(ವರದಿ: ಪ್ರಜ್ಞಾ ಜಿ.ಆರ್.)
ಮಡಿಕೇರಿ, ಫೆ. ೩: ವಾಹನಗಳಿಗೆ ಹೈ ಸೆಕ್ಯುರಿಟಿ ರೆಜಿಸ್ಟೆçÃಷನ್ ಪ್ಲೇಟ್ (ಎಚ್ಎಸ್ಆರ್ಪಿ) ಅಳವಡಿಸಲು ಗಡುವು ಸಮೀಪಿಸುತ್ತಿದ್ದಂತೆಯೇ, ಕೊಡಗಿನ ನಿವಾಸಿಗಳು ಅದನ್ನು ಅಳವಡಿಸಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಿಸಲ್ಪಟ್ಟಿದೆ. ವಾಹನಗಳಿಗೆ ಎಚ್ಎಸ್ಆರ್ಪಿ ಅಳವಡಿಸಲು ಅನುಮತಿ ಪಡೆದಿರುವ ಅಧಿಕೃತ ಶೋರೂಮ್ಗಳು ಅಥವಾ ಡೀಲರ್ಗಳು ಜಿಲ್ಲೆಯಲ್ಲಿ ಇಲ್ಲದಿರುವುದರಿಂದ ಹಲವಾರು ನಿವಾಸಿಗಳು ನಂಬರ್ ಪ್ಲೇಟ್ಗಳನ್ನು ಅಳವಡಿಸಲು ದೂರದ ಊರುಗಳಿಗೆ ಪ್ರಯಾಣವನ್ನು ಮಾಡಬೇಕಾಗಿದೆ. ಸ್ಕೂಟರ್ಗಳನ್ನು ಹೊಂದಿರುವ ಅನೇಕ ಮಹಿಳೆಯರು ಸುಮಾರು ೧೨೦ ಕಿ.ಮೀ ಸ್ಕೂಟರ್ನಲ್ಲಿ ಎಚ್ಎಸ್ಆರ್ಪಿ ಅಳವಡಿಸಲು ಸಾಹಸದ ‘ರೈಡ್’ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಿದ್ದರೂ, ಜನಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ ಇಲ್ಲದಂತಿದೆ.
ಗುಡ್ಡಗಾಡು ಪ್ರದೇಶದವಾದ ಕೊಡಗಿನಲ್ಲಿ ಸ್ವಾವಲಂಬಿ ಮಹಿಳೆಯರಿಗೆ ಸ್ಕೂಟರ್ ಒಂದು ವರದಾನವೇ ಸರಿ. ಪ್ರತಿದಿನ ಕೆಲಸಕ್ಕೆ ತೆರಳಲು ಉಪಯೋಗಿಸುವ ಈ ದ್ವಿಚಕ್ರ ವಾಹನಗಳನ್ನು ಈಗ ಸರಕಾರದ ನಿಯಮ ಪಾಲಿಸಲು ಹೊರ ಜಿಲ್ಲೆಗಳಿಗೆ ಈ ವಾಹನಗಳಲ್ಲಿ ಸವಾರಿ ಮಾಡಬೇಕಾದ ಪ್ರಸಂಗ ಮುಂದಿರುವದು ವಿಪರ್ಯಾಸ.
ಎಚ್ಎಸ್ಆರ್ಪಿ ನಂಬರ್ಗಳನ್ನು ವಾಹನಗಳಲ್ಲಿ ಅಳವಡಿಸಲು ಫೆಬ್ರವರಿ ೧೭ ಇದೀಗ ವಿಸ್ತೃತ ಕೊನೆಯ ದಿನ. ಈ ದಿನಾಂಕ ಮೀರಿ ಎಚ್ಎಸ್ಆರ್ಪಿ ಅಳವಡಿಸದಿದ್ದಲ್ಲಿ ಮೊದಲಿಗೆ ರೂ. ೧೦೦೦ ದಂತೆ ದಂಡ ವಿಧಿಸಲ್ಪಡಲಾಗುವದಲ್ಲದೆ ಮುಂದಿನ ನಿಯಮ ಉಲ್ಲಂಘನೆಗೆ ರೂ. ೨೦೦೦ ದಂತೆ ದಂಡ ವಿಧಿಸಲಾಗುವದು. ಈ ದಂಡಗಳಿAದ ತಪ್ಪಿಸಿಕೊಳ್ಳಲು ಕೊಡಗಿನವರು ಅನವಶ್ಯಕ ಬಂಡವಾಳ ಹಾಕುವಂತಾಗಿದೆ!
