ಕುಶಾಲನಗರ, ಫೆ. ೨ : ಕುಶಾಲನಗರ ಜೆಸಿಐ ನ ೨೦೨೪ ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಜೆಸಿಐ ವಲಯ ೧೪ ರ ಅಧ್ಯಕ್ಷೆ ಆಶಾ ಜೈನ್ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೆಸಿಐ ನಲ್ಲಿ ತೊಡಗಿಸಿಕೊಳ್ಳುವ ಸದಸ್ಯರು ಸಂಸ್ಥೆಯಲ್ಲಿ ಹೆಚ್ಚು ಕ್ರಿಯಾಶೀಲರಾದಲ್ಲಿ ವೈಯಕ್ತಿಕ ಜೀವನದಲ್ಲಿ ಕೂಡ ಯಶಸ್ಸು ಗಳಿಸಿಕೊಳ್ಳಲು ಸಾಧ್ಯ. ಜೆಸಿ ದೊರೆಯುವ ತರಬೇತಿ, ಆತ್ಮವಿಶ್ವಾಸ ನಮ್ಮಲ್ಲಿ ಹೊಸ ಬದಲಾವಣೆ ತರುತ್ತದೆ. ಜೆಸಿಐನಲ್ಲಿ ಅಂತರರಾಷ್ಟಿçÃಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತಾಗಬೇಕಿದೆ ಎಂದರು.

ನೂತನ ಸಾಲಿನ ಅಧ್ಯಕ್ಷರಾಗಿ ಬಿ.ಜಗದೀಶ್, ಕಾರ್ಯದರ್ಶಿಯಾಗಿ ತೇಜ ದಿನೇಶ್ ಅವರನ್ನು ನಿಯೋಜಿಸಲಾಯಿತು. ವಲಯ ಉಪಾಧ್ಯಕ್ಷ ರಾಕೇಶ್ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ನೂತನ ಅಧ್ಯಕ್ಷ ಬಿ.ಜಗದೀಶ್ ಮಾತನಾಡಿ, ಈ ಸಾಲಿನಲ್ಲಿ ಜೆಸಿಐ ಹೆಮ್ಮೆಪಡುವಂತಹ ಅತ್ಯುತ್ತಮ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಬದ್ದನಾಗಿದ್ದೇನೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜೆಸಿಐನ ಮಾಜಿ ರಾಷ್ಟಿçÃಯ ಉಪಾಧ್ಯಕ್ಷ ವಿಕಾಸ್ ಗುಗ್ಲಿಯ, ವಿಶೇಷ ಆಹ್ವಾನಿತರಾದ ಜೆಸಿಐ ಅಲುಮಿನಿ ಕ್ಲಬ್ ಪ್ರಮುಖರಾದ ಎಂ.ಡಿ.ರAಗಸ್ವಾಮಿ ಮಾತನಾಡಿದರು. ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಿ ಸೇರ್ಪಡೆಗೊಳಿಸಲಾಯಿತು. ವಿಶೇಷ ಸಾಧನೆಗೈದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಜೆಸಿಐ ವಲಯ ೧೪ರ ಜೂನಿಯರ್ ಜೆಸಿ ವಿಭಾಗದ ನಿರ್ದೇಶಕ ಪ್ರಶಾಂತ್ ಕೆ.ಡಿ., ಕುಶಾಲನಗರ ಜೆಸಿಐ ನಿಕಟ ಪೂರ್ವ ಅಧ್ಯಕ್ಷ ರಜನಿಕಾಂತ್, ಪ್ರಮುಖರಾದ ಪ್ರವೀಣ್, ಪುನಿತ್, ಕವಿತಾ ಪ್ರವೀಣ್, ಎಚ್.ಕೆ.ಕುಮಾರ್, ಅಮೃತ್ ರಾಜ್, ಲೋಕೇಶ್ ಸಾಗರ್, ಸುಜಯ್ ಮತ್ತಿತರರು ಇದ್ದರು.