ಮಡಿಕೇರಿ, ಜ. ೩೦: ದಕ್ಷಿಣ ಕೊಡಗಿನ ಟೇಬಲ್ ಟೆನ್ನಿಸ್ ಆಟಗಾರರಿಗೆ ವೀರಾಜಪೇಟೆ ಅಕಾಡೆಮಿ ಆಫ್ ಟೇಬಲ್ ಟೆನ್ನಿಸ್ ಸಂಸ್ಥೆಯಿAದ ಪಂದ್ಯಾಟ ಆಯೋಜಿಸಲಾಗಿತ್ತು ವೀರಾಜಪೇಟೆಯ ನಿಖಿಲ್ ರಾಮಮೂರ್ತಿ ಪ್ರಾಯೋಜಿಸಿದ್ದ ಪಂದ್ಯಾವಳಿಯನ್ನು ಹಿರಿಯ ವಕೀಲ ಎಸ್.ಆರ್. ಜಗದೀಶ್ ಉದ್ಘಾಟಿಸಿದರು. ಪಂದ್ಯಾವಳಿಯಲ್ಲಿ ೧೯ ಆಟಗಾರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಆಯೋಜಕರಾದ ನಿಖಿಲ್ ರಾಮಮೂರ್ತಿ, ದಕ್ಷಿಣ ಕೊಡಗಿವಲ್ಲಿ ಟೇಬಲ್ ಟೆನ್ನಿಸ್ ಪಂದ್ಯಾಟಕ್ಕೆ ಪ್ರೋತ್ಸಾಹ ನೀಡಲು ಮತ್ತು ಆಟಗಾರರಿಗೆ ಸೂಕ್ತ ಅವಕಾಶ ನೀಡಲು ಈ ಪಂದ್ಯಾವಳಿ ಆಯೋಜಿಸಲಾಗಿದ್ದು ಅನೇಕ ಯುವ ಆಟಗಾರರು ಮುಂದಿನ ದಿನಗಳಲ್ಲಿ ಇದರಿಂದ ಸ್ಫೂರ್ತಿ ಪಡೆಯುವಂತಾಗಲಿ ಎಂದು ಆಶಿಸಿದರು.
ಟೆನ್ನಿಸ್ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಡೇರಿಕ್ ಡಿಸೋಜಾ ಪ್ರಥಮ, ಪೊನ್ನಂಪೇಟೆಯ ಈಶ್ವರ್ ದ್ವಿತೀಯ ಸ್ಥಾನ ಗಳಿಸಿದರು. ವಿಜೇತರಿಗೆ ವೀರಾಜಪೇಟೆಯ ವಕೀಲರಾದ ಸಿಂಧೂರ ಎನ್. ಸ್ವಾಮಿ ಬಹುಮಾನ ವಿತರಿಸಿದರು.