ಗೋಣಿಕೊಪ್ಪಲು, ಫೆ. ೧: ಪತ್ರಕರ್ತನೋರ್ವ ನಡುರಾತ್ರಿ ೧೨ ಗಂಟೆಯ ವೇಳೆ ಸರ್ಕಾರಿ ಆಸ್ಪತ್ರೆಗೆ ತೆರಳುವ ಮೂಲಕ ಅಲ್ಲಿ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಮೇಲೆ ತನ್ನ ಪೌರುಷ ತೋರಿಸಿದಲ್ಲದೆ. ಆವಾಚ್ಯ ಶಬ್ದಗಳಿಂದ ನಿಂದಿಸಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿ ಇಂಚರ ಕೊಡಗು ಚಾನಲ್‌ನ ಮಾಲೀಕ ಡಿ.ನಾಗೇಶ್‌ನ ಮೇಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೊಂದ ಮಹಿಳೆ ಧೈರ್ಯದಿಂದ ಪೊಲೀಸ್ ಠಾಣೆಗೆ ತೆರಳಿ ಘಟನೆಗೆ ಸಂಬAಧಿಸಿದAತೆ ಲಿಖಿತ ದೂರನ್ನು ನೀಡಿದ ಹಿನ್ನೆಲೆಯಲ್ಲಿ ಗೋಣಿಕೊಪ್ಪ ಠಾಣೆಯ ಠಾಣಾಧಿಕಾರಿ ರೂಪಾದೇವಿ ಬೀರಾದಾರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ನಾಗೇಶ್ ಬಾಯಿಗೆ ಬಟ್ಟೆಯನ್ನು ಕಟ್ಟಿಕೊಂಡು ಗೋಣಿಕೊಪ್ಪಲಿನ ಸರ್ಕಾರಿ ಆಸ್ಪತ್ರೆಗೆ ನಡು ರಾತ್ರಿಯ ವೇಳೆ ತೆರಳಿ ಕರ್ತವ್ಯ ನಿರತ ಮಹಿಳಾ ಸಿಬ್ಬಂದಿ ಇರುವ ಕೊಠಡಿಯ ಬಾಗಿಲನ್ನು ಬಲವಂತವಾಗಿ ಬಡಿದು, ಕಾಲಿನಿಂದ ಒದ್ದು ಬಾಗಿಲನ್ನು ತೆರೆಸಿದ್ದ.

ನಂತರ ಆವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಹಲವರ ಮೇಲೆ ಹಲ್ಲೆಗೆ ಮುಂದಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ‘ಶಕ್ತಿ’ಯಲ್ಲಿ ಈತನ ವೀಡಿಯೋದ ಬಗ್ಗೆ ಸುದ್ದಿ ಪ್ರಕಟಗೊಂಡಿತ್ತು. ಸುದ್ದಿ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಕುಮಾರ್‌ರವರು ಪ್ರಕರಣಕ್ಕೆ ಸಂಬAಧಿಸಿದAತೆ ಗೋಣಿಕೊಪ್ಪ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಮೇಲಾಧಿಕಾರಿಗಳ ಸೂಚನೆ ಮೇರೆ ಘಟನೆಗೆ ಸಂಬAಧಿಸಿದAತೆ ವಿವರ ನೀಡಿದ್ದಾರೆ. ಅಲ್ಲದೆ ಅನ್ಯಾಯಕ್ಕೆ ಒಳಗಾದ ಮಹಿಳೆಯ ರಕ್ಷಣೆಗೆ ನಿಲ್ಲುವುದರೊಂದಿಗೆ ಪೊಲೀಸ್ ದೂರು ನೀಡಿದ್ದಾರೆ.

ಆರೋಪಿ ನಾಗೇಶ್ ಗೋಣಿಕೊಪ್ಪಲುವಿನ ತನ್ನ ಚಾನಲ್ ಕಚೇರಿಯ ಬಳಿ ನಿಲ್ಲಿಸಿದ್ದ ಬೈಕ್ ಹಾಗೂ ಕಾರಿನೊಂದಿಗೆ ಪರಾರಿಯಾಗಿದ್ದಾನೆ. ನಂತರ ತನ್ನ ಮೊಬೈಲ್‌ನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಪೊಲೀಸರ ಆರಂಭಿಕ ಮಾಹಿತಿ ಪ್ರಕಾರ ಆರೋಪಿ ನಾಗೇಶ್ ೮ ಸಿಮ್ ಕಾರ್ಡ್ಗಳನ್ನು ಹೊಂದಿರುವುದು ಪ್ರಾಥಮಿಕ ಮಾಹಿತಿಯಲ್ಲಿ ಲಭ್ಯವಾಗಿದೆ. ಪೊಲೀಸರು ಈತನ ಬಂಧನಕ್ಕಾಗಿ ಕ್ರಮ ಕೈಗೊಂಡಿದ್ದಾರೆ.

ನೊAದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಮೂರು ತಿಂಗಳ ಹಿಂದೆ ನಾಗೇಶ್‌ನ ಇಂಚರ ನ್ಯೂಸ್ ಚಾನಲ್‌ಗೆ ವಾರ್ತೆ ಓದುವ ಬಗ್ಗೆ ಕೇಳಿಕೊಂಡಿದ್ದು ಮಾಸಿಕ ೧೦ ಸಾವಿರ ನೀಡುವುದಾಗಿ ಹೇಳಿದ್ದ. ನಂತರ ನಾಗೇಶ್ ತನಗೆ ಕಷ್ಟ ಇರುವುದಾಗಿ ಹೇಳಿ ಈಕೆ ಬಳಿ ಇದ್ದ ಲಕ್ಷಾಂತರ ಬೆಲೆಬಾಳುವ ಒಡವೆಗಳನ್ನು ಪಡೆದುಕೊಂಡಿದ್ದ. ಇಲ್ಲಿಯ ತನಕ ಪಡೆದುಕೊಂಡ ಚಿನ್ನಾಭರಣಗಳನ್ನು ವಾಪಾಸು ನೀಡಿರುವುದಿಲ್ಲ. ಈ ಬಗ್ಗೆ ಆತನನ್ನು ವಿಚಾರಿಸಿದಾಗ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾನೆ. ಅಲ್ಲದೆ ಆಕೆಯನ್ನು ಹಿಂಬಾಲಿಸಿಕೊAಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ದಿನಾಂಕ ೬ ರಂದು ರಾತ್ರಿ ೧೨ ಗಂಟೆಗೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾಗ ಹಣಕಾಸಿನ ವ್ಯವಹಾರದ ಬಗ್ಗೆ ಜಗಳ ತೆಗೆದು ಆಕೆಯನ್ನು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ಗಂಡನಿಗೆ ಈ ವಿಷಯ ತಿಳಿದು ಗಂಡ ಆಸ್ಪತ್ರೆಗೆ ಬಂದು ಕೇಳಿದಾಗ ಆತ ಹಲ್ಲೆಗೆ ಮುಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಒಡ್ಡಿರುತ್ತಾನೆ ಎಂದು ದೂರಿನಲ್ಲಿ ನೊಂದ ಮಹಿಳೆ ವಿವರಿಸಿದ್ದಾಳೆ.

-ಹೆಚ್.ಕೆ. ಜಗದೀಶ್