ಮಡಿಕೇರಿ, ಫೆ. ೧: ಮೂಲತಃ ಕಡಂಗ ಮರೂರಿನವರಾದ ಅಂತರರಾಷ್ಟಿçÃಯ ಹಾಕಿ ಆಟಗಾರ ರಾಗಿದ್ದ ಅಮ್ಮಂಡ ವಾಸು ಉತ್ತಯ್ಯ (೮೨) ಅವರು ತಾ.೧ ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ೧೯೬೯ರಲ್ಲಿ ಭಾರತ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದ ಇವರು ೧೯೭೦ ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷಿಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕದ ಸಾಧನೆಗೈದಿದ್ದಾರಲ್ಲದೆ ಕರ್ನಾಟಕ ಹಾಕಿ ತಂಡದ ನಾಯಕ ರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಬೆಂಗಳೂರಿನ ಕಲ್ಲಹಳ್ಳಿ ಕ್ರಿಮಿಟೋರಿಯಂನಲ್ಲಿ

ತಾ.೩ ರಂದು ನಡೆಯಲಿದೆ. ಮೃತರು ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.