ಕೋವರ್ ಕೊಲ್ಲಿ ಇಂದ್ರೇಶ್

ತಿರುವನAತಪುರ, ಜ. ೩೦: ಕೇರಳ ರಾಜ್ಯದ ಅಲಪ್ಪಿಯಲ್ಲಿ ರಾಜ್ಯ ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ೧೫ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಈ ಎಲ್ಲ ಅಪರಾಧಿಗಳೂ ನಿಷೇಧಿತ ಪಿಎಫ್‌ಐ ಸಂಘಟನೆಯ ಸದಸ್ಯರಾಗಿದ್ದು, ೧೫ ಸದಸ್ಯರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಲಯ ಎಲ್ಲ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಳೆದ ೨೦೨೧ರ ಡಿಸೆಂಬರ್ ೧೯ ರಂದು ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸ್ ಅವರನ್ನು ಅವರ ಮನೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿತ್ತು. ರಂಜಿತ್ ಅವರ ತಾಯಿ, ಪತ್ನಿ ಹಾಗೂ ಮಗುವಿನ ಎದುರಲ್ಲೇ ದುಷ್ಕರ್ಮಿಗಳು ಕೊಚ್ಚಿ ಕೊಂದಿದ್ದರು. ರಂಜಿತ್ ಶ್ರೀನಿವಾಸ್ ಅವರು ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆಗಿದ್ದರು. ಈ ಪ್ರಕರಣದ ಕುರಿತಾಗಿ ಸಮಗ್ರ ವಿಚಾರಣೆ ನಡೆಸಿದ್ದ ಮವೆಲ್ಲಿಕಾರಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜನವರಿ ೨೦ ರಂದು ತೀರ್ಪು ನೀಡಿ ಬಂಧಿತ ಎಲ್ಲ ಆರೋಪಿಗಳನ್ನೂ ದೋಷಿಗಳು ಎಂದು ತೀರ್ಪು ನೀಡಿತ್ತು. ಇದೀಗ ಜನವರಿ ೩೦ರಂದು ನ್ಯಾಯಾಲಯ ಎಲ್ಲ ಅಪರಾಧಿಗಳಿಗೂ ಗಲ್ಲು ಶಿಕ್ಷೆ ವಿಧಿಸಿದೆ.

ವಿಚಾರಣೆ ವೇಳೆ ಒಟ್ಟು ೧೫೬ ಪ್ರಾಸಿಕ್ಯೂಷನ್ ಸಾಕ್ಷಿಗಳು ತಮ್ಮ ಹೇಳಿಕೆಯನ್ನು ನ್ಯಾಯಾಧೀಶರಾದ ವಿ.ಜಿ. ಶ್ರೀದೇವಿ ಅವರ ಮುಂದೆ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬAಧಿಸಿದAತೆ ಪ್ರಾಸಿಕ್ಯೂಷನ್ ತಂಡವು ಸರಿಸುಮಾರು ೧,೦೦೦ ದಾಖಲೆಗಳು ಮತ್ತು ೧೦೦ ವಸ್ತುಗಳನ್ನು ಸಾಕ್ಷö್ಯವಾಗಿ ಸಲ್ಲಿಸಿದೆ.

ಮೃತ ರಂಜಿತ್ ಶ್ರೀನಿವಾಸ್ ಅವರ ಕುಟುಂಬ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರತಾಪ್ ಜಿ ಪಡಿಕ್ಕಲ್, ವಕೀಲರಾದ ಶ್ರೀದೇವಿ ಪ್ರತಾಪ್, ಶಿಲ್ಪಾ ಶಿವನ್ ಮತ್ತು ಹರೀಶ್ ಕಟ್ಟೂರ್ ಅವರು ವಿಚಾರಣೆಯ ಉದ್ದಕ್ಕೂ ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದರು. "ಎಲ್ಲ ೧೫ ಮಂದಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿದ ನ್ಯಾಯಾಲಯದ ತೀರ್ಪಿನಿಂದ ನಾವು ತೃಪ್ತರಾಗಿದ್ದೇವೆ. ಅವರೆಲ್ಲರಿಗೂ ಗರಿಷ್ಠ ಶಿಕ್ಷೆಯಾಗುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ರಂಜಿತ್ ಅವರ ತಾಯಿ ವಿನೋದಿನಿ (೭೧) ಹೇಳಿದ್ದರು.

