ಕಣಿವೆ, ಫೆ. ೧: ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗದ್ದೆಹೊಸಳ್ಳಿ ಗ್ರಾಮದ ಬಾಣೆಯೊಂದರಲ್ಲಿ ಅಕ್ರಮವಾಗಿ ಸುಣ್ಣದ ಕಲ್ಲಿನ ಗಣಿಗಾರಿಕೆ ನಡೆಸಿ ಸಾಗಾಟ ಮಾಡುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯ ಕೃಷಿಕರು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕೃಷಿಕರೂ ಆದ ಗ್ರಾಮ ಪಂಚಾಯಿತಿ ಸದಸ್ಯ ಟಿ.ಸಿ.ಶಿವಕುಮಾರ್ ರಾತೋ ರಾತ್ರಿ ಯಂತ್ರ, ಲಾರಿಗಳನ್ನು ತರುವ ದಂಧೆಕೋರರು ಬೆಳಗಾಗುವುದರೊಳಗೆ ನೂರಾರು ಅಡಿಗಳ ಪ್ರಪಾತಕ್ಕೆ ಮಣ್ಣು ತೆಗೆದು ಒಳಪದರದಲ್ಲಿ ಸಿಗುವ ಸುಣ್ಣದ ಕಲ್ಲಿನ ಬಂಡೆಗಳನ್ನು ಒಡೆದು ಲಾರಿಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಕೃಷಿ ಭೂಮಿಯ ಕ್ರಮಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯ ಕೃಷಿಕರು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕೃಷಿಕರೂ ಆದ ಗ್ರಾಮ ಪಂಚಾಯಿತಿ ಸದಸ್ಯ ಟಿ.ಸಿ.ಶಿವಕುಮಾರ್ ರಾತೋ ರಾತ್ರಿ ಯಂತ್ರ, ಲಾರಿಗಳನ್ನು ತರುವ ದಂಧೆಕೋರರು ಬೆಳಗಾಗುವುದರೊಳಗೆ ನೂರಾರು ಅಡಿಗಳ ಪ್ರಪಾತಕ್ಕೆ ಮಣ್ಣು ತೆಗೆದು ಒಳಪದರದಲ್ಲಿ ಸಿಗುವ ಸುಣ್ಣದ ಕಲ್ಲಿನ ಬಂಡೆಗಳನ್ನು ಒಡೆದು ಲಾರಿಗಳಲ್ಲಿ ತುಂಬಿಸಿ ಸಾಗಿಸುತ್ತಿದ್ದಾರೆ. ಇದರಿಂದಾಗಿ ನಮ್ಮ ಕೃಷಿ ಭೂಮಿಯ (ಮೊದಲ ಪುಟದಿಂದ) ದಂಧೆಕೋರರು ಜೀವಕ್ಕೆ ಹಾನಿ ಮಾಡುವ ಅಪಾಯವೂ ಇರುತ್ತದೆ. ಅಂತೂ ಇಂತೂ ಗ್ರಾಮಸ್ಥರು ಸಾಹಸ ಮಾಡಿ ಸ್ಥಳಕ್ಕೆ ತೆರಳಿದರೆ ತಡವಾಗಿ ಸ್ಥಳಕ್ಕೆ ಧಾವಿಸುವ ಪೊಲೀಸರು ನಮ್ಮನ್ನೇ ಗದರಿಸುತ್ತಾರೆ ಎಂದು ನೇರವಾಗಿ ಆರೋಪಿಸಿದರು.
ಈ ಸಂದರ್ಭ ‘ಶಕ್ತಿ’ ಯೊಂದಿಗೆ ಮಾತನಾಡಿದ ತೊರೆನೂರು ಗ್ರಾಮದ ಯುವ ಮುಖಂಡ ಟಿ.ಬಿ.ಮಹೇಶ್, ಸುಮಾರು ೫೦ ವರ್ಷಗಳ ಹಿಂದೆ ಕಲ್ಕತ್ತಾಕ್ಕೆ ಸೇರಿದ ಬರ್ನಾಲ್ಡ್ ಕಂಪೆನಿಗೆ ಗದ್ದೆಹೊಸಳ್ಳಿಯ ಒಂದಷ್ಟು ಪ್ರದೇಶವನ್ನು ನಮ್ಮ ಹಿಂದಿನ ಮಂದಿ ಸುಣ್ಣದ ಕಲ್ಲಿನ ಗಣಿಗಾರಿಕೆಗೆ ನೀಡಿದ್ದರು.
