ಶ್ರೀಮಂಗಲ, ಫೆ. ೩: ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿಯ ಎಂ.ಎA. ಸ್ಮಾರಕ ಸರ್ಕಾರಿ ಪ್ರೌಢಶಾಲೆಯಲ್ಲಿ ೭೫ನೇ ವರ್ಷದ ಗಣರಾಜ್ಯೋತ್ಸವ ಆಚರಣೆ ಹಾಗೂ ದತ್ತಿನಿಧಿ ಬಹುಮಾನ ವಿತರಣಾ ಸಮಾರಂಭ ಆಯೋಜಿಸಲಾಗಿತ್ತು.
ಈ ಸಂದರ್ಭ ಶಾಲಾ ಗೇಟ್ ನಿರ್ಮಾಣಕ್ಕೆ ರೂ. ೨೦ ಸಾವಿರ ಧನಸಹಾಯ ಮಾಡಿದ ಹಿರಿಯ ದಾನಿಗಳಾದ ಕೈಬುಲಿರ ಪಾರ್ವತಿ ಬೋಪಯ್ಯ ಅವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಟಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಟ್ಟು, ಸದಸ್ಯರಾದ ಮಚ್ಚಮಾಡ ಸುಮಂತ್, ಪ್ರಭು, ದೇವಮ್ಮಾಜಿ, ದಾನಿಗಳಾದ ಕಟ್ಟೆರ ವಿಶ್ವನಾಥ್, ಮಾಜಿ ಸೈನಿಕರಾದ ಅಪ್ಪಚಂಗಡ ಮೋಟಯ್ಯ, ಉಳುವಂಗಡ ದತ್ತ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಟಿ. ಶೆಟ್ಟಿಗೇರಿಯ ಮುಖ್ಯ ಶಿಕ್ಷಕಿ ರಾಜೇಶ್ವರಿ ಸೇರಿದಂತೆ ಫ್ರೌಢಶಾಲಾ ಎಸ್ಡಿಎಂಸಿ ಅಧ್ಯಕ್ಷ ಪಾಂಡಿರಾಜ್, ಸದಸ್ಯರು, ಮುಖ್ಯ ಶಿಕ್ಷಕ ಬಿ.ಪಿ. ಉತ್ತಪ್ಪ, ಸಹಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.