ಕೋವರ್ ಕೊಲ್ಲಿ ಇಂದ್ರೇಶ್

ವಾರಣಾಸಿ, ಜ. ೩೧: ವಾರಣಾಸಿ ಜಿಲ್ಲಾ ನ್ಯಾಯಾಲಯವು ಹಿಂದೂಗಳ ಕಡೆಯವರು ಜ್ಞಾನ ವಾಪಿ ಮಸೀದಿಯ ನೆಲಮಾಳಿಗೆ ಯಲ್ಲಿ ಪೂಜೆ ಸಲ್ಲಿಸಲು ಅನುಮತಿ ನೀಡಿದೆ. ಶ್ರೀ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ನಿಂದ ನಾಮ ನಿರ್ದೇಶನಗೊಂಡ ಪೂಜಾರಿ ಮತ್ತು ಹಿಂದೂ ಕಡೆಯಿಂದ ಪೂಜೆಯನ್ನು ಮಾಡಲು ೭ ದಿನಗಳೊಳಗೆ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.

ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯ ಪ್ರಕಾರ, ಅರ್ಚಕ ಸೋಮನಾಥ ವ್ಯಾಸ್ ಅವರು ೧೯೯೩ ರವರೆಗೆ (ಅಧಿಕಾರಿಗಳು ನೆಲಮಾಳಿ ಗೆಯನ್ನು ಮುಚ್ಚುವವರೆಗೆ) ಅಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಅವರ ಸರ್ಕಾರ ಪೂಜೆಯನ್ನು ನಿಷೇಧಿಸಿ ಬಾಗಿಲು ಮುಚ್ಚಿತ್ತು. ಕಳೆದ ವಾರ ನ್ಯಾಯಾಲಯದ ಆದೇ ಶದ ಮೇರೆಗೆ ವಾರಣಾಸಿ ಜಿಲ್ಲಾ ಧಿಕಾರಿಗಳು ಜ್ಞಾನವಾಪಿ ನೆಲಮಾ ಳಿಗೆಯ ಕೀಗಳನ್ನು ಮಸೀದಿ ಕಡೆ ಯವರಿಂದ ಸ್ವಾಧೀನಪಡಿಸಿ ಕೊಂಡಿದ್ದರು. ೧೯೯೩ಕ್ಕೂ ಮೊದಲು ಈ ನೆಲಮಾಳಿಗೆಯಲ್ಲಿ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಅಯೋಧ್ಯೆಯ ಬಾಬ್ರಿ ಮಸೀದಿಯ ವಿವಾದಿತ ಕಟ್ಟಡದ ದ್ವಂಸ ನಂತರ, ವಾರಣಾಸಿ ಜಿಲ್ಲಾಡಳಿತ ಜ್ಞಾನವಾಪಿ ಸುತ್ತಲೂ ಕಬ್ಬಿಣದ ಸರಳುಗಳನ್ನು ಅಳವಡಿಸಿತ್ತು.

