ಕಡಂಗ, ಫೆ. ೧: ಸಮೀಪದ ಕೊಕ್ಕಂಡ ಬಾಣೆ ದರ್ಗಾ ಶರೀಫ್ನಲ್ಲಿರುವ ಮಹಾತ್ಮರ ಹೆಸರಿನಲ್ಲಿ ನಡೆಸುವ ಉರೂಸ್ ಕಾರ್ಯಕ್ರಮಕ್ಕೆ ತಾ. ೨ ರಿಂದ (ಇಂದಿನಿAದ) ಚಾಲನೆ ದೊರೆಯಲಿದೆ ಎಂದು ಮುಹ್ಯಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ಲ ತಿಳಿಸಿದ್ದಾರೆ.
ಐದು ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮ ಜುಮಾ ನಮಾಜಿನ ಬಳಿಕ ಖತೀಬ್ ಉಸ್ತಾದ ರಫೀಕ್ ಲತಿಫಿ ಅವರ ಪ್ರಾರ್ಥನೆ ಮೂಲಕ ಪ್ರಾರಂಭಗೊಳ್ಳಲಿದ್ದು, ರಾತ್ರಿ ೮ ಗಂಟೆಗೆ ದುವಾ ಕಾರ್ಯಕ್ರಮವನ್ನು ಕೇರಳದ ಸೈಹಿದ್ ಕುಂಬೊಳ್ ಅಲಿ ನೆರವೇರಿಸಲಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಸಾಯಂಕಾಲ ಅನ್ನದಾನ ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಸಲಾಂ ಸಿ.ಎ., ಕಾರ್ಯದರ್ಶಿ ಅಬ್ದುರಹ್ಮಾನ್, ಜಂಟಿ ಕಾರ್ಯದರ್ಶಿ ಶಮೀರ್ ಪಿ.ಹೆಚ್. ಉಪಸ್ಥಿತರಿದ್ದರು.