಮಾರಿ, ಲತಾ, ಮಂಜುಳ ಪ್ರಭು, ಶಿಲ್ಪ ಮಂಜುನಾಥ್, ಪ್ರಮೀಳ, ಸುಮಿತ್ರ, ಶಿಕ್ಷಕರಾದ ವಾಸು ವರ್ಮಾ, ಫಿಲೋಮಿನ, ಝಾನ್ಸಿ ಎಂ.ಎ., ಮಂಗಾಳಾAಗಿ ಹೆಚ್.ಸಿ., ರೋಜಿ. ಐ.ಎಂ., ಶಕೀಲ ಬಾನು ಎಂ.ಎನ್., ಗಂಗಾಮಣಿ ಸಿ.ಪಿ., ವಿನಿತ ಕೆ.ಆರ್., ರೇಖಾ ಪಿ.ಎ., ಅತಿಥಿ ಶಿಕ್ಷಕಿಯರಾದ ಶಿಲ್ಪ, ರಮ್ಯ ಅಜಿತ, ಸುನೀತ, ಸಹಾಯಕಿಯರಾದ ಮಂಜುಳ, ಜೆಸ್ಸಿ ಮೆಲ್ವನ್ ಇನ್ನಿತರರು ಇದ್ದರು. ಮುಖ್ಯ ಶಿಕ್ಷಕ ಬಿ.ಎಂ. ವಿಜಯ್ ಸ್ವಾಗತಿಸಿ, ನಿಂಗರಾಜು ಪ್ರಾರ್ಥಿಸಿ, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ನಿರೂಪಿಸಿ, ಗೀತ ವಂದಿಸಿದರು.