ಅದ್ಯಾಕೋ, ಕೊಡಗಿನ ಯಾವ ವಾಹನ ಶೋರೂಮ್ಗಳಾಗಲಿ, ವಾಹನ ಡೀಲರ್ಗಳಾಗಲೀ ಎಚ್ಎಸ್ಆರ್ಪಿ ಅಳವಡಿಸಲು ಅನುಮತಿ ದೊರೆತಿಲ್ಲ. ಇಲ್ಲಿನ ಜನತೆ ಆನ್ಲೈನ್ ಮೂಲಕ ಎಚ್ಎಸ್ಆರ್ಪಿ ರಿಜಿಸ್ಟೆçÃಷನ್ ಮಾಡಬಹುದಾದರೂ, ಬುಕ್ ಮಾಡಿದ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳನ್ನು ವಾಹನಗಳಿಗೆ ಅಳವಡಿಸಲು ಮೈಸೂರು, ಸುಳ್ಯ ಅಥವಾ ಹೊರಜಿಲ್ಲೆಯ ಶೋರೂಮ್ಗಳಿಗೇ ತೆರಳಬೇಕಾಗಿದೆ.
“ನಮ್ಮಲ್ಲಿ ಹೆಚ್ಚಿನ ಮಹಿಳೆಯರು ನಾವು ೨೦೧೯ ರ ಮೊದಲು ಖರೀದಿಸಿದ ಸ್ಕೂಟರ್ಗಳನ್ನು ಹೊಂದಿದ್ದೇವೆ. ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳನ್ನು ಪಡೆಯಲು ನಾವು ರೂ ೫೫೩.೪೨ ಹಣವನ್ನು ಆನ್ಲೈನ್ ಮೂಲಕ ಕಟ್ಟಬೇಕು. ಇನ್ನು, ಪ್ಲೇಟ್ಗಳ ವೆಚ್ಚವನ್ನು ಹೊರತುಪಡಿಸಿ, ಪ್ಲೇಟ್ಗಳನ್ನು ಅಳವಡಿಸಲು ನಾವು ಮೈಸೂರಿಗೆ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ,” ಎಂದು ಮಡಿಕೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿ ಲತಾ ವಿವರಿಸಿದರು. ಸೈಬರ್ನಿಂದ ಸಹಾಯ ಪಡೆದು ಆನ್ಲೈನ್ನಲ್ಲಿ ನಂಬರ್ ಪ್ಲೇಟ್ಗಾಗಿ ನೋಂದಾಯಿಸಿಕೊAಡಿದ್ದೇನೆ ಎಂದು ಅವರು ಹೇಳಿದರು. “ಆದರೂ, ನಾನು ಹೋಂಡಾ ದ್ವಿಚಕ್ರ ವಾಹನವನ್ನು ಹೊಂದಿದ್ದೇನೆ ಮತ್ತು ಮಡಿಕೇರಿ ಅಥವಾ ಕೊಡಗಿನ ಯಾವುದೇ ಡೀಲರ್ಗಳು ಎಚ್ಎಸ್ಆರ್ಪಿ ಸ್ಥಾಪನೆಗೆ ಅನುಮತಿ ಪಡೆದಿಲ್ಲ. ಈಗ, ನಾನು ರಿಸ್ಕ್ ತೆಗೆದುಕೊಳ್ಳಬೇಕಾಗಿದೆ. ಫೆಬ್ರವರಿ ೧೧ ರ ಮೊದಲು ನಂಬರ್ ಪ್ಲೇಟ್ ಅನ್ನು ಅಳವಡಿಸಲು ಸ್ಕೂಟರ್ನಲ್ಲಿ ಮೈಸೂರಿಗೆ ೧೨೦ ಕಿಮೀ ಪ್ರಯಾಣಿಸಬೇಕು, ”ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಹಳೆಯದಾದ ಮಹೀಂದ್ರ ಥಾರ್ ಜೀಪ್ಗಳು, ಯಮಹ, ಯಜ್ಡಿ ಬೈಕ್ಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯ ೨೦೧೯ ರ ಮುಂಚಿತ ನೋಂದಾಯಿತ ವಾಹನಗಳಿವೆ. ಇಷ್ಟಿದ್ದರೂ, ಎಚ್ಎಸ್ಆರ್ಪಿಯ ಹೋಮ್ ಡೆಲಿವರಿ ಆಯ್ಕೆಗೆ ಜಿಲ್ಲೆ ಅರ್ಹವಾಗಿಲ್ಲ. “ಆನ್ಲೈನ್ನಲ್ಲಿ ಎಚ್ಎಸ್ಆರ್ಪಿಗಾಗಿ ನೋಂದಾಯಿಸಿಕೊಳ್ಳುವ ಗ್ರಾಹಕರಿಗೆ ಮಾತ್ರ ನಾವು ಸಹಾಯ ಮಾಡಬಹುದು. ಇದರ ನಂತರ, ಹಲವಾರು ಗ್ರಾಹಕರು ತಮ್ಮ ವಾಹನಗಳಿಗೆ ಎಚ್ಎಸ್ಆರ್ಪಿಯನ್ನು ಅಳವಡಿಸಲು ಜಿಲ್ಲೆಯ ಹೊರಗೆ ಸುಳ್ಯ, ಮೈಸೂರು ಮತ್ತು ಇತರ ಸ್ಥಳಗಳಿಗೆ ಪ್ರಯಾಣಿಸಿದ್ದಾರೆ. ಸರ್ಕಾರ ಗ್ರಾಮೀಣ ನಿವಾಸಿಗಳ ಕಷ್ಟವನ್ನು
(ಮೊದಲ ಪುಟದಿಂದ) ಅರ್ಥಮಾಡಿಕೊಂಡು ಕೊಡಗಿಗೆ ಎಚ್ಎಸ್ಆರ್ಪಿ ಯ ‘ಹೋಂ ಡೆಲಿವರಿ’ ಆಯ್ಕೆಯನ್ನು ಒದಗಿಸಬೇಕು,'' ಎಂದು ಆಟೋಮೊಬೈಲ್ ಗ್ರಾಫಿಕ್ ಸೆಂಟರ್ ಮಾಲೀಕ ವಿಷ್ಣು ಹಂಚಿಕೊAಡರು. ಮಡಿಕೇರಿ ಆರ್ಟಿಒ ಅಧಿಕಾರಿಯನ್ನು ಪ್ರಶ್ನಿಸಿದಾಗ, ಕೇಂದ್ರ ಸರ್ಕಾರದಿಂದ ನಿಯಮವನ್ನು ನಿಯೋಜಿಸಲಾಗಿದೆ ಮತ್ತು ಪ್ರತಿಯೊಬ್ಬರೂ ಗಡುವಿನ ಮೊದಲು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಖಚಿತಪಡಿಸಿದರು.
ಎಚ್ಎಸ್ಆರ್ಪಿ ಅಳವಡಿಸುವ ಕ್ರಮವನ್ನು ಕೇಂದ್ರ ಸರಕಾರ ಜಾರಿಗೆ ತಂದಿದ್ದರೂ, ಕರ್ನಾಟಕ ಸಾರಿಗೆ ಇಲಾಖೆ ರಾಜ್ಯದಲ್ಲಿ ೨೦೧೯ ಮುಂಚಿತ ನೋಂದಾಯಿತ ವಾಹನಗಳಿಗೆ ಎಚ್.ಎಸ್.ಆರ್.ಪಿ ಅಳವಡಿಕೆಗೆ ಫೆಬ್ರವರಿ ೧೧ ರ ಗಡುವು ನೀಡಿದ್ದು ಅದೀಗ ತಾ. ೧೭ ರ ವರೆಗೆ ವಿಸ್ತರಣೆಗೊಂಡಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ ಹಾಗೂ ಇನ್ನಿತರ ಪ್ರಮುಖ ಜಿಲ್ಲೆಗಳಲ್ಲಿ ಈ ಎಚ್ಎಸ್ಆರ್ಪಿ ಅಳವಡಿಕೆಗೆ ಅನೇಕ ವಾಹನ ಡೀಲರ್ಗಳಿಗೆ ಅನುಮತಿ ದೊರೆತಿದ್ದು, ಈ ಪ್ರದೇಶದ ಜನರಿಗೆ ಅನುಕೂಲವಾಗಿ ಎಚ್ಎಸ್ಆರ್ಪಿ ಅಳವಡಿಸಬಹುದು. ಆದರೆ, ಕೊಡಗಿನಲ್ಲಿ ಇದಕ್ಕೆ ಅವಕಾಶವಿಲ್ಲದಿರುವದರಿಂದ ಸಾಹಸಪಟ್ಟು ನಿಯಮಪಾಲಿಸುವ ಪ್ರಸಂಗ ಉದ್ಬವಿಸಿದೆ.
