ಮುಂಬೈ, ಫೆ. ೧: ಇತ್ತೀಚಿನ ವರ್ಷಗಳಲ್ಲಿ ದೇಶವು ಅಭಿವೃದ್ಧಿಯ ವಿಷಯದಲ್ಲಿ ದಾಪುಗಾಲು ಇಡುತ್ತಿದೆ. ಕೇಂದ್ರದ ಮೋದಿ ಸರ್ಕಾರವು ಕೈಗೊಂಡಿರುವ ಅನೇಕ ಆರ್ಥಿಕ ಸುಧಾರಣಾ, ಉತ್ತೇಜನ ಕ್ರಮ ಗಳಿಂದಾಗಿ ತಿಂಗಳಿನಿAದ ತಿಂಗಳಿಗೆ ಜಿಎಸ್‌ಟಿ ತೆರಿಗೆ ಸಂಗ್ರಹಾತಿ ಹೆಚ್ಚುತ್ತಿದ್ದು ದೇಶವು ೨೦೩೦ನೇ ಇಸವಿಗೆ ವಿಶ್ವದ ಮೂರನೇ ಅತೀ ದೊಡ್ಡ ಆರ್ಥಿಕತೆ ಆಗಿ ಹೊರ ಹೊಮ್ಮಲಿದೆ ಎಂದು ಆರ್ಥಿಕ ತಜ್ಞರು ನಿರೀಕ್ಷಿಸಿದ್ದಾರೆ. ಇಡೀ ವಿಶ್ವವೇ ಭಾರತದ ಬೆಳವಣಿಗೆಯ ವೇಗವನ್ನು ಅಚ್ಚರಿಯಿಂದ ಗಮನಿಸುತ್ತಿದೆ.

ಈ ನಡುವೆ ದೇಶದ ಷೇರು ಮಾರುಕಟ್ಟೆಯು ಹಾಂಗ್‌ಕಾAಗ್‌ನ ಮಾರುಕಟ್ಟೆಯನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತೀ ದೊಡ್ಡ ಮಾರುಕಟ್ಟೆ ಯಾಗಿ ಹೊರಹೊಮ್ಮಿದೆ. ಕಾಕತಾಳೀಯವೆಂಬAತೆ ಇಡೀ ದೇಶವೇ ರಾಮ ನಾಮ ಜಪಿಸಿದ ಸೋಮ ವಾರವೇ ಭಾರತೀಯ ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾದ ಷೇರುಗಳ ಸಂಯೋಜಿತ ಮೌಲ್ಯವು ಮಾರುಕಟ್ಟೆ ಮುಕ್ತಾಯದ ವೇಳೆಗೆ ೪.೩೩ ಟ್ರಿಲಿಯನ್ ಡಾಲರ್‌ಗೆ ತಲುಪಿದೆ, ಹಾಂಗ್‌ಕಾAಗ್ ಮಾರುಕಟ್ಟೆ ೪.೨೯ ಟ್ರಿಲಿಯನ್ ಡಾಲರ್‌ದ್ದಾಗಿದೆ. ಇದು ದೇಶದ ಬೆಳೆಯುತ್ತಿರುವ ಮಾರು ಕಟ್ಟೆಯ ಪ್ರಗತಿಯ ದ್ಯೋತಕವಾಗಿದೆ. ಈ ಸುದ್ದಿಯು ಮಾರುಕಟ್ಟೆ ಹೂಡಿಕೆ ದಾರರಲ್ಲಿ ಉತ್ಸಾಹ ಮೂಡಿಸಿದೆ.

