ನವದೆಹಲಿ, ಫೆ. ೧: ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨೦೨೪-೨೫ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದ್ದು, ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತು ಸಂಸತ್ತಿನಲ್ಲಿ ಶ್ವೇತಪತ್ರ ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಆದಾಯ ತೆರಿಗೆ ಪಾವತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಬಹುತೇಕ ಹಳೇ ಯೋಜನೆಗಳಿಗೆ ಹೊಸ ಸ್ಪಶÀð ನೀಡಲಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ಯೋಜನೆ ವಿಸ್ತರಣೆ, ಕ್ಯಾನ್ಸರ್ ನಿರೋಧಕ ಲಸಿಕೆ ಹಾಕಲು ಸರಕಾರ ಉತ್ತೇಜನ, ಆರೋಗ್ಯ ಹಾಗೂ ಮೂಲಸೌಕರ್ಯ, ಕೃಷಿ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ಹಾಗೂ ಮೀನುಗಾರಿಕೆ ಪ್ರತ್ಯೇಕ ಸಚಿವಾಲಯ ಹೀಗೆ ಅನೇಕ ಅಂಶಗಳು ಬಜೆಟ್ನಲ್ಲಿ ಒಳಗೊಂಡಿವೆ.
ಆದಾಯ ತೆರಿಗೆ ವಿನಾಯಿತಿಯಷ್ಟೇ ಅಲ್ಲದೇ, ಆಮದು ಸುಂಕ ಸೇರಿದಂತೆ ಇನ್ನಿತರ ತೆರಿಗೆಗಳನ್ನೂ ಸಹ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲಾಗಿದೆ. ಸಣ್ಣ ಆದಾಯ ಹಿಂತೆಗೆತ ತೆರಿಗೆಗೆ ಸಂಬAಧಿಸಿದAತೆ ಯೋಜನೆಯೊಂದನ್ನು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಬಾಕಿ ಉಳಿದಿರುವ ನೇರ ತೆರಿಗೆ ಬೇಡಿಕೆಗಳನ್ನು ೨೦೦೯-೧೦ ರವರೆಗಿನ ಅವಧಿಗೆ ಸಂಬAಧಿಸಿದAತೆ ರೂ. ೨೫೦೦೦ ವರೆಗೆ, ೨೦೧೩-೧೪ ರವರೆಗಿನ ಅವಧಿಗೆ ಸಂಬAಧಿಸಿದAತೆ ರೂ. ೧೦,೦೦೦ ವರೆಗೆ ಹಿಂಪಡೆಯಲಾಗುತ್ತದೆ. ೧ ಕೋಟಿ ತೆರಿಗೆದಾರರು ಇದರ ಲಾಭ ಪಡೆಯಲಿದ್ದಾರೆ. ಆದಾಯ ತೆರಿಗೆ ದರಗಳು ಈಗಾಗಲೇ ಕಡಿಮೆಯಾಗಿದ್ದು, ಸರ್ಕಾರವು ಪ್ರತಿ ವರ್ಷಕ್ಕೆ ೨.೪ ಲಕ್ಷ ರೂ.ನಿಂದ ೭.೫ ಲಕ್ಷ ರೂ.ಗೆ ಪ್ರಮಾಣಿತ ಕಡಿತವನ್ನು ಹೆಚ್ಚಿಸಿದೆ ಎಂದು ಸಚಿವರು ಹೇಳಿದರು.
