ವೀರಾಜಪೇಟೆ, ಫೆ. ೩: ಶಿಸ್ತು, ಸಂಯಮ, ನಡತೆ ಹಾಗೂ ನಾಯಕತ್ವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಗಣ್ಯರು ಕರೆ ನೀಡಿದರು.

ವೀರಾಜಪೇಟೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವೀರಾಜಪೇಟೆ ವತಿಯಿಂದ ತಾಲೂಕು ಮಟ್ಟದ ಮಕ್ಕಳ ಪ್ರವೀಣತಾ ಪದಕ ಶಿಬಿರ ವೀರಾಜಪೇಟೆ ನಗರದ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಆಯೋಜನೆಗೊಂಡಿತ್ತು.

ಮೂರು ದಿನಗಳ ಶಿಬಿರಕ್ಕೆ ಚಾಲನೆ ಮತ್ತು ಸಭಾ ಕಾರ್ಯಕ್ರಮ ವನ್ನು ಹೂ ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದ ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಶಿಬಿರಗಳು ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಯ ನ್ನಾಗಿ ರೂಪಿಸುವ ಕೇಂದ್ರಗಳಾಗಿವೆ. ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯು ಲಕ್ಷಾಂತರ ವಿದ್ಯಾರ್ಥಿಗಳನ್ನು ಧೈರ್ಯವಂತ, ಸಾಹಸಿಗರಾಗಿ, ಶಿಸ್ತುಬದ್ಧ ಜೀವನವನ್ನು ರೂಪಿಸುವ ಶಕ್ತಿಯುತ ಸಂಸ್ಥೆಯಾಗಿದೆ. ಶಿಬಿರದಲ್ಲಿ ಭಾಗವಹಿಸುವು ದರಿಂದ ಪರಸ್ಪರ ವಿಚಾರ ವಿನಿಮಯ, ನಾಯಕತ್ವದ ಗುಣಗಳು, ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದು, ಕಲೆ, ಆಟೋಟ ಸ್ಪರ್ಧೆಗಳು ಹೀಗೆ ಹಲವು ಕ್ಷೇತ್ರಗಳ ಪರಿಚಯವಾಗುತ್ತದೆ. ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಇತರ ಚಟುವಟಕೆಗಳಲ್ಲಿ ಭಾಗಿಗಳಾದಲ್ಲಿ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಾಯಕವಾಗಿ ಸದೃಢರಾಗಬಹುದು. ಶಿಬಿರಗಳಲ್ಲಿ ಕಲಿತ ಅಭ್ಯಾಸಗಳು ಮುಂದೆ ಜೀವನ ರೂಪಿಸುವ ಮತ್ತು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿ ಪಾತ್ರವಹಿಸುತ್ತದೆ. ಶಿಬಿರದಲ್ಲಿ ತಿಳಿಸುವ ಪ್ರತಿಯೊಂದು ಅಂಶಗಳನ್ನು ಚಾಚುತಪ್ಪದೆ ಪಾಲಿಸಿ ಎಂದು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಏಷ್ಯಾ ಪೆಸಿಫಿಕ್ ವಲಯದ ಡೆಪ್ಯೂಟಿ ಡೈರೆಕ್ಟರ್ ಆಫ್ ಗೈಡ್ಸ್ ಲೀಡರ್ ಟ್ರೆöÊನರ್ ಮಾಚಮ್ಮ, ೧೯೦೯ ರಲ್ಲಿ ಆರಂಭವಾದ ವಿದ್ಯಾರ್ಥಿ ಚಳು ವಳಿಯು ಒಂದು ಸಂಘಟನೆಯಾಗಿ ಮಾರ್ಪಟ್ಟಿವೆ. ೧೧೭ ದೇಶಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯನಿರ್ವಹಿಸುತ್ತಿದೆ. ಶಕ್ತಿಯಿರುವವರೆಗೂ ಶ್ರಮಿಸು ಇದು ನಮ್ಮ ಧ್ಯೆಯವಾಕ್ಯವಾಗಬೇಕು. ಸಾಮಾಜಿಕ ಕಲ್ಪನೆ, ಸಂವೇದನಾ ಶೀಲತೆ, ಸಾಮಾಜಿಕ ಮೌಲ್ಯಗಳು, ರಾಷ್ಟçಭಕ್ತಿ, ಸೇವಾ ಮನೋಭಾವವನ್ನು ಶಿಬಿರಗಳು ತಿಳಿ ಹೇಳುತ್ತವೆ. ಇವುಗಳು ಉತ್ತಮ ವಿದ್ಯಾರ್ಥಿಗಳಾಗಲು ಸಹಕಾರಿ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಪ್ರಧಾನ ಆಯುಕ್ತ ಬೇಬಿ ಮ್ಯಾಥ್ಯೂ ಮಾತನಾಡಿ, ನಾವುಗಳು ಸಮಾಜ ದಿಂದ ಎಲ್ಲವನ್ನು ಪಡೆದುಕೊಳ್ಳುತ್ತೇವೆ. ಅದರಂತೆಯೆ ಸಮಾಜಕ್ಕೆ ನಾವು ಪ್ರತಿಫಲದ ರೂಪದಲ್ಲಿ ಕೊಡುಗೆಯಾಗಿ ನೀಡುವಂತಾಗಬೇಕು. ನಾಲ್ಕು ಗೋಡೆಗಳ ಮಧ್ಯೆ ಕಲಿಯುವುದು ವಿದ್ಯೆ ಅಲ್ಲ. ಆದರೆ ಪರಿಸರದಲ್ಲಿ ಪರಿಸರದಿಂದ ಕಲಿಯುವ ವಿದ್ಯೆಗಳು ನಮ್ಮನ್ನು ಸುಸಂಸ್ಕೃತರನ್ನಾಗಿ ಸೃಷ್ಟಿ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಸ್ಥಳೀಯ ಸಂಸ್ಥೆಯ ಮಾಜಿ ಅಧ್ಯಕ್ಷ ವಿ.ಟಿ. ನಾಣಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ವನಜಾಕ್ಷಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ತರಬೇತಿ ಆಯುಕ್ತೆ ಮೈಥಿಲಿ ರಾವ್ ಅವರುಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪುರಸಭೆಯ ಸದಸ್ಯರು ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಸಚಿನ್ ಕುಟ್ಟಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪದ್ಮಶ್ರೀ ವಿಜೇತರಾದ ರಾಣಿ ಮಾಚಯ್ಯ, ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಬೊಳ್ಳಜೀರ ಅಯ್ಯಪ್ಪ, ಜಿಲ್ಲಾ ಸಂಘಟಕಿ ದಮಯಂತಿ, ಪ್ರಗತಿ ಶಾಲೆಯ ಸಂಸ್ಥಾಪಕ ಮಾದಂಡ ಪೂವಯ್ಯ ಉಪಸ್ಥಿತರಿದ್ದರು. ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೀತೆ ಗಾಯನ ಕಾರ್ಯಕ್ರಮ ನಡೆಯಿತು. ಪ್ರಗತಿ ಶಾಲೆಯ ಆಡಳಿತಾಧಿಕಾರಿ ಮಾದಂಡ ಪಿ. ತಿಮ್ಮಯ್ಯ ಸ್ವಾಗತಿಸಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ತಸ್ನೀಂ ಅಕ್ತರ್ ಕಾರ್ಯಕ್ರಮ ನಿರೂಪಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಸ್ಥಳೀಯ ಸಂಸ್ಥೆ ಕಾರ್ಯ ದರ್ಶಿ ಮಧೋಷ್ ಪೂವಯ್ಯ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಶಿಬಿರಾರ್ಥಿಗಳು, ತರಬೇತಿದಾರರು, ಸಂಪನ್ಮೂಲ ವ್ಯಕ್ತಿಗಳು, ವಿವಿಧ ಶಾಲೆಗಳ ಶಿಕ್ಷಕರು ಹಾಜರಿದ್ದರು.