ಗೋಣಿಕೊಪ್ಪಲು, ಜ. ೩೧: ಗೋಣಿಕೊಪ್ಪಲು ಕೂರ್ಗ್ ಪಬ್ಲಿಕ್ ಶಾಲೆಯ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭವು ಜರುಗಿತು. ವಿದ್ಯಾರ್ಥಿಗಳಿಗೆ ಪ್ರತಿಕ್ಷಣವೂ ಅಮೂಲ್ಯ ತಂತ್ರಜ್ಞಾನದ ಯುಗದಲ್ಲಿ ಪ್ರಗತಿ ಹೊಂದಬೇಕಾದರೆ ಹೆಚ್ಚಿನ ಶ್ರಮ ಅಗತ್ಯ ಎಂದು ವೀರಾಜಪೇಟೆ ಕೊಡಗು ದಂತ ವೈದ್ಯಕೀಯ ಮಹಾವಿದ್ಯಾಲಯದ ಡಾ. ಕೆ.ಸಿ. ಪೊನ್ನಪ್ಪ ಹೇಳಿದರು.

ಕೂರ್ಗ್ ಪಬ್ಲಿಕ್ ಶಾಲೆಯ ಪದವಿ ಪ್ರಮಾಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಎಂದೆAದಿಗೂ ಕಂಡರಿಯರ ರೀತಿಯಲ್ಲಿ ಸ್ಪರ್ಧೆಗಳು ಎಲ್ಲಾ ರಂಗದಲ್ಲಿಯೂ ಏರ್ಪಟ್ಟಿದೆ. ಉತ್ತಮವಾಗಿ ಓದಿದರೆ ಮಾತ್ರ ಸ್ಪರ್ಧೆ ಕಣದಲ್ಲಿ ಉಳಿಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಎಂ.ಡಿ. ನಂಜುAಡ ಮಾತನಾಡಿ, ಯುವಕರು ಯಾವುದೇ ಸಂದರ್ಭ ಎದೆಗುಂದಬಾರದು. ಎಂದಿಗೂ ಅವಕಾಶಗಳ ಶೋಧದಲ್ಲಿರ ಬೇಕು ಮೊದಲು ತಮ್ಮ ಬಗ್ಗೆ ಆತ್ಮವಿಶ್ವಾಸವಿರಬೇಕು. ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳು ವಿಶ್ವದೆಲ್ಲೆಡೆ ಕಾಣಬಹುದಾಗಿದೆ. ಇದು ಎಲ್ಲರಿಗೂ ಸ್ಫೂರ್ತಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಪದವಿ ಪ್ರದಾನ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿ ಗಳು ಸ್ವಾಗತಿಸಿ, ವಂದಿಸಿದರು.