೨೦೧೩-೧೪ನೇ ಸಾಲಿನಲ್ಲಿ ತೆರಿಗೆ ಮರುಪಾವತಿ ಸರಾಸರಿ ಪ್ರಕ್ರಿಯೆ ಸಮಯವನ್ನು ೯೩ ದಿನಗಳಿಂದ ಈ ವರ್ಷ ಕೇವಲ ೧೦ ದಿನಗಳಿಗೆ ಇಳಿಸಲಾಗಿದೆ. ಇದರಿಂದಾಗಿ ಮರುಪಾವತಿಯನ್ನು ವೇಗವಾಗಿ ಮಾಡಲಾಗುತ್ತದೆ. ಇದಲ್ಲದೆ, ಕಳೆದ ೧೦ ವರ್ಷಗಳಲ್ಲಿ ತೆರಿಗೆ ಮರುಪಾವತಿಯನ್ನು ಸಲ್ಲಿಸುವವರ ಸಂಖ್ಯೆ ೨.೪ ಪಟ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ನೇರ ತೆರಿಗೆ ಸಂಗ್ರಹ ಮೂರು ಪಟ್ಟು ಹೆಚ್ಚಾಗಿದೆ. ಆರ್ಥಿಕ ವರ್ಷ ೨೦೧೮ ರಿಂದ ಜಿ.ಎಸ್.ಟಿ.ಯ ತೆರಿಗೆ ಮೂಲ ದ್ವಿಗುಣಗೊಂಡಿದೆ. ಸರಾಸರಿ ಮಾಸಿಕ ಜಿಎಸ್ಟಿ ಕೂಡ ದ್ವಿಗುಣಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.
ದಾಖಲೆ ಬರೆದ ನಿರ್ಮಲ
ಲೋಕಸಭೆಯಲ್ಲಿ ೨೦೨೪-೨೫ನೇ ಸಾಲಿನ ಕೇಂದ್ರ ಬಜೆಟ್ನ್ನು ಮಂಡನೆ ಮೂಲಕ ಮೊರಾರ್ಜಿ ದೇಸಾಯಿ ಬಳಿಕ ಸತತ ೬ ಬಾರಿ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಮಂತ್ರಿಯಾಗಿ ದಾಖಲೆ ಬರೆದಿದ್ದಾರೆ. ಅಲ್ಲದೆ, ೨೦೧೯ರಿಂದ ಈವರೆಗೆ ಪೂರ್ಣಾವಧಿ ವಿತ್ತ ಮಂತ್ರಿಯಾಗಿ ಕೆಲಸ ಮಾಡಿದ ದೇಶದ ಮೊದಲ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಸತತ ಐದು ಬಜೆಟ್ಗಳನ್ನು ಮಂಡಿಸಿರುವ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ.ಚಿದಂಬರA ಹಾಗೂ ಯಶವಂತ್ ಸಿನ್ಹಾ ಅವರ ದಾಖಲೆಗಳನ್ನೂ ನಿರ್ಮಲಾ ಸೀತಾರಾಮನ್ ಅವರು ಮುರಿದಿದ್ದಾರೆ.
ಈಗಾಗಲೇ ಪ್ರಧಾನ ಮಂತ್ರಿ ಆವಾಸ್ ಅಡಿಯಲ್ಲಿ, ಗ್ರಾಮೀಣ ಪ್ರದೇಶದಲ್ಲಿ ೭೦ ಪ್ರತಿಶತ ಮನೆಗಳನ್ನು ಮಹಿಳೆಯರಿಗೆ ನೀಡಲಾಗಿದೆ. ಎಲ್ಲಾ ಮೂಲಭೂತ ಯೋಜನೆಗಳು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುತ್ತಿವೆ. ತೆರಿಗೆ ಸುಧಾರಣೆಗಳಿಂದ ತೆರಿಗೆ ವ್ಯಾಪ್ತಿ ಹೆಚ್ಚಿದೆ. ಪ್ರಮುಖವಾಗಿ ತ್ರಿವಳಿ ತಲಾಖ್ನ್ನು ಕಾನೂನುಬಾಹಿರವಾಗಿಸುವುದು, ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ೧/೩ ಸ್ಥಾನಗಳನ್ನು ಮೀಸಲಿಡುವುದು,
(ಮೊದಲ ಪುಟದಿಂದ) ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ೭೦% ಕ್ಕಿಂತ ಹೆಚ್ಚು ಮನೆಗಳನ್ನು ನೀಡುವುದು ಅವರ ಘನತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕೃಷಿ ಮತ್ತು ಆಹಾರ ಸಂಸ್ಕರಣೆ ಮೌಲ್ಯವರ್ಧನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಲಾಗುವುದು. ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆಯು ೩೮ ಲಕ್ಷ ರೈತರಿಗೆ ಪ್ರಯೋಜನವನ್ನು ನೀಡಿದೆ ಮತ್ತು ೧೦ ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಸಚಿವೆ ಹೇಳಿದರು.
