ಮಡಿಕೇರಿ, ಫೆ. ೩: ಕರಡ ಶಾಖೆಯ “ಬ್ಯಾಂಕ್ ಆಫ್ ಬರೋಡ” ವತಿಯಿಂದ ಕಾವೇರಿ ಶಾಲೆಗೆ ಕ್ರೀಡಾ ಸಾಮಗ್ರಿಗಳ ರೂಪದಲ್ಲಿ ೧೦,೦೦೦ (ಹತ್ತು ಸಾವಿರ) ರೂಪಾಯಿ ದೇಣಿಗೆಯನ್ನು ನೀಡಲಾಯಿತು. ಹಿರಿಯ ವ್ಯವಸ್ಥಾಪಕ ಸಿ.ವಿ. ಮಹೇಶ್ ನೆರವು ಹಸ್ತಾಂತರಿಸಿದರು.

ಕಾವೇರಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್ ಬಿ.ಎಸ್., ಕಾರ್ಯದರ್ಶಿ ವಿನೋದ್ ಪಿ.ಎನ್., ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ದೈಹಿಕ ಶಿಕ್ಷಕಿ ಮೋನಿಕ ಹಾಗೂ ರಾಜ್ಯಮಟ್ಟದ ಶೆಟಲ್ ಬ್ಯಾಡ್ಮಿಂಟನ್ ಆಟಗಾರರು ಹಾಗೂ ಕ್ರೀಡಾ ನಾಯಕರುಗಳಾದ ೧೦ನೇ ತರಗತಿ ವಿದ್ಯಾರ್ಥಿಗಳಾದ ಆಕರ್ಷ್ ಕೊಂಗAಡ ಮತ್ತು ಅಯ್ಯಪ್ಪ ಎಂ.ಜಿ. ಉಪಸ್ಥಿತರಿದ್ದರು.