ಸುಮಾರು ಎರಡು ವರ್ಷಗಳ ಹಿಂದೆ ಬಿಜೆಪಿಯ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸ್ ಹತ್ಯೆಗೆ ಸಂಬAಧಿಸಿದ ಆರೋಪ ಪಟ್ಟಿಯಲ್ಲಿ ಪೊಲೀಸರು ೧೨ ಕೊಲೆಗಡುಕರು ಸೇರಿದಂತೆ ೧೫ ಜನರನ್ನು ವಿಚಾರಣೆಗೆ ಒಳಪಡಿಸಿದ್ದರು. ವಕೀಲರಾಗಿದ್ದ ರಂಜಿತ್ ಅವರನ್ನು ಡಿಸೆಂಬರ್ ೧೯, ೨೦೨೧ ರಂದು ಅಲಪ್ಪುಳದ ವೆಲ್ಲಕಿನಾರ್‌ನಲ್ಲಿರುವ ಅವರ ಮನೆಗೆ ಬೆಳಿಗ್ಗೆ ೬.೩೦ ಘಂಟೆಗೆ ಅಕ್ರಮ ಪ್ರವೇಶ ಮಾಡಿದ ಅಪರಾಧಿಗಳು ಅವರನ್ನು ಹಾಸಿಗೆಯಲ್ಲಿದ್ದಾಗಲೇ ೫೬ಕ್ಕೂ ಹೆಚ್ಚು ಮಚ್ಚಿನೇಟು ಹೊಡೆದು ಹತ್ಯೆ ಮಾಡಿದ್ದರು. ಅವರ ಮುಖವು ಗುರುತಿಸಲಾಗದಷ್ಟು ಛಿದ್ರಗೊಂಡಿತ್ತು.

ಪೊಲೀಸರ ಚಾರ್ಜ್ಶೀಟ್ ಪ್ರಕಾರ, ರಂಜಿತ್ ಹತ್ಯೆಯು ಹಿಂದಿನ ದಿನದ ರಾತ್ರಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್. ಶಾನ್ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಎಸ್‌ಡಿಪಿಐ ಕಾರ್ಯಕರ್ತರು ನಡೆಸಿದ ಪ್ರತೀಕಾರದ ಹತ್ಯೆ ಆಗಿದೆ. ಈ ಮೊದಲು ವಯಲಾರ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತ ಆರ್. ನಂದುಕೃಷ್ಣ ಹತ್ಯೆಯಾಗಿತ್ತು. ಅದಕ್ಕೆ ಪ್ರತೀಕಾರವಾಗಿ ಶಾನ್ ಹತ್ಯೆ ಆಗಿತ್ತು ಎನ್ನಲಾಗಿದೆ.

ಶಾನ್ ಮತ್ತು ರಂಜಿತ್ ಇಬ್ಬರೂ ೨೦೧೬ರ ವಿಧಾನಸಭಾ ಚುನಾವಣೆಯಲ್ಲಿ ಕ್ರಮವಾಗಿ ಅಂಬಲಪ್ಪುಳ ಮತ್ತು ಆಲಪ್ಪುಳ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಮೃತ ರಂಜಿತ್ ಅವರು ಅಲಪ್ಪುಳ ಬಾರ್ ಕೌನ್ಸಿಲ್‌ನಲ್ಲಿ ವಕೀಲರಾಗಿದ್ದರು. ಅಲಪ್ಪುಳ ಬಾರ್ ಕೌನ್ಸಿಲ್ ತೀರ್ಮಾನ ತೆಗೆದುಕೊಂಡಿದ್ದು ಆ ಮೇರೆಗೆ ವಕೀಲರು ಆರೋಪಿಗಳ ಪರವಾಗಿ ವಾದಿಸಲು ನಿರಾಕರಿಸಿದ್ದರು. ನಂತರ ಹೈಕೋರ್ಟ್ ಆದೇಶದ ಮೇರೆ ಪ್ರಕರಣದ ವಿಚಾರಣೆಯನ್ನು ಅಲಪ್ಪುಳದಿಂದ ಮಾವೆಲಿಕ್ಕರ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಅಲ್ಲದೆ ಆರೋಪಿಗಳನ್ನು ಪ್ರತಿನಿಧಿಸುವ ವಕೀಲರು ಯಾವುದೇ ಭಯವಿಲ್ಲದೆ ಪ್ರಕರಣವನ್ನು ನಡೆಸುವುದನ್ನು ಖಚಿತಪಡಿಸುವಂತೆ ಅಲಪ್ಪುಳ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತ್ತು.

ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್. ಶಾನ್ ಅವರ ಹತ್ಯೆ ಹಿನ್ನೆಲೆಯಲ್ಲಿ ದ್ವೇಷ ತೀರಿಸಿಕೊಳ್ಳಲು ಮುಂದಾದ ಪಿಎಫ್‌ಐ ಕಾರ್ಯಕರ್ತರು, ರಂಜಿತ್ ಶ್ರೀನಿವಾಸನ್ ಅವರ ಮೇಲೆ ಮಚ್ಚು, ಲಾಂಗ್‌ಗಳಿAದ ಧಾಳಿ ಮಾಡಿ ಭೀಕರವಾಗಿ ಕೊಲೆ ಮಾಡಿದ್ದರು ಎಂದು ಸರ್ಕಾರಿ ವಕೀಲರು ವಾದಿಸಿದ್ದರು.

ಅಪರಾಧಿಗಳಾದ ನವಾಜ್, ಅನೂಪ್, ಸಫಾರುದ್ದೀನ್, ಮುನ್ಶಾದ್, ಮೊಹಮ್ಮದ್ ಅಸ್ಲಂ, ಸಲಾಂ ಪೊನ್ನಾದ್, ಶಮೀರ್, ನಸೀರ್, ಜಾಕೀರ್ ಹುಸೇನೆ, ಜಸೀಬ್ ರಾಜಾ, ಶಾಜಿ ಪೂವತಿನ್ಕಲ್, ಶೆರ್ನಾಜ್ ಅಶ್ರಫ್, ನಿಜಾಂ, ಅಜ್ಮಲ್ ಹಾಗೂ ಅಬ್ದುಲ್ ಕಲಾಂ ಗಲ್ಲು ಶಿಕ್ಷೆಗೆ ಗುರಿಯಾದವರು. ಈ ಮುನ್ನ ಈ ಕೃತ್ಯದಲ್ಲಿ ೮ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ನ್ಯಾಯಾಲಯ ಸಮಗ್ರ ವಿಚಾರಣೆ ನಡೆಸಿ ಎಲ್ಲಾ ೧೫ ಅಪರಾಧಿಗಳನ್ನೂ ದೋಷಿಗಳು ಎಂದು ಪರಿಗಣಿಸಿದೆ. ರಂಜಿತ್ ಶ್ರೀನಿವಾಸನ್ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದ ಅಪರಾಧಿಗಳು, ಕೊಲೆ ಮಾಡುವ ಸಲುವಾಗಿಯೇ ಸಂಚು ರೂಪಿಸಿದ್ದರು ಎಂದು ನ್ಯಾಯಾಲಯ ಹೇಳಿದೆ. ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಕೇರಳ ರಾಜ್ಯಾದ್ಯಂತ ಸೂಕ್ಷö್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ನ್ಯಾಯಾಲಯ ತೀರ್ಪು ನೀಡುವಾಗಲೂ ಕೋರ್ಟ್ ಬಳಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿತ್ತು.