ಮಡಿಕೇರಿ, ಫೆ. ೩: ಮೊಹಾಲಿಯಲ್ಲಿ ಬ್ಯಾಡ್‌ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಪಂಜಾಬ್ ಬ್ಯಾಡ್‌ಮಿಂಟನ್ ಅಸೋಸಿಯೇಷನ್ ಸಹಯೋಗ ದಲ್ಲಿ ಜರುಗಿದ ಯೋನೆಕ್ಸ್ ಸನ್‌ರೈಸ್ ಮಹಾರಾಜ್ ಅಗ್ರಸೇನ್ ಆಲ್ ಇಂಡಿಯಾ ಮಾಸ್ಟರ್ಸ್ ರ‍್ಯಾಂಕಿAಗ್ ಶಟಲ್‌ಬ್ಯಾಡ್‌ಮಿಂಟನ್ ಪಂದ್ಯಾವಳಿಯಲ್ಲಿ ಜಿಲ್ಲೆಯವರಾದ ತಾತಪಂಡ ಜ್ಯೋತಿ ಸೋಮಯ್ಯ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.

ಪ್ರತಿಷ್ಠಿತವಾದ ಈ ಪಂದ್ಯಾವಳಿಯ ಸಿಂಗಲ್ಸ್ ವಿಭಾಗದಲ್ಲಿ ಇವರು ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಹಾಗೂ ಡಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ.

೫೫+ ವಿಭಾಗದ ಮಾಸ್ಟರ್ಸ್ ಬ್ಯಾಡ್‌ಮಿಂಟನ್ ಪಂದ್ಯಾವಳಿಯಲ್ಲಿ ಜ್ಯೋತಿ ಸೋಮಯ್ಯ ಅವರು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದು ಈ ಪಂದ್ಯಾವಳಿಯಲ್ಲಿಯೂ ಟ್ರೋಫಿ ಪಡೆದುಕೊಂಡಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ೫೫+ ವಿಭಾಗದ ಮಾಸ್ಟರ್ಸ್ ಬ್ಯಾಡ್‌ಮಿಂಟನ್ ಪಂದ್ಯಾವಳಿಯಲ್ಲಿ ಜ್ಯೋತಿ ಸೋಮಯ್ಯ ಅವರು ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದು ಈ ಪಂದ್ಯಾವಳಿಯಲ್ಲಿಯೂ ಟ್ರೋಫಿ ಪಡೆದುಕೊಂಡಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಅವರು ಈ ಪಂದ್ಯಾವಳಿಯಲ್ಲಿ ಸಾಕಷ್ಟು ಪ್ರಬಲ ಆಟಗಾರರಿದ್ದು ಈ ಬಾರಿಯ ಸಾಧನೆ ಸಂತಸ ತಂದಿರುವುದಾಗಿ ಹೇಳಿದ್ದಾರೆ. ಮುಂದಿನ ಮಾರ್ಚ್ನಲ್ಲಿ ಹರ್ಯಾಣ ದಲ್ಲಿ ಆಲ್ ಇಂಡಿಯಾ ರ‍್ಯಾಂಕಿAಗ್ ಪಂದ್ಯಾವಳಿ ಜರುಗಲಿದ್ದು, ಇದರಲ್ಲಿ ಯೂ ಇವರು ಪಾಲ್ಗೊಳ್ಳಲಿದ್ದಾರೆ.