ಅರ್ಚಕ ಸೋಮನಾಥ ವ್ಯಾಸ್ ಅವರ ಕುಟುಂಬವು ಈ ನೆಲಮಾಳಿ ಗೆಯಲ್ಲಿ ನಿಯಮಿತ ಪೂಜೆಯನ್ನು ಮಾಡುತ್ತಿತ್ತು. ವ್ಯಾಸ್‌ಜಿ ಅವರ ಮೊಮ್ಮಗ ಶೈಲೇಂದ್ರ ಕುಮಾರ್ ವ್ಯಾಸ್ ಮರು ಪೂಜೆಗೆ ಅವಕಾಶ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜ್ಞಾನವಾಪಿ ಮಸೀದಿಯಲ್ಲಿ ಒಟ್ಟು ನಾಲ್ಕು ತೆಹಖಾನಾ(ನೆಲ ಮಾಳಿಗೆಗಳು)ಗಳಿವೆ. ಪ್ರಸ್ತುತ ಈ ನೆಲಮಾಳಿಗೆಯು ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿಯ ವಶದಲ್ಲಿತ್ತು. ಮಂಗಳವಾರವೂ ಈ ಕುರಿತು ಅರ್ಜಿಯ ವಿಚಾರಣೆ ನಡೆದಿದ್ದು, ನಿತ್ಯ ಪೂಜೆಯ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿದ ಮುಸ್ಲಿಂ ಪರ ಅಂಜುಮನ್ ಮಸೀದಿ ಸಮಿತಿ ಪರ ವಕೀಲರು ರಿಸೀವರ್ ನೇಮಕದ ಬಗ್ಗೆ ಮಾತ್ರ ನ್ಯಾಯಾಲಯ ಈ ಹಿಂದೆ ಆದೇಶಿಸಿದೆ ಎಂದು ವಾದಿಸಿದರು. ಅದರಲ್ಲಿ ಪೂಜಾ ಹಕ್ಕುಗಳ ಉಲ್ಲೇಖವಿಲ್ಲ. ಹಾಗಾಗಿ ಪ್ರಕರಣ ಇತ್ಯರ್ಥವಾಗಿದೆ ಎಂದು ಪರಿಗಣಿಸಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದ್ದರು. ಆದರೆ ಎಎಸ್‌ಐ ವೈಜ್ಞಾನಿಕ ಸಮೀಕ್ಷೆಯ ವರದಿ ನೀಡಿದ ಹಿನ್ನೆಲೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹಿಂದೂ ಪರ ವಕೀಲರು ವಾದಿಸಿದರು.

ಈ ಕುರಿತು ಮಾತನಾಡಿದ ಹಿಂದೂ ಪರ ವಕೀಲ ವಿಷ್ಣು ಶಂಕರ ಜೈನ್ ಅವರು, ಅಸ್ತಿತ್ವದಲ್ಲಿರುವ ದೇವಾಲಯದ ಅವಶೇಷಗಳ ಮೇಲೆ ಜ್ಞಾನವಾಪಿ ನಿರ್ಮಿಸಲಾಗಿದೆ ಎಂದು ಎಎಸ್‌ಐ ಸಮೀಕ್ಷೆ ವರದಿಯನ್ನು ಉಲ್ಲೇಖಿಸಿ ವಾದ ಮಂಡಿಸಲಾಗಿತ್ತು. ಇನ್ನು ಏಳು ದಿನಗಳಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಆರಂಭವಾ ಗಲಿದೆ ಎಂದು ತಿಳಿಸಿದ ಜೈನ್, ಕಾಶಿ ವಿಶ್ವನಾಥ ದೇವಸ್ಥಾನದ ಟ್ರಸ್ಟ್ ಪೂಜೆ ಯನ್ನು ಹೇಗೆ ಮಾಡಬೇಕೆಂಬುದನ್ನು ನಿರ್ಧರಿಸುತ್ತದೆ ಎಂದರು. ಶೀಘ್ರದಲ್ಲೇ ಕಾನೂನು ಹೋರಾಟವನ್ನು ಮುಗಿಸಿ ಗೆಲ್ಲುತ್ತೇವೆ ಎಂದು ಅವರು ಹೇಳಿದರು.

ಮತ್ತೋರ್ವ ಹಿಂದೂ ಪರ ವಕೀಲ ಮದನ್ ಮೋಹನ್ ಅವರು “ಅಲ್ಲಿ ಪೂಜೆಯನ್ನು ಏಕೆ ನಿಲ್ಲಿಸ ಲಾಯಿತು ಎಂಬುದಕ್ಕೆ ಯಾವುದೇ ಕಾರಣವಿಲ್ಲ, ದೇವಾಲಯದ ಟ್ರಸ್ಟ್ ಈಗ ಇಲ್ಲಿ ಪೂಜೆಯನ್ನು ಮಾಡಲಿದೆ, ಇದರ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ” ಎಂದರು.

