ವೀರಾಜಪೇಟೆ, ಜ. ೩೦: ಭಾಷೆಯೆಂಬುದು ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮವಾಗಿದೆ. ನಾವು ಹೇಗೆ ಮಾತನಾಡಬೇಕು ಎನ್ನುವುದು ಬಹಳ ಮುಖ್ಯವಾದುದು. ಆಂಗ್ಲ ಭಾಷೆಯು ಬಹಳ ಪ್ರಮುಖ ಭಾಷೆಯಾಗಿದ್ದು ಈಗ ಸರಕಾರಿ ಶಾಲೆಗಳಲ್ಲಿ ಒಂದನೆಯ ತರಗತಿಯಿಂದಲೇ ಆಂಗ್ಲ ಭಾಷೆಯ ಕಲಿಕೆಯನ್ನು ಆರಂಭಿಸಲಾಗುತ್ತದೆ. ವ್ಯಕ್ತಿಯ ಆತ್ಮವಿಶ್ವಾಸವನ್ನು ಆಂಗ್ಲ ಭಾಷೆಯು ಬೆಳೆಸುತ್ತದೆ ಎಂದು ಬಿ.ಎಸ್. ಚೇತನಾ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಅರಮೇರಿ-ಕಳಂಚೇರಿ ಮಠದಲ್ಲಿ ಮಾಸಿಕ ತತ್ವ ಚಿಂತನಾಗೋಷ್ಠಿ ೨೧೫ ರ ಕಾಯಕ್ರಮದಲ್ಲಿ ಮುಖ್ಯ ಉಪನ್ಯಾಸಕಿಯಾಗಿ “ಆಂಗ್ಲ ಭಾಷೆ ಹಾಗೂ ಪ್ರಸಕ್ತ ಕಾಲದಲ್ಲಿ ಅದರ ಮಹತ್ವ” ಎಂಬ ವಿಷಯದ ಬಗ್ಗೆ ಮಾತಾನಾಡಿದ ಅವÀರು, ಅಂರ್ರಾಷ್ಟಿçÃಯ ಮಟ್ಟದಲ್ಲಿ ಉದ್ಯೋಗವನ್ನು ಅರಸುವವರಿಗೆ ಆಂಗ್ಲ ಭಾಷೆಯಲ್ಲಿ ಉತ್ತಮ ಹಿಡಿತವಿರಬೇಕು, ಅನ್ಯಭಾಷಿಕ ರೊಂದಿಗೆ ಸಂವಹನವನ್ನು ಮಾಡಲು ಇಂಗ್ಲಿಷ್ ಭಾಷೆಯು ಬಲುಮುಖ್ಯ ಎಂದರು. ಕಾರ್ಯಕ್ರಮದ ಉದ್ಘಾಟಕ ವಕೀಲ ಚೆನ್ನಬಸವಯ್ಯ ಅವರು ಮಾತೃಭಾಷೆಯ ಜೊತೆಗೆ ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಅಭ್ಯಾಸ ಮಾಡುವುದರಿಂದ ಭವಿಷ್ಯವನ್ನು ಉಜ್ವಲಗೊಳಿಸಬಹುದು ಎಂದರು.
ಅರಮೇರಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಅವರು ಮಾತಾನಾಡಿ, ಈಗಿನ ಕಾಲಕ್ಕೆ ತಕ್ಕಂತೆ ಆಂಗ್ಲ ಭಾಷೆಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ ಎಂದು ವಿಶ್ಲೇಷಿಸಿದರು. ಡಾ. ನರಸಿಂಹನ್ ಅವರು ವಿಶ್ವದ ಎಲ್ಲ ಕಡೆಯಲ್ಲಿಯೂ ನಿರೀಕ್ಷಿತ ಮಟ್ಟಕ್ಕಿಂತಲೂ ವೇಗವಾಗಿ ಇಂಗ್ಲಿಷ್ ಭಾಷೆಯು ಬೆಳೆಯುತ್ತಿರುವುದರ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಜ್ಯೋತಿ ಪ್ರಾರ್ಥನೆಯನ್ನು ಮಾಡಿದರೆ, ಶ್ರೀಕಾಂತರಾವ್ ಸ್ವಾಗತಿಸಿ, ನಿರೂಪಿಸಿ, ಆಹ್ವಾನಿತರನ್ನು ವಂದಿಸಿದರು.