ಕೂಡಿಗೆ, ಫೆ. ೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಕೇಂದ್ರದಲ್ಲಿರುವ ಮಹಿಳಾ ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರಕ್ಕೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಟರಾಜ್ ಭೇಟಿ ನೀಡಿ ಅಹಾರ ಪದಾರ್ಥಗಳ ಪರಿಶೀಲನೆ ನಡೆಸಿದರು.

ಕೇಂದ್ರದ ಮೂಲಕ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ವ್ಯಾಪ್ತಿಯ ಅಂಗವಾಗಿ ಮತ್ತು ಗರ್ಭಿಣಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ನೀಡುವ ಅಹಾರ ವ್ಯವಸ್ಥೆ ಮತ್ತು ಸರಕಾರದ ಹೊಸ ಯೋಜನೆಯಡಿಯಲ್ಲಿ ನೀಡಲಿರುವ ಆಹಾರ ವಸ್ತುಗಳ ಪರಿಶೀಲನೆಯನ್ನು ಅಧಿಕಾರಿ ವರ್ಗದವರು ನಡೆಸಿ ಗುತ್ತಿಗೆದಾರಿನಿಗೆ ಶುದ್ಧ ಹಾಗೂ ಪೌಷ್ಟಿಕಾಂಶ ಆಹಾರವನ್ನು ಕ್ರಮಬದ್ಧವಾಗಿ ನೀಡುವಂತೆ ಸೂಚನೆ ನೀಡಿದರು.

ಈ ಸಂದರ್ಭ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಕೆ.ಜೆ. ವಿಮಲ ಹಾಜರಿದ್ದರು.