ಹಾಸನ, ಜ. ೩೧: ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟಗಳನ್ನು ಮಾಡಿರುವ ಬೆಳೆಗಾರರಿಗೆ ಅವುಗಳನ್ನು ದೀರ್ಘಾವಧಿ ಗುತ್ತಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗ ದಿದ್ದರೆ ಹೋರಾಟ ಆರಂಭಿಸ ಲಾಗುವುದು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದರು.
ಹಾಸನದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾವು ಕಂದಾಯ ಸಚಿವರಾಗಿದ್ದಾಗ ಬಿಜೆಪಿ ಸರ್ಕಾರವು ಈ ಲೀಸ್ಗೆ ನೀಡುವ ಕಾಯ್ದೆಯನ್ನು ಜಾರಿಗೆ ತಂದಿದ್ದು ಸಾವಿರಾರು ಬಡ ಕಾಫಿ ಬೆಳೆಗಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆ ರೂಪಿಸಲಾಗಿತ್ತು. ೩೦-೪೦ ಕ್ಕೂ ಹೆಚ್ಚು ವರ್ಷಗಳಿಂದ ಕಾಫಿ ಬೆಳೆಯುತ್ತಿರುವ ಸಣ್ಣ ಬೆಳೆಗಾರರಿಗೆ ಕೆಲವು ಷರತ್ತುಗಳೊಂದಿಗೆ ಭೂಮಿಯನ್ನು ಲೀಸ್ಗೆ ನೀಡಲು ನಿರ್ಧರಿಸಲಾಗಿತ್ತು. ಇದರಲ್ಲಿ ೩೦ ವರ್ಷಗಳ ನಿಗದಿತ ಶುಲ್ಕವನ್ನು ಸರ್ಕಾರಕ್ಕೆ ಪಾವತಿಸಿ ಭೂ ಸ್ವಾಧೀನ ಸೇರಿದಂತೆ ಷರತ್ತಿನೊಂದಿಗೆ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು.
ಆದರೆ ಪ್ರಸ್ತುತ ಕಾಂಗ್ರೆಸ್ ಸರ್ಕಾರವು ದ್ವೇಷದ ರಾಜಕಾರಣ ದಿಂದಾಗಿ ಈ ಲೀಸ್ ಕಾಯ್ದೆಯನ್ನು ಜಾರಿಗೊಳಿಸುತ್ತಿಲ್ಲ. ಇದರಿಂದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ನೂರಾರು ಕಾಫಿ ಬೆಳೆಗಾರರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ನೆರೆಯ ಕೇರಳ ರಾಜ್ಯದಲ್ಲಿಯೂ ಕೂಡ ಇದೇ ಮಾದರಿಯಲ್ಲಿ ಜಮೀನು ನೀಡಲಾಗಿದೆ. ನಾನು ಕೈಗೊಂಡ ಕ್ರಮದಿಂದ ಸರ್ಕಾರಕ್ಕೆ ೨೦೦-೩೦೦ ಕೋಟಿ ರೂಪಾಯಿ ಆದಾಯ ಬರುತ್ತದೆ. ಕೂಡಲೇ ಸರ್ಕಾರ ಮತ್ತೆ ಲೀಸ್ಗೆ ಜಮೀನು ನೀಡಬೇಕು. ಇಲ್ಲವಾದರೆ ಬಿಜೆಪಿ ಬೆಂಬಲದಿAದ ಕಾಫಿ ಬೆಳೆಗಾರರು ಹೋರಾಟ ಮಾಡಲಿದ್ದಾರೆ. ಮುಂದಿನ ವಿಧಾನಸಭಾ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದರು.
(ಮೊದಲ ಪುಟದಿಂದ) ಈ ಕಾಯ್ದೆಯ ಪ್ರಕಾರ ಆಯಾ ಜಿಲ್ಲಾಧಿಕಾರಿಗಳು ಬೆಳೆಗಾರರಿಂದ ನಿಗದಿತ ಶುಲ್ಕ ಪಡೆದುಕೊಂಡು ಸರ್ಕಾರಕ್ಕೆ ಬೇಕಾದ ಜಮೀನನ್ನು ಪಡೆದು ಉಳಿದ ಜಮೀನನ್ನು ಗುತ್ತಿಗೆಗೆ ನೀಡಬಹುದು. ಆದರೆ ಒತ್ತುವರಿದಾರರು ಯಾವುದೇ ದಾಖಲೆ ಒತ್ತುವರಿ ಕಾಫಿ ತೋಟಗಳನ್ನು ಗುತ್ತಿಗೆಗೆ ನೀಡದಿದ್ದರೆ ಹೋರಾಟ
ಇಲ್ಲದೆ ಅನಧಿಕೃತವಾಗಿ ವ್ಯವಸಾಯ ಮಾಡುತಿದ್ದರೆ ಸರ್ಕಾರಕ್ಕೂ ಆದಾಯ ಬರುವುದಿಲ್ಲ, ಸರ್ಕಾರದ ಸ್ವತ್ತು ಎಂಬುದೂ ಅಧಿಕೃತವಾಗಿರುವುದಿಲ್ಲ. ಈಗ ಕೇವಲ ಒತ್ತುವರಿ ಎಂದೇ ಇದೆ. ಮುಂದೆ ಸಮಸ್ಯೆ ಬೆಳೆದರೆ ಇಡೀ ಜಮೀನು ಸರ್ಕಾರದ ಮಾಲೀಕತ್ವದ ಕೈ ತಪ್ಪುವ ಸಾಧ್ಯತೆ ಇದೆ. ಕಾಫಿ ಬೆಳೆಗಾರರು ಕೂಡ ಕೃಷಿಗೆ ಕೊಡುಗೆ ನೀಡುತ್ತಿದ್ದು ಸರ್ಕಾರದ ನಿರ್ಧಾರದಿಂದ ಬೆಳೆಗಾರರಿಗೂ ಅನುಕೂಲ ವಾಗುತ್ತದೆ ಎಂದರು.
- ಕೋವರ್ ಕೊಲ್ಲಿ ಇಂದ್ರೇಶ್