ವೀರಾಜಪೇಟೆ, ಫೆ. ೨: ವೀರಾಜಪೇಟೆಯ ಫ್ರೆಂಡ್ಸ್ ತಂಡದಿAದ ಮಾರ್ಚ್ ೩ ರಂದು ಕೊಡಗು ಮುಸ್ಲಿಂ ಕಪ್ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ವೀರಾಜಪೇಟೆ ಜೂನಿಯರ್ ಕಾಲೇಜು ಆವರಣದಲ್ಲಿರುವ ಇಂಡೋರ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಚ್ಚು ಇರ್ಶಾದ್ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಸುಂಟಿಕೊಪ್ಪದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಮಾಜಿ ಶಟಲ್ ಬ್ಯಾಡ್ಮಿಂಟನ್ ಆಟಗಾರ, ಜಲಪ್ರಳಯ ಸಂದರ್ಭದಲ್ಲಿ ಮನೆಯನ್ನು ಕಳೆದುಕೊಂಡ ಕುಟುಂಬದ ಸದಸ್ಯರು ಜಾಗವನ್ನು ದಾನವಾಗಿ ನೀಡಿದ ಪಿ.ಎಂ. ಅಬ್ದುಲ್ ಲತೀಫ್ ಆಗಮಿಸಲಿದ್ದಾರೆ ಮತ್ತು ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನ ನಡೆಯಲಿದೆ ಎಂದು ಇಚ್ಚು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಎಂ.ಕೆ. ರವೂಫ್ ಮಾತನಾಡಿ, ಕೊಡಗಿನ ಮುಸ್ಲಿಂ ಸಮುದಾಯದ ಮಕ್ಕಳು ಉತ್ತಮ ರೀತಿಯಲ್ಲಿ ಬ್ಯಾಡ್ಮಿಂಟನ್ ಆಟವಾಡುತ್ತಾರೆ. ಅವರಿಗೆ ಉತ್ತಮ ವೇದಿಕೆ ನಮ್ಮ ಸಂಸ್ಥೆ ಕಲ್ಪಿಸುತ್ತದೆ. ಇದರ ಉಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಆಟಗಾರರು ಒಂದೇ ಗ್ರಾಮದ ಎರಡು ಆಟಗಾರರು ಮಾತ್ರ ಆಗಿರಬೇಕು ಎಂದು ಮಾಹಿತಿ ನೀಡಿದರು. ಆಟಗಾರರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನಗದು ಹಾಗೂ ಪಾರಿತೋಷಕ ಇರುತ್ತದೆ ಎಂದು ಆಯೋಜಕರು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಸಿ.ಕೆ. ರಾಜೀಕ್, ಖಜಾಂಚಿ ನವಾಫ್ ಭಾಗವಹಿಸಿದ್ದರು.