ಕೊಡಗಿನ ರೇಷ್ಮೆ ಇಲಾಖೆಯ ಈ ದುರವಸ್ಥೆ ಕುರಿತು ಇದೀಗ ಪ್ರಬಾರ ಹೊರೆ ಹೊತ್ತಿರುವ ಪಿರಿಯಾಪಟ್ಟಣದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಮಾದೇಶ್ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ಅವರು ಜಿಲ್ಲೆಯಲ್ಲಿ ರೇಷ್ಮೆಗೆ ಉಜ್ವಲ ಭವಿಷ್ಯವಿದೆ ಎಂದು ಅಭಿಪ್ರಾಯಪಟ್ಟರು. ಆದರೆ ಕೊಡಗಿನಲ್ಲಿ ರೇಷ್ಮೆ ಅಧಿಕಾರಿಯ ಹುದ್ದೆ ಖಾಲಿಯಿದೆ. ಇದೀಗ ಅಧೀಕ್ಷಕರೊಬ್ಬರು ಮಾತ್ರ ಉಸ್ತುವಾರಿ ನಡೆಸುತ್ತಿದ್ದು, ಒಬ್ಬರು ‘ಡಿ’ ಗ್ರೂಪ್ ಸಿಬ್ಬಂದಿ ಇದ್ದಾರೆ. ರೇಷ್ಮೆ ಅಧಿಕಾರಿ ಮತ್ತಿತರ ಅನೇಕ ಸಿಬ್ಬಂದಿಗಳ ಅವಶ್ಯಕತೆ ಇದೆ. ಈ ಕುರಿತು ತಾನು ಸಂಬAಧಿತ ಸಚಿವರ ಗಮನಕ್ಕೆ ತಂದಿರುವುದಾಗಿ ಅವರು ಮಾಹಿತಿಯಿತ್ತರು. ಕೊಡಗಿನಲ್ಲಿ ಸದ್ಯಕ್ಕೆ ಕೇವಲ ೩೨ ಮಂದಿ

ಜಿಲ್ಲೆಯಲ್ಲಿ ಅಧಿಕಾರಿಯೆ ಇಲ್ಲ

(ಮೊದಲ ಪುಟದಿಂದ) ಮಾತ್ರ ರೇಷ್ಮೆ ಕೈಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಕೃಷಿಕರಿಗೆ ಈ ವಿಭಾಗದಲ್ಲಿ ಹೆಚ್ಚಿನ ಆದಾಯಗಳಿಸುವ ಕುರಿತು ತಾನು ಕೂಡ ಆಗ್ಗಿಂದಾಗ್ಗೆ ಕುಶಾಲನಗರ ವಿಭಾಗಕ್ಕೆ ಬರುತ್ತಿದ್ದು ಮಾಹಿತಿ ನೀಡುತ್ತಿರುವುದಾಗಿ ತಿಳಿಸಿದರು. ಕೃಷಿಕರು ಹಿಪ್ಪುನೇರಳೆ ಗಿಡಗಳನ್ನು ಬೆಳೆದು ತಮ್ಮ ಕ್ಷೇತ್ರದಲ್ಲಿಯೆ ರೇಷ್ಮೆ ಬಿತ್ತನೆ ಗೂಡುಗಳನ್ನು ರಚಿಸಿಕೊಳ್ಳುತ್ತಾರೆ. ಹಿಪ್ಪುನೇರಳೆಯನ್ನೆ ಮರಿ ಹುಳುಗಳಿಗೆ ಆಹಾರ ನೀಡಿ ಬೆಳೆಸುತ್ತಾರೆ. ಈ ಬಿತ್ತನೆಗೂಡು ೧ ಕೆ.ಜಿಗೆ ರೂ. ೧೬೦೦ ರಿಂದ ೧೮೦೦ರವರೆಗೆ ಮಾರಾಟಗೊಳ್ಳುತ್ತಿದೆ. ಗುಡ್ಡೆಹೊಸೂರುವಿನ ರೇಷ್ಮೆ ಬೆಳೆಗಾರರೊಬ್ಬರು ತಮ್ಮ ಉತ್ತಮ ಗೂಡಿಗೆ ಕೆ.ಜಿ.ಗೆ ರೂ. ೩೫೦೦ ಪಡೆದಿದ್ದೂ ಇದೆ. ಇತರ ಪ್ರದೇಶಗಳಿಗೆ ಹೋಲಿಸಿದರೆ ಕೊಡಗಿನ ಬಿತ್ತನೆ ಗೂಡು ಅತ್ಯುತ್ತಮವಾಗಿದ್ದು, ಹೆಚ್ಚಿನ ದರವೂ ಲಭ್ಯವಾಗುತ್ತಿದೆ. ಆದರೆ ಈ ಕೃಷಿಯಲ್ಲಿ ಮುಖ್ಯವಾಗಿ ಬೇಕಾದುದು ಕೃಷಿಕರಿಗೆ ತಾಳ್ಮೆ ಮತ್ತು ಸಮಯವಕಾಶವನ್ನು ಸಮರ್ಪಕವಾಗಿ ವಿನಿಯೋಗಿಸುವುದು. ಏಕೆಂದರೆ ಬಿತ್ತನೆ ಗೂಡಿನ ಹುಳುಗಳಿಗೆ ನಿರಂತರವಾಗಿ ಸುಮಾರು ೪೫ ದಿನಗಳವರೆಗೆ ಹಿಪ್ಪುನೇರಳೆ ಆಹಾರವನ್ನು ಕಾಲಕಾಲಕ್ಕೆ ನೀಡಬೇಕು. ಹೀಗೆ ಸುಮಾರು ವರ್ಷದ ಐದು ಅವಧಿಯಲ್ಲಿ ಬಿತ್ತನೆ ಗೂಡುಗಳನ್ನು ತಯಾರಿಸುವ ಅವಕಾಶವಿದೆ. ಆದರೆ ಅನೇಕ ಕೃಷಿಕರು ಸಮಯ ವಿನಿಯೋಗ ಮಾಡಲು ಹಿಂದೇಟು ಹಾಕುತ್ತಿರುವುದರಿಂದ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಕುಂಟಿತಗೊಳ್ಳುವAತಾಗಿದೆ. ಇದನ್ನು ಸಾಧ್ಯವಾದಷ್ಟು ಪ್ರಮಾಣದಲ್ಲಿ ಸರಿಪಡಿಸಿ ಬೆಳೆಗಾರರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತದೆ. ಇದೀಗ ರೇಷ್ಮೆ ಬೆಳೆಗಾರರು ತಮ್ಮ ರೇಷ್ಮೆ ಬಿತ್ತನೆ ಗೂಡುಗಳನ್ನು ಬೆಂಗಳೂರು ಅಥವಾ ಕೆ.ಆರ್. ಪೇಟೆ ಮಾರುಕಟ್ಟೆಗೆ ಒಯ್ಯಬೇಕಾಗಿದೆ. ಸದ್ಯದಲ್ಲಿಯೇ ಕುಶಾಲನಗರದಲ್ಲಿಯೇ ಮಾರುಕಟ್ಟೆ ಸ್ಥಾಪಿಸಲು ಪ್ರಯತ್ನಿಸಲಾಗುವುದು ಎಂದು ಮಾದೇಶ್ ‘ಶಕ್ತಿ’ಯೊಂದಿಗೆ ಅಭಿಪ್ರಾಯಪಟ್ಟರು.