‘ಕೊಡಗಿಗೆ ನಾವು ಇಷ್ಟು ಹಣ ನೀಡಿದ್ದೇವೆ, ಅವರು ಬಿಡುಗಾಸೂ ನೀಡಿಲ್ಲ’ ಎಂದೆಲ್ಲ ಪತ್ರಿಕಾಗೋಷ್ಠಿ ಕರೆಯುವ ಪ್ರತಿನಿಧಿಗಳು, ಸಂಸದರು ಹಾಗೂ ಶಾಸಕರುಗಳು ಕೊಡಗಿನ ನೈಜ ಸಮಸ್ಯೆ ಬಗ್ಗೆ ಧ್ವನಿಗೂಡಿಸಿ ಕನಿಷ್ಟ ಪಕ್ಷ ಎಚ್ಎಸ್ಆರ್ಪಿ ‘ಹೋಂ ಡೆಲಿವರಿ’ ಆಯ್ಕೆಯನ್ನು ಕೊಡಗಿಗೆ ಲಭಿಸಿಕೊಡಬೇಕೆಂಬದು ಅನೇಕರ ಮನವಿಯಾಗಿದೆ. ಸದ್ಯದ ಬೆಳವಣಿಗೆಯಲ್ಲಿ ಜಿಲ್ಲಾ ಸಾರಿಗೆ ಅಧಿಕಾರಿಗಳಿಗೆ ಎಚ್ಎಸ್ಆರ್ಪಿ ಅಳವಡಿಸುವ ಕುರಿತು ಹಾಗೂ ದಂಡ ವಿಧಿಸುವ ಕುರಿತು ಸೂಚನೆ ಬಂದಿದೆ. ಆದರೆ, ಪೊಲೀಸ್ ಮೂಲದಿಂದ ತಿಳಿದು ಬಂದ ಅನ್ವಯ ಪೊಲೀಸ್ ಇಲಾಖೆಗೆ ಈ ಕುರಿತು ಇದುವರೆಗೂ ಯಾವುದೇ ಲಿಖಿತ ನಿರ್ದೇಶನ ಸರಕಾರದಿಂದ ದೊರೆತಿಲ್ಲ. ಅಲ್ಲದೆ ಕೆಲವು ವಾಹನ ಮಾಲೀಕರು ಈ ಸಂಬAಧ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದು ಎಚ್ಎಸ್ಆರ್ಪಿ ಕಡ್ಡಾಯವಾಗಿ ಅಳವಡಿಸುವ ಅವಧಿ ವಿಳಂಬಗೊಳ್ಳುವ ಸಾಧ್ಯತೆಯಿರುವುದಾಗಿಯೂ ಬಲ್ಲಮೂಲದಿಂದ ತಿಳಿದುಬಂದಿದೆ. ಅಂತೂ ಕೊಡಗಿನ ಮಟ್ಟಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಿ ಜಿಲ್ಲೆಯ ವಾಹನ ಮಾಲೀಕರಿಗೆ ಜಿಲ್ಲೆಯಲ್ಲಿಯೇ ಎಚ್ಎಸ್ಆರ್ಪಿ ಅಳವಡಿಸುವ ವ್ಯವಸ್ಥೆ ಕಲ್ಪಿಸುವಂತೆ ಅನೇಕ ವಾಹನ ಮಾಲೀಕರು “ಶಕ್ತಿ” ಮೂಲಕ ಕೋರಿದ್ದಾರೆ.