ಏತನ್ಮಧ್ಯೆ, ಅಂಜುಮನ್ ಇಂತೇ ಜಾಮಿಯಾ ಮಸೀದಿ ಸಮಿತಿಯ ವಕೀಲ ಅಖ್ಲಾಕ್ ಅಹ್ಮದ್ ಅವರು ಈ ಆದೇಶವನ್ನು ಉನ್ನತ ನ್ಯಾಯಾಲಯ ದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.

ಜ್ಞಾನವಾಪಿ ಮಸೀದಿಯ ಬಗ್ಗೆ ಎಎಸ್‌ಐ ವರದಿ ಹೇಳಿದ್ದು ಇಲ್ಲಿದೆ:

ಅಸ್ತಿತ್ವದಲ್ಲಿರುವ ರಚನೆಗಳ ಆಳವಾದ ಅಧ್ಯಯನವನ್ನು ಮತ್ತು ಪ್ರದೇಶದಲ್ಲಿ ಸಿಕ್ಕಿದ ವೈಶಿಷ್ಟ್ಯಗಳು ಮತ್ತು ಕಲಾಕೃತಿಗಳನ್ನು ಉಲ್ಲೇಖಿಸಿ, ಪುರಾತತ್ವ ಇಲಾಖೆ ತನ್ನ ವರದಿಯಲ್ಲಿ ೧೭ನೇ ಶತಮಾನದಲ್ಲಿ "ಅಸ್ತಿತ್ವದಲ್ಲಿರುವ ರಚನೆಯನ್ನು ನಿರ್ಮಿಸುವ ಮೊದಲು ದೊಡ್ಡ ಹಿಂದೂ ದೇವಾಲಯವು ಅಸ್ತಿತ್ವದಲ್ಲಿತ್ತು" ಎಂದು ವರದಿ ನೀಡಿದೆ.

ಕಲ್ಲುಗಳಿಂದ ಮಾಡಲ್ಪಟ್ಟ ಮತ್ತು ಅಚ್ಚುಗಳಿಂದ ಅಲಂಕರಿಸಲ್ಪಟ್ಟ ಪಶ್ಚಿಮ ಗೋಡೆಯು ಹಿಂದಿನ ಹಿಂದೂ ದೇವಾಲಯದ ಭಾಗವಾಗಿ ಉಳಿದಿದೆ ಎಂದು ವರದಿಯು ಧೃಢಪಡಿಸಿದೆ.

ಇದು ಅಸ್ತಿತ್ವದಲ್ಲಿರುವ ವಾಸ್ತು ಶಿಲ್ಪದ ಅವಶೇಷಗಳು, ಗೋಡೆಗಳ ಮೇಲೆ ಅಲಂಕೃತವಾದ ಅಚ್ಚುಗಳು, ಕೇಂದ್ರ ಕೊಠಡಿಯ "ಕರ್ಮ-ರಥ" ಮತ್ತು "ಪ್ರತಿ-ರಥ" ಪೂರ್ವ ಗೋಡೆಯ ಮೇಲೆ ಅಲಂಕಾರಿಕ ಸ್ಕರ್ಟಿಂಗ್‌ನೊAದಿಗೆ ದೊಡ್ಡ ಪ್ರವೇಶ ದ್ವಾರವನ್ನು ಉಲ್ಲೇಖಿಸಿದೆ. ಪಶ್ಚಿಮ ಕೋಣೆ, ಬಾಗಿಲಿನ ಎದುರು ವಿರೂಪಗೊಂಡ ಚಿತ್ರದೊಂದಿಗೆ ಸಣ್ಣ ಪ್ರವೇಶದ್ವಾರ, ಒಳಗೆ ಮತ್ತು ಹೊರಗೆ ಪಕ್ಷಿಗಳು ಮತ್ತು ಪ್ರಾಣಿಗಳನ್ನು ಕೆತ್ತಲಾಗಿದೆ, ಪಶ್ಚಿಮ ಗೋಡೆಯು ಹಿಂದೂ ದೇವಾಲಯದ ಉಳಿದ ಭಾಗವಾಗಿದೆ ಎಂದು ಸೂಚಿಸುತ್ತದೆ.