ಬಡ್ಡಿ ರಹಿತ ಸಾಲಕ್ಕೆ ಪ್ರಸ್ತಾವನೆ
ಪ್ರಧಾನಮಂತ್ರಿ ಮೈಕ್ರೋ ಫುಡ್ ಪ್ರೊಸೆಸಿಂಗ್ ಎಂಟರ್ಪ್ರೆöÊಸಸ್ ಯೋಜನೆಯು ೨.೪ ಲಕ್ಷ ಸ್ವಸಹಾಯ ಗುಂಪುಗಳು ಮತ್ತು ೬೦ ಸಾವಿರ ವ್ಯಕ್ತಿಗಳಿಗೆ ಕ್ರೆಡಿಟ್ ಲಿಂಕ್ಗಳೊAದಿಗೆ ಸಹಾಯ ಮಾಡಿದೆ. ವಿಕಸಿತ ಭಾರತಕ್ಕೆ ರಾಜ್ಯಗಳಲ್ಲಿ ಸುಧಾರಣೆಗಳು ಅನೇಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಸಕ್ರಿಯಗೊಳಿಸುವ ಸುಧಾರಣೆಗಳು ರಾಜ್ಯಗಳಲ್ಲಿ ಅಗತ್ಯವಿದೆ. ರಾಜ್ಯ ಸರ್ಕಾರಗಳ ಮೈಲಿಗಲ್ಲು ಸಂಬAಧಿತ ಸುಧಾರಣೆಗಳನ್ನು ಬೆಂಬಲಿಸಲು ಈ ವರ್ಷ ೫೦ ವರ್ಷಗಳ ಬಡ್ಡಿ ರಹಿತ ಸಾಲವಾಗಿ ರೂ. ೭೫,೦೦೦ ಕೋಟಿ ರೂಪಾಯಿಗಳನ್ನು ಒದಗಿಸಲು ಪ್ರಸ್ತಾಪಿಸಲಾಗಿದೆ. ಕೃಷಿ ಮತ್ತು ಆಹಾರ ಸಂಸ್ಕರಣೆ ಮೌಲ್ಯವರ್ಧನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳನ್ನು ಮಾಡಲಾಗುವುದು.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ ಬಡತನ ಅಂಚಿನಲ್ಲಿರುವ ಮತ್ತು ಸಣ್ಣ ರೈತರು ಸೇರಿದಂತೆ ೧೧.೮ ಕೋಟಿ ರೈತರಿಗೆ ನೇರ ಆರ್ಥಿಕ ನೆರವು ನೀಡಲಾಗುತ್ತದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ೪ ಕೋಟಿ ರೈತರಿಗೆ ಬೆಳೆ ವಿಮೆ ನೀಡಲಾಗಿದೆ ಎಂದು ಹಣಕಾಸು ಸಚಿವೆ ಸೀತಾರಾಮನ್ ಹೇಳಿದ್ದಾರೆ.
ಕೃಷಿಯಲ್ಲಿ ಹೂಡಿಕೆಗೆ ಉತ್ತೇಜನ - ಮೀನುಗಾರಿಕೆಗೆ ಸಚಿವಾಲಯ
ಕೊಯ್ಲಿನ ನಂತರದ ಕೃಷಿ ಚಟುವಟಿಕೆಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಹೂಡಿಕೆಗಳನ್ನು ಉತ್ತೇಜಿಸುವುದಾಗಿ ನಿರ್ಮಲ ಸೀತಾರಾಮನ್ ತಿಳಿಸಿದ್ದಾರೆ.
