*ಸಿದ್ದಾಪುರ, ಫೆ. ೧: ಅಭ್ಯತ್ ಮಂಗಲ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಒಂಟಿ ಸಲಗವೊಂದು ಸ್ಥಳೀಯ ಗ್ರೀನ್ ಫೀಲ್ಡ್ ತೋಟದ ಮನೆಯಂಗಳದಲ್ಲಿ ದಾಂಧಲೆ ನಡೆಸಿದ್ದು, ಕಾಫಿ ಫಸಲನ್ನು ನಾಶ ಮಾಡಿದೆ.
ಕಾಫಿ ಕೊಯ್ಲು ಸಮಯವಾಗಿರುವುದರಿಂದ ಕಾರ್ಮಿಕರು ಆತಂಕದಿAದಲೇ ತೋಟದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.