ಅದು ಸ್ಥಗಿತಗೊಂಡು ದಶಕಗಳೇ ಕಳೆದಿವೆ. ಆದರೆ ಇತ್ತೀಚೆಗೆ ಕೆಲವರು ರಾತೋ ರಾತ್ರಿ ವಾಹನಗಳನ್ನು ತಂದು ಗಣಿಗಾರಿಕೆ ಮಾಡಿ ಅಕ್ರಮವಾಗಿ ಕಲ್ಲನ್ನು ಸಾಗಿಸುತ್ತಿದ್ದರೂ ಗಣಿಗಾರಿಕೆ ಅಧಿಕಾರಿಗಳು ಕಣ್ಣು, ಕಿವಿ ಮುಚ್ಚಿ ಕುಳಿತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಲು ಗಣಿಗಾರಿಕೆ ಇಲಾಖೆಗೆ ಕರೆ ಮಾಡಿದರೆ ನಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಯಾವಾಗ ಕೇಳಿದರೂ ವಾಹನವಿಲ್ಲ ಎಂದು ಹೇಳುತ್ತಾರೆ. ವಾಹನಗಳು ಹಾಗೂ ಸಿಬ್ಬಂದಿಗಳು ಇಲ್ಲ ಎನ್ನುವ ಸಿದ್ಧ ಉತ್ತರ ಕೊಡುತ್ತಾರೆ ಎಂದರು.
ಈ ಬಗ್ಗೆ ‘ಶಕ್ತಿ’ ಕೊಡಗು ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಕೇಳಿದರೆ, ನಮ್ಮಲ್ಲಿ ಗಣಿ ಇಲಾಖೆ ಅಧಿಕಾರಿಗಳ ಹುದ್ದೆ ಖಾಲಿ ಇದೆ. ಇಡೀ ಜಿಲ್ಲೆಗೆ ನಾವು ಮೂವರು ವಿಜ್ಞಾನಿಗಳಿದ್ದೇವೆ. ಸರಿಯಾದ ವಾಹನಗಳೂ ಇಲ್ಲ.
ನಮ್ಮಲ್ಲಿ ಸುಣ್ಣದ ಕಲ್ಲು ತೆಗೆಯಲು ಯಾವುದೇ ಪರವಾನಗಿ ಇಲ್ಲ. ಕಳೆದ ಒಂದು ವರ್ಷದ ಅವಧಿಯಿಂದ ಈ ತನಕ ಅಕ್ರಮವಾಗಿ ಸುಣ್ಣದ ಕಲ್ಲು ತೆಗೆಯಲು ಬಳಸಿದ ವಾಹನಗಳನ್ನು ಹಿಡಿದು ೮ ಲಕ್ಷ ದಂಡ ವಸೂಲಿ ಮಾಡಿದ್ದೇವೆ ಎನ್ನುತ್ತಾರೆ.
ಅಕ್ರಮ ಸುಣ್ಣದ ಕಲ್ಲು ಸಾಗಾಟದ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯ ಅಧಿಕಾರಿ ಮೋಹನ್ ರಾಜು ಅವರನ್ನು ಸಂಪರ್ಕಿಸಿದಾಗ ಗಣಿಗಾರಿಕೆಗೆ ಬಳಸಿದ ಜೆಸಿಬಿ ಮುಟ್ಟುಗೋಲು ಹಾಕಿಕೊಂಡಿದ್ದೇವೆ. ಅದನ್ನು ಗಣಿ ಇಲಾಖೆ ಅಧಿಕಾರಿಗಳಿಗೆ ವಹಿಸುತ್ತೇವೆ ಎಂದರು.
-ವರದಿ : ಕೆ.ಎಸ್.ಮೂರ್ತಿ