ರೈತರಿಗೆ ಆಧುನಿಕ ತಂತ್ರಜ್ಞಾನದ ಸಹಾಯಕ್ಕಾಗಿ ನ್ಯಾನೋ ಯೂರಿಯಾ ಎಲ್ಲಾ ವಲಯಗಳಿಗೆ ವಿಸ್ತರಣೆ ಮಾಡಲಾಗಿದೆ. ಆತ್ಮನಿರ್ಭರ್ ಆಯಿಲ್ ಸೀಡ್ ಅಭಿಯಾನ ಆರಂಭಿಸಲಾಗಿದೆ. ಎಣ್ಣೆಬೀಜಗಳಲ್ಲಿ ಆತ್ಮನಿರ್ಭರತೆಗಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ಮೀನುಗಾರಿಕೆಗೆ ಹೊಸ ಸಚಿವಾಲಯವನ್ನು ಸ್ಥಾಪಿಸಲಾಗುವುದು. ಮತ್ಸö್ಯ ಸಂಪದ ವಿಸ್ತೃತ ಯೋಜನೆ ಮೂಲಕ ೫೫ ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನು ಹೊಂದಲಾಗಿದೆ ಎಂದರು.
ವಸತಿ ಯೋಜನೆ
ಸಮಾಜದಲ್ಲಿನ ಮಧ್ಯಮ ವರ್ಗದವರು ಸ್ವಂತ ಮನೆ ಹೊಂದಲು ಕೇಂದ್ರ ಸರ್ಕಾರವು ವಸತಿ ಯೋಜನೆಯನ್ನು ಪ್ರಾರಂಭಿಸಲಿದೆ. ಗ್ರಾಮೀಣ ವಸತಿ ಯೋಜನೆಯಡಿ ದೇಶದಲ್ಲಿ ಮೂರು ಕೋಟಿ ಮನೆಗಳ ಗುರಿಯನ್ನು ಸಾಧಿಸುವ ಸಮೀಪದಲ್ಲಿ ಇದ್ದೇವೆ. ಮುಂದಿನ ಐದು ವರ್ಷಗಳಲ್ಲಿ ಇನ್ನೂ ಎರಡು ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಟೂರಿಸಂಗೆ ಉತ್ತೇಜನ
ಲಕ್ಷದ್ವೀಪ ಸೇರಿ ನಮ್ಮ ದ್ವೀಪಗಳಲ್ಲಿ ಪ್ರವಾಸೋದ್ಯಮ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳಲಾಗುವುದು. ಪ್ರವಾಸಿ ಕೇಂದ್ರಗಳ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲು ರಾಜ್ಯಗಳನ್ನು ಉತ್ತೇಜಿಸಲಾಗುವುದು, ಅವುಗಳನ್ನು ಜಾಗತಿಕ ಮಟ್ಟದಲ್ಲಿ ಬ್ರ್ಯಾಂಡಿAಗ್ ಮತ್ತು ಮಾರುಕಟ್ಟೆಗೆ ತರಲಾಗುತ್ತದೆ. ಸೌಲಭ್ಯಗಳು ಮತ್ತು ಸೇವೆಗಳ ಗುಣಮಟ್ಟದ ಆಧಾರದ ಮೇಲೆ ಕೇಂದ್ರಗಳ ರೇಟಿಂಗ್ಗೆ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ಹೊಂದಾಣಿಕೆಯ ಆಧಾರದ ಮೇಲೆ ಅಂತಹ ಅಭಿವೃದ್ಧಿಗೆ ಹಣಕಾಸು ಒದಗಿಸಲು ದೀರ್ಘಾವಧಿಯ ಬಡ್ಡಿ ರಹಿತ ಸಾಲಗಳನ್ನು ರಾಜ್ಯಗಳಿಗೆ ಒದಗಿಸಲಾಗುವುದು ಎಂದು ಸಚಿವರು ಹೇಳಿದರು.