ಎಎಸ್‌ಐ ಅಧಿಕಾರಿಗಳು ಅಸ್ತಿತ್ವದಲ್ಲಿರುವ ರಚನೆಯಲ್ಲಿ ಬಳಸ ಲಾದ ಕಂಬಗಳು ಮತ್ತು ಪೈಲಸ್ಟರ್ ಗಳನ್ನು ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಮೊದಲು ಅಸ್ತಿತ್ವದಲ್ಲಿರುವ ದೇವಾಲ ಯದ ಭಾಗಗಳನ್ನು ಪ್ರಸ್ತುತ ರಚನೆ ಯಲ್ಲಿ ಬಳಸಲಾಗಿದೆ ಎಂದು ಹೇಳಿದ್ದಾರೆ.

ವೈಜ್ಞಾನಿಕ ತನಿಖೆಗಳು/ಸಮೀ ಕ್ಷೆಯ ಸಮಯದಲ್ಲಿ ಹಲವಾರು ಸಂಸ್ಕೃತ ಮತ್ತು ದೇವನಾಗರಿ ಶಿಲಾ ಶಾಸನಗಳು ಮೊದಲೇ ಆಗಿದ್ದ ರಚನೆ ಮತ್ತು ಅಸ್ತಿತ್ವದಲ್ಲಿರುವ ರಚನೆಯ ಮೇಲೆ ಕಂಡುಬAದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"೧೨ ರಿಂದ ೧೭ ನೇ ಶತಮಾ ನದವರೆಗಿನ ಈ ಹೆಚ್ಚಿನ ಶಾಸನ ಗಳನ್ನು ರಚನೆಯಲ್ಲಿ ಮರುಬಳಕೆ ಮಾಡಲಾಗಿದೆ, ಹಿಂದಿನ ರಚನೆಗ ಳನ್ನು ನಾಶಪಡಿಸಲಾಗಿದೆ ಮತ್ತು ಅವುಗಳ ಭಾಗಗಳನ್ನು ನಂತರ ನಿರ್ಮಾಣ / ದುರಸ್ತಿಗೆ ಮರುಬಳಕೆ ಮಾಡಲಾಗಿದೆ ಎಂದು ಸೂಚಿಸುತ್ತದೆ" ಎಂದು ವರದಿ ಹೇಳಿದೆ.

ಹಿಂದೂ ದೇವತೆಗಳ ಶಿಲ್ಪಗಳು ಮತ್ತು ಕೆತ್ತಿದ ವಾಸ್ತುಶಿಲ್ಪದ ಮೂರ್ತಿಗಳನ್ನು ನೆಲಮಾಳಿಗೆ ಯೊಂದರಲ್ಲಿ ಮಣ್ಣಿನ ಅಡಿಯಲ್ಲಿ ಹೂತುಹಾಕಿರುವುದು ಕಂಡುಬAದಿದೆ ಎಂದು ವರದಿಯು ಗಮನಸೆಳೆದಿದೆ.

ಪೂರ್ವ ಭಾಗದಲ್ಲಿ ನೆಲಮಾ ಳಿಗೆಗಳನ್ನು ನಿರ್ಮಿಸುವಾಗ ಹಿಂದಿನ ದೇವಾಲಯಗಳ ಕಂಬಗಳನ್ನು ಮರುಬಳಕೆ ಮಾಡಲಾಯಿತು. ಗಂಟೆಗಳಿAದ ಅಲಂಕರಿಸಲ್ಪಟ್ಟ ಕಂಬ, ನಾಲ್ಕು ಬದಿಗಳಲ್ಲಿ ದೀಪಗಳನ್ನು ಇಡಲು ಗೂಡುಗಳು ಮತ್ತು ೧೬೬೯ರ ಶಿಲಾ ಶಾಸನವನ್ನು ನೆಲಮಾಳಿ ಗೆಯಲ್ಲಿ ಮರುಬಳಕೆ ಮಾಡಲಾಗಿದೆ ಎಂದು ವರದಿ ಹೇಳಿದೆ.