ಪ್ರಸ್ತುತ, ಅಮೇರಿಕಾ ೫೦.೮೬ ಟ್ರಿಲಿಯನ್ ಡಾಲರ್‌ನೊಂದಿಗೆ ವಿಶ್ವದ ಅತಿದೊಡ್ಡ ಷೇರು ಮಾರುಕಟ್ಟೆ ಯಾಗಿದೆ. ಚೀನಾ ೮.೪೪ ಟ್ರಿಲಿಯನ್ ಡಾಲರ್‌ನೊಂದಿಗೆ ೨ನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿದ್ದರೆ ೬.೩೬ ಟ್ರಿಲಿಯನ್ ಡಾಲರ್‌ನೊಂದಿಗೆ ಜಪಾನ್ ವಿಶ್ವದ ಮೂರನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿದೆ. ಬ್ಲೂಮ್‌ಬರ್ಗ್ ಪ್ರಕಾರ, ಭಾರತದ ಷೇರು ಮಾರುಕಟ್ಟೆ ಬಂಡವಾಳವು ಕಳೆದ ಡಿಸೆಂಬರ್ ೫ ರಂದು ಮೊದಲ ಬಾರಿಗೆ ೪ ಟ್ರಿಲಿಯನ್ ಡಾಲರ್ ದಾಟಿದೆ. ಬೆಳೆಯುತ್ತಿರುವ ಚಿಲ್ಲರೆ ಹೂಡಿಕೆದಾರರ ನೆಲೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ನಿರಂತರ ಒಳಹರಿವು, ಬಲವಾದ ಸಾಂಸ್ಥಿಕ ಗಳಿಕೆಗಳು ಮತ್ತು ಘನ ದೇಶೀಯ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳ ಹಿನ್ನೆಲೆಯಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಬೆಳವಣಿಗೆಯಾಗಿದೆ. ಭಾರತೀಯ ಮಾರುಕಟ್ಟೆಗಳು ಸತತ ಎಂಟು ವರ್ಷಗಳಿಂದ ಲಾಭದೊಂದಿಗೆ ನೆಲೆಸಿದ್ದು, ಮತ್ತಷ್ಟು ಬೆಳವಣಿಗೆ ಯಾಗುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದೆಡೆ, ಹಾಂಗ್‌ಕಾAಗ್‌ನ ಹೆಂಗ್‌ಸೆAಗ್ ಷೇರು ಮಾರುಕಟ್ಟೆ ಸತತ ನಾಲ್ಕು ವರ್ಷ ಸರಣಿ ನಷ್ಟ ಕಂಡಿದೆ ಮತ್ತು ಶಾಂಘೈ ಸ್ಟಾಕ್ ಎಕ್ಸ್ಚೇಂಜ್ ಸತತ ಎರಡನೇ ವರ್ಷದ ನಷ್ಟವನ್ನು ಕಂಡಿದೆ. ೨೦೨೧ ರಲ್ಲಿ ಉತ್ತುಂಗಕ್ಕೇರಿದಾಗಿನಿAದ ಚೀನೀ ಮತ್ತು ಹಾಂಗ್‌ಕಾAಗ್ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯವು ೬ ಟ್ರಿಲಿಯನ್ ಡಾಲರ್ ಗಿಂತಲೂ ಹೆಚ್ಚು ಕುಸಿತ ದಾಖಲಿ ಸಿತ್ತು. ಇದೇ ಕಾರಣಕ್ಕೆ ಭಾರತವು ೪ನೇ ಸ್ಥಾನ ಗಳಿಸಿಕೊಳ್ಳುವಲ್ಲಿ ಯಶಸ್ವಿ ಆಗಿದೆ. ಇಲ್ಲದಿದ್ದರೆ ಇನ್ನಷ್ಟು ಸಮಯ ಬೇಕಾಗುತಿತ್ತು. ಜಾಗತಿಕ ಹೂಡಿಕೆ ದಾರರು ಭಾರತವನ್ನು ಚೀನಾಕ್ಕೆ ಪರ್ಯಾಯವಾಗಿ ಪರಿಗಣಿಸುತ್ತಿದ್ದು ಇತ್ತೀಚೆಗೆ ಬಂಡವಾಳ ಹೂಡಿಕೆ ಯನ್ನು ಹೆಚ್ಚಿಸಿದ್ದಾರೆ. ಭಾರತದ ಮಾರುಕಟ್ಟೆಯ ಲಾಭಾಂಶವು ಆಕರ್ಷಣೀಯವಾಗಿದೆ ಎಂದು ಹೂಡಿಕೆದಾರರು ಹೇಳುತ್ತಿದ್ದಾರೆ.

- ಕೋವರ್‌ಕೊಲ್ಲಿ ಇಂದ್ರೇಶ್