ಮಡಿಕೇರಿ, ಫೆ. ೩: ಮಡಿಕೇರಿ ಕೋದಂಡರಾಮ ದೇವಾಲಯದ ರಾಮ ಸೇವಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ತಾ. ೨ ರಂದು ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹೆಚ್.ಎನ್. ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಈ ಸಂದರ್ಭ ಸಮಿತಿಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಆರ್. ವಿಶ್ವನಾಥ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆನಂದ ಸುಬ್ರಮಣಿಯವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರವೀಂದ್ರ ಹೆಚ್.ವಿ., ಕಾರ್ಯದರ್ಶಿಯಾಗಿ ವಿಶ್ವನಾಥ, ಖಜಾಂಚಿಯಾಗಿ ಸುಬ್ರಮಣಿ ಹೆಚ್.ಎನ್., ಸಹ ಕಾರ್ಯದರ್ಶಿಯಾಗಿ ಶಿವಪ್ಪ, ಸುಬ್ರಮಣಿ, ಕಾರ್ಯಾಧ್ಯಕ್ಷರಾಗಿ ಮಹೇಶ್ ಹೆಚ್.ಎನ್., ಗೌರವ ಸಲಹೆಗಾರರಾಗಿ ಜಿ. ರಾಜೇಂದ್ರ ಹಾಗೂ ನಂಜುAಡ, ಮುಖ್ಯ ಸಲಹೆಗಾರರಾಗಿ ಸುಬ್ರಮಣಿ, ಮಂಜುನಾಥ, ಗೌರವ ಅಧ್ಯಕ್ಷರಾಗಿ ತಿಮ್ಮಯ್ಯ ಹೆಚ್.ಎನ್., ಸಲಹೆಗಾರರಾಗಿ ರವಿ, ಶಿವಣ್ಣ, ರಾಜ್ ಕುಮಾರ್, ಸುರೇಶ, ಸುಬ್ಬರಾವ್, ನಾಗರಾಜು ಹಾಗೂ ಗಂಗಾಧರ ಅವರು ಆಯ್ಕೆಯಾದರು. ನಿರ್ದೇಶಕರಾಗಿ ಹರೀಶ್, ಜಗದೀಶ್ ಹೆಚ್. ಎಂ., ಕಾಳಪ್ಪ, ಹನುಮಂತ, ಜಗದೀಶ್, ಕುಮಾರ್, ಕಾವೇರಪ್ಪ, ವಿಜಯ, ಗೋಪಿನಾಥ್, ಸುಧಾಕರ್ ಹೆಚ್.ವಿ ಹಾಗೂ ಕುಶಾಲ್ ಎಸ್. ಆಯ್ಕೆಯಾದರು.