ವೈದ್ಯಕೀಯ ಕಾಲೇಜು ಹೆಚ್ಚಿಸುವ ಚಿಂತನೆ
ಕಳೆದ ೧೦ ವರ್ಷಗಳಲ್ಲಿ, ಒಟ್ಟು ೩೯೦ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಕಳೆದ ೧೦ ವರ್ಷಗಳಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳಾ ದಾಖಲಾತಿ ಶೇ.೨೮ರಷ್ಟು ಹೆಚ್ಚಾಗಿದೆ. ಈ ವರ್ಷ ಒಟ್ಟು ೧೫ ಹೊಸ ಎಐಐಎಂಗಳನ್ನು ಪ್ರಾರಂಭಿಸಲಾಗಿದೆ. ಆಸ್ಪತ್ರೆಯ ಮೂಲಸೌಕರ್ಯವನ್ನು ಬಳಸಿಕೊಂಡು ಹೆಚ್ಚಿನ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಸರ್ಕಾರ ಚಿಂತಿಸುತ್ತಿದೆ. ಕಡಿಮೆ ಬಡ್ಡಿ ದರದೊಂದಿಗೆ ಶಿಕ್ಷಣ ಸಾಲದಲ್ಲಿ ದೀರ್ಘಾವಧಿಯ ಹಣಕಾಸು ಮತ್ತು ಮರು-ಹಣಕಾಸು ಒದಗಿಸುವ ನಿಧಿ ಸ್ಥಾಪಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು.

ವಿಕಸಿತ ಭಾರತದ ಸಶಕ್ತಗೊಳಿಸುವ ಬಜೆಟ್ - ಮೋದಿ
ಮಧ್ಯಂತರ ಬಜೆಟ್ ಮಂಡನೆ ನಂತರ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಬಜೆಟ್ ಯುವ ಭಾರತದ ಯುವ ಆಕಾಂಕ್ಷೆಗಳ ಪ್ರತಿಬಿಂಬವನ್ನು ಹೊಂದಿದೆ. ಬಜೆಟ್ನಲ್ಲಿ ಎರಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಂಶೋಧನೆ ಮತ್ತು ಆವಿಷ್ಕಾರಕ್ಕಾಗಿ, ೧ ಲಕ್ಷ ಕೋಟಿ ರೂಪಾಯಿಗಳ ನಿಧಿಯನ್ನು ಘೋಷಿಸಲಾಗಿದೆ.
ಈ ಮಧ್ಯಂತರ ಬಜೆಟ್ ಅಂತರ್ಗತ ಮತ್ತು ನವೀನವಾಗಿದೆ. ಇದು ನಿರಂತರತೆಯ ವಿಶ್ವಾಸವನ್ನು ಹೊಂದಿದೆ. ಇದು ವಿಕಸಿತ ಭಾರತದ ಎಲ್ಲಾ ೪ ಸ್ತಂಭಗಳನ್ನು ಸಶಕ್ತಗೊಳಿಸುತ್ತದೆ. ಯುವಜನತೆ, ಬಡವರು, ಮಹಿಳೆಯರು ಮತ್ತು ರೈತರೇ ಈ ಸ್ತಂಭಗಳಾಗಿದ್ದಾರೆ. ೨೦೪೭ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟçವನ್ನಾಗಿ ಮಾಡುವ ಭರವಸೆಯನ್ನು ಈ ಬಜೆಟ್ ನೀಡುತ್ತದೆ ಎಂದರು.
ಈ ಬಜೆಟ್ನಲ್ಲಿ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊAಡು ಬಂಡವಾಳ ವೆಚ್ಚಕ್ಕೆ ಐತಿಹಾಸಿಕ ಗರಿಷ್ಠ ೧೧,೧೧,೧೧೧ ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಈ ಬಜೆಟ್ ಬಡವರು ಮತ್ತು ಮಧ್ಯಮ ವರ್ಗದವರ ಸಬಲೀಕರಣ ಮತ್ತು ಅವರಿಗೆ ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಒತ್ತು ನೀಡುತ್ತದೆ ಎಂದು ಹೇಳಿದ